ಸಮಾನತೆಯ ಹರಿಕಾರ ಬಸವಣ್ಣ: ರುದ್ರಣ್ಣ

KannadaprabhaNewsNetwork |  
Published : Apr 21, 2026, 04:15 AM IST
ಕಕಕಕಕಕ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬೆಳಗಾವಿ ಬಸವಣ್ಣನವರು ಸಮಾನತೆಯ ಹರಿಕಾರರಾಗಿದ್ದು, ಅವರು ಹಾಕಿಕೊಟ್ಟ ಮಾರ್ಗಗಳು ಇಂದಿಗೂ ಪ್ರಸ್ತುತವಾಗಿವೆ. ಇದಕ್ಕೆ ಕಾರಣ ಅವರು ನುಡಿದಂತೆ ನಡೆದವರು. ಸಮಾಜವನ್ನು ಸನ್ಮಾರ್ಗದತ್ತ ಕೊಂಡೊಯ್ದವರು. ಹೀಗಾಗಿ ಅವರನ್ನು ಕೇವಲ ಜನ್ಮದಿನದಂದು ಮಾತ್ರ ಸ್ಮರಿಸದೇ ಸದಾ ಸ್ಮರಣಿಸಬೇಕು ಎಂದು ಉದ್ಯಮಿ ಹಾಗೂ ಬಿಜೆಪಿ ಮುಖಂಡ ರುದ್ರಣ್ಣ ಚಂದರಗಿ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಬಸವಣ್ಣನವರು ಸಮಾನತೆಯ ಹರಿಕಾರರಾಗಿದ್ದು, ಅವರು ಹಾಕಿಕೊಟ್ಟ ಮಾರ್ಗಗಳು ಇಂದಿಗೂ ಪ್ರಸ್ತುತವಾಗಿವೆ. ಇದಕ್ಕೆ ಕಾರಣ ಅವರು ನುಡಿದಂತೆ ನಡೆದವರು. ಸಮಾಜವನ್ನು ಸನ್ಮಾರ್ಗದತ್ತ ಕೊಂಡೊಯ್ದವರು. ಹೀಗಾಗಿ ಅವರನ್ನು ಕೇವಲ ಜನ್ಮದಿನದಂದು ಮಾತ್ರ ಸ್ಮರಿಸದೇ ಸದಾ ಸ್ಮರಣಿಸಬೇಕು ಎಂದು ಉದ್ಯಮಿ ಹಾಗೂ ಬಿಜೆಪಿ ಮುಖಂಡ ರುದ್ರಣ್ಣ ಚಂದರಗಿ ಹೇಳಿದರು.

ನಗರದ ಎಚ್‌.ಡಿ.ಕುಮಾರಸ್ವಾಮಿ ಬಡಾವಣೆಯ ರಹವಾಸಿ ಸಂಘದಿಂದ ಸೋಮಮವಾರ ನಡೆದ ಶಿವ ಮತ್ತು ಬಸವಣ್ಣನವರ ಜಯಂತಿಯಲ್ಲಿ ಅವರು ಮಾತನಾಡಿದರು. ಸಾಮಾಜಿಕ ಆರ್ಥಿಕತೆಯ ಸರಿದೂಗಿಸಲು ಕಾಯಕವೇ ಪ್ರಧಾನವಾಗಿರಬೇಕೆಂದು ಬಯಸಿದ್ದ ಬಸವಣ್ಣನವರು ಕಾಯಕವೇ ಕೈಲಾಸವೆಂದು ಬಲವಾಗಿ ನಂಬಿದ್ದರು. ಅದರಂತೆಯೇ ನಡೆದರು. ಇತರರನ್ನೂ ಅದೇ ಮಾರ್ಗದಲ್ಲಿ ಕರೆದುಕೊಂಡು ಹೋದರು ಎಂದು ಹೇಳಿದರು.

ಜಾತಿ ಪದ್ಧತಿ ಹೆಚ್ಚಾಗಿದ್ದ ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರ ತತ್ವಗಳು, ಇತರರಿಗೂ ಮಾದರಿಯಾದವು. 12ನೇ ಶತಮಾನದಲ್ಲಿ ಅನುಭವ ಮಂಟಪ ಮೂಲಕ ಎಲ್ಲಾ ವರ್ಗದವರ ಧ್ವನಿಯಾಗಲು ಜಾಗತಿಕ ಮಟ್ಟದಲ್ಲಿ ಸಂಸದೀಯ ವ್ಯವಸ್ಥೆ ರೂಪಿಸಿ, ಮನುಕುಲದ ಮಹಾ ಮಾನವತಾವಾದಿಯಾದರು. ದಾಸೋಹ ತತ್ವ, ಸಾಮಾಜಿಕ ಸಮಾನತೆಯ ಪರಿಕಲ್ಪನೆ ನೀಡಿದವರು ಎಂದರು.

ಇಡೀ ವಿಶ್ವಕ್ಕೆ ಕಾಯಕ ತತ್ವ ಸಾರಿದ ಶ್ರೇಷ್ಠ ಮಾನವತಾವಾದಿ ಬಸವಣ್ಣನವರ ಬದುಕಿನ ಅಧ್ಯಯನ ಇಂದಿನ ಅಗತ್ಯವಾಗಿದೆ. ನಮ್ಮ ಯುವ ಪೀಳಿಗೆಗೆ ಅವರ ಚಿಂತನೆಗಳನ್ನು ತಿಳಿಸಿಕೊಡುವ ಕಾರ್ಯ ನಾವೆಲ್ಲರೂ ಮಾಡಬೇಕಿದೆ. ಸಮ ಸಮಾಜದ ನಿರ್ಮಾಣಕ್ಕೆ ಶ್ರಮಿಸಿದ ವಿಶ್ವದ ಮಹಾನ್ ಚೇತನ. ಹೀಗಾಗಿ ಅವರನ್ನು ಒಂದು ಜಾತಿಗೆ ಸೀಮಿತಗೊಳಿಸುವುದು ಬೇಡ ಎಂದು ಹೇಳಿದರು.ಸುಮಾರು 17ನೇ ಶತಮಾನದಲ್ಲಿ ಹಿಂದೂ ಸಂಸ್ಕೃತಿ ನಶಿಸಿ ಹೋಗುತ್ತಿರುವ ಸಂದರ್ಭದಲ್ಲಿ ಶಿವಾಜಿ ಮಹಾರಾಜರು ಮತ್ತೆ ಅದನ್ನು ಮರು ಸ್ಥಾಪಿಸುವ ಮೂಲಕ ದೇಶಕ್ಕೆ ಉತ್ತಮ ಕೊಡುಗೆಯನ್ನು ನೀಡಿದ್ದಾರೆ. ಅವರು ದೂರದೃಷ್ಟಿತ್ವ, ಶೌರ್ಯ ಮತ್ತು ನಾಯಕತ್ವಕ್ಕೆ ಮಹಾಸಾಕ್ಷಿಯಾದವರು. ಜತೆಗೆ ಅವರ ಪ್ರಗತಿಪರ ನೀತಿಗಳು ಮತ್ತು ದಕ್ಷ ಆಡಳಿತ ಇಂದಿಗೂ ಸ್ಮರಣೀಯವಾಗಿವೆ ಎಂದು ಹೇಳಿದರು.

ಈ ವೇಳೆ ಶಿವಪುತ್ರಪ್ಪ ಗಂಗಾಪುರ, ಮಲ್ಲಿಕಾರ್ಜುನ ರೊಟ್ಟಿ, ಲಕ್ಷ್ಮಣ ಅಕ್ಕೆನವರ, ಮಹಾದೇವ ಭೀಮನಾಯಕ, ಶಿವಪುತ್ರ ಪಟಕಳ, ವಿರುಪಾಕ್ಷಿ ನಿರಲಗಿಮಠ, ಶೋಭಾ ಹೊಸಮಠ, ಸುಧಾ ರೊಟ್ಟಿ ಮತ್ತು ಮಹಿಳಾ ಮಂಡಳ ಸದಸ್ಯರು ಸೇರಿದಂತೆ ಇತರರಿದ್ದರು.

ಬಸವ ಜಯಂತಿ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಎಚ್‌.ಡಿ.ಕುಮಾರಸ್ವಾಮಿ ಲೇಔಟ್‌ನಲ್ಲಿರುವ ಮಹಿಳೆಯರು ಶಿವ ಮಂದಿರದಲ್ಲಿ ತೊಟ್ಟಿಲು ತೂಗುವ ಮೂಲಕ ಬಸವಣ್ಣನವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.------

ಕೋಟ್‌....

ಸಮಾನತೆ, ಕಾಯಕ, ಮಾನವೀಯತೆ, ಅನುಭವ ಮಂಟಪದಂಥ ಶ್ರೇಷ್ಠ‌ ಸಿದ್ಧಾಂತ ನೀಡಿದ್ದಾರೆ. ಎಲ್ಲ‌ ಕಾಯಕದ ಜನರನ್ನು ಸೇರಿಸಿ ಅನುಭವ ಮಂಟಪ ರಚಿಸಿದ್ದರು. ಈ ಮೂಲಕ ಮಾನವೀಯತೆಯೇ ಶ್ರೇಷ್ಠ ಎಂದು ಸಾರಿದ್ದಾರೆ. ಅವರ ಬಸವ ಸಂಸ್ಕೃತಿ ಸದಾ ಮಾದರಿಯಾಗಿದೆ.

- ರುದ್ರಣ್ಣ ಚಂದರಗಿ, ಉದ್ಯಮಿ ಹಾಗೂ ಬಿಜೆಪಿ ಮುಖಂಡ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸವದತ್ತಿಯ ಅಗಸ್ತ್ಯ ತಂಡಕ್ಕೆ ಬೈಲಹೊಂಗಲ ಚಾಂಪಿಯನ್ಸ್ ಟ್ರೋಫಿಬೈಲಹೊಂಗಲ ಬೈಲಹೊಂಗಲ ಚಾಂಪಿಯನ್ಸ್ ಟ್ರೋಫಿ–2026 ಸೀಜನ್-1
ಭಕ್ತರಿಗೆ ಸೋಮನಾಥ ಜ್ಯೋತಿರ್ಲಿಂಗದ ದರ್ಶನ