ಗದಗ: ಮನುಷ್ಯರೆಲ್ಲ ಒಂದೇ ಎಂದು ಸಾರಿ ವ್ಯಕ್ತಿ ಕಲ್ಯಾಣದ ಜತೆಗೆ ಸಮಾಜ ಕಲ್ಯಾಣದ ಚಿಂತನೆಗಳನ್ನು ಬಿತ್ತಿ ಆಚರಣೆ ಪ್ರಧಾನ ಸಿದ್ಧಾಂತವನ್ನು ವಿಶ್ವಗುರು ಬಸವಣ್ಣನವರು ರೂಪಿಸಿದರು. ಪ್ರಜಾಪ್ರಭುತ್ವದ ಸಂಕೇತವಾಗಿದ್ದ ಅನುಭವ ಮಂಟಪದ ಮೂಲಕ ವಚನ ಸಾಹಿತ್ಯದ ಬೆಳವಣಿಗೆಗೆ ಕಾರಣರಾದರು ಎಂದು ಜಿಲ್ಲಾ ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಸುಧಾ ಹುಚ್ಚಣ್ಣವರ ತಿಳಿಸಿದರು.
ವಿಶ್ವಮಾನ್ಯ ಚಿಂತನೆಗಳನ್ನು ಒಳಗೊಂಡಿರುವ ವಚನಗಳನ್ನು ಓದಿ ಅರ್ಥೈಸಿಕೊಂಡು, ಆಚರಣೆಗೆ ತರುವ ಮೂಲಕ ಬಸವಾದಿ ಶರಣರ ಚಿಂತನೆಗಳನ್ನು ಸಾಕಾರಗೊಳಿಸಬೇಕಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ, ಪತ್ರಕರ್ತ ಶಿವಾನಂದ ಹಿರೇಮಠ, ಡಾ. ಸಹನಾ ಪಿಳ್ಳಿ ಮಾತನಾಡಿದರು. ಸುರೇಖಾ ಪಿಳ್ಳಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಡಾ. ದತ್ತಪ್ರಸನ್ನ ಪಾಟೀಲ ನಿರೂಪಿಸಿದರು. ರಾಹುಲ ಗಿಡ್ನಂದಿ ಸ್ವಾಗತಿಸಿದರು. ಡಿ.ಎಸ್. ಬಾಪುರಿ ವಂದಿಸಿದರು. ಕಾರ್ಯಕ್ರಮದಲ್ಲಿ ಕೆ.ಎಚ್. ಬೇಲೂರ, ಜಿ.ಬಿ. ಪಾಟೀಲ, ಅನ್ನದಾನಿ ಹಿರೇಮಠ, ಶಂಕರಪ್ಪ ಗಾಂಜಿ, ರಶ್ಮಿ ಅಂಗಡಿ, ಅಮರೇಶ ರಾಂಪೂರ, ಶೈಲಜಾ ಗಿಡ್ನಂದಿ, ಸಿ.ಎಂ. ಮಾರನಬಸರಿ, ಜಯಶ್ರೀ ಪಟ್ಟಣಶೆಟ್ಟಿ, ಬಿ.ಬಿ. ಹೊಳಗುಂದಿ, ಅಶೋಕ ಸತ್ಯರೆಡ್ಡಿ, ಭಾರತಿ ಕೋಟಿ, ಅಶೋಕ ಅಂಗಡಿ, ಕಲ್ಲೇಶ ಮೂರಶಿಳ್ಳಿನ, ಜೆ.ಎ. ಪಾಟೀಲ, ಈಶ್ವರಪ್ಪ ಕುಬುಸದ, ರಾಜಶೇಖರ ದಾನರಡ್ಡಿ, ನಿರ್ಮಲಾ ಪಾಟೀಲ, ವಿಜಯಲಕ್ಷ್ಮಿ ಕುಬುಸದ, ರಕ್ಷಿತಾ ಗಿಡ್ನಂದಿ, ಅಶೋಕ ಸುತಾರ, ಎಸ್.ಸಿ. ಹಾಲಕೇರಿ, ಎಸ್.ಎಂ. ಗುಳಗುಳಿ, ಐ.ಎಸ್. ಕುಪ್ಪಸದ, ಶಶಿಕಾಂತ ಕೊರ್ಲಹಳ್ಳಿ, ಜಯಶ್ರೀ ಅಂಗಡಿ, ಸತೀಶ ಕುಲಕರ್ಣಿ, ಕಿರಣ ಗುಗ್ಗರಿ, ರಾಮಚಂದ್ರ ಹಂಸನೂರ, ಶೈಲಾ ಕೊಡೆಕಲ್, ಎಂ.ಎಸ್. ಪಿಳ್ಳಿ, ಲಲಿತಾ ಪಿಳ್ಳಿ, ಮಧು ಕುರ್ಲಿ, ಗೌರದೇವಿ ಕುರ್ಲಿ, ಗಿರಿಜಾ ಮೂರಶಿಳ್ಳಿನ, ರೇಣುಕಾ ಹಂಸನೂರ, ಮಲ್ಲಿಕಾರ್ಜುನ ನಿಂಗೋಜಿ, ಶಾಂತಲಾ ಹಂಚಿನಾಳ, ಕೆ.ಜಿ. ವ್ಯಾಪಾರಿ ಮೊದಲಾದವರು ಉಪಸ್ಥಿತರಿದ್ದರು.