ಕನ್ನಡಪ್ರಭ ವಾರ್ತೆ ಬೈಲಹೊಂಗಲ
ಪಟ್ಟಣದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಕ್ರಿಯಾಶೀಲ ಸ್ವಾಭಿಮಾನಿ ಗೆಳೆಯರ ಬಳಗದಿಂದ ನಡೆದ ವಿಶ್ವಗುರು ಬಸವೇಶ್ವರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಬಸವೇಶ್ವರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪಾನಕ ವಿತರಣೆಗೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರಸ್ತುತ ಸಮಾಜದಲ್ಲಿ ಧರ್ಮಗಳ ನಡುವೆ ಅಶಾಂತಿ ಉಂಟಾಗುತ್ತಿದ್ದು, ದಯವೇ ಧರ್ಮದ ಮೂಲವಯ್ಯ ಎಂಬ ಬಸವಣ್ಣನ ತತ್ವ ಪಾಲಿಸಿದರೇ ಸಾಮರಸ್ಯದ ಜೀವನ ತಮ್ಮದಾಗಿಸಿಕೊಳ್ಳಬೇಕು ಎಂದು ತಿಳಿಸಿದರು.
ಧಾರ್ಮಿಕ ದತ್ತಿ ಇಲಾಖೆ ನಿರ್ದೆಶಕ ಮಹಾಂತಯ್ಯಶಾಸ್ತ್ರೀ ಆರಾದ್ರಿಮಠ ಮಾತನಾಡಿ, ಅಸಮಾನತೆಯಲ್ಲಿ ತೊಳಲಾಡುತ್ತಿದ್ದ ಸಮಾಜದಲ್ಲಿ ಸಮಾನತೆಯನ್ನು ೧೨ನೇ ಶತಮಾನದಲ್ಲಿಯೇ ಸಾರಿದ ಕೀರ್ತಿ ಬಸವೇಶ್ವರಿಗೆ ಸಲ್ಲುತ್ತದೆ ಎಂದರು.ಪತ್ರಕರ್ತ ಬಸವರಾಜ ಕಲಾದಗಿ ಪಾನಕ ಸೇವೆ ಮಾಡಿದರು. ಕ್ರೀಯಾಶೀಲ ಸ್ವಾಭಿಮಾನಿ ಗೆಳೆಯರ ಬಳಗದಿಂದ ಗುರು ಬಸವೇಶ್ವರ ಬೃಹತ್ ಭಾವಚಿತ್ರದ ಕಟೌಟ್ ಹಾಕಿ ಬೃಹತ್ ಹೂವಿನ ಮಾಲೆ, ಸಾರ್ವಜನಿಕರಿಗೆ ಸಿಹಿ ವಿತರಿಸಲಾಯಿತು. ವೀರೇಶ ಹಲಕಿ ಪ್ರಾರ್ಥನೆ ಸಲ್ಲಿಸಿದರು.
ಗೆಳೆಯರ ಬಳಗದ ಸದಸ್ಯರಾದ ಮಂಜುನಾಥ ಜ್ಯೋತಿ, ಈರಪ್ಪ ಕಾಡೇಶನವರ, ಈರಣ್ಣ ಮೇಲಿಕಟ್ಟಿ, ರವಿ ವನ್ನೂರ, ರಾಜು ದಳವಾಯಿ, ಸಂಗಮೇಶ ರೇಶ್ಮಿ, ಶರೀಫ ನದಾಫ, ರವಿ ಹುಲಕುಂದ, ಗುರು ಕಡತಾಳ, ಶಿವು ಬಿಸನಕೊಪ್ಪ, ಸಾಯಿನಾಥ ನಾಯ್ಕ ಬಸವೇಶ್ವರ ಜಯಂತಿ ಆಚರಣೆ ಸಂಘಟಿಸಿ ಯಶಸ್ವಿಗೊಳಿಸಿದರು.