ಜಾತೀಯತೆ ತೊಡೆಯಲು ಬಸವಣ್ಣನ ವಚನಗಳು ಪ್ರೇರಣೆ :ಸಿ.ಟಿ. ರವಿ

KannadaprabhaNewsNetwork |  
Published : May 12, 2024, 01:18 AM IST
ಚಿಕ್ಕಮಗಳೂರಿನ ಬಿಜೆಪಿ ಕಚೇರಿಯಲ್ಲಿ ವಿಶ್ವಗುರು ಬಸವೇಶ್ವರ ಜಯಂತಿ ಕಾರ್ಯಕ್ರಮದ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಸಿ.ಟಿ. ರವಿ, ದೇವರಾಜ್‌ ಶೆಟ್ಟಿ, ಪುಷ್ಪರಾಜ್‌ ಇದ್ದರು. | Kannada Prabha

ಸಾರಾಂಶ

ಚಿಕ್ಕಮಗಳೂರು, ಬಸವಣ್ಣನವರು ರಚಿಸಿದ ವಚನಗಳು ಸಮಾಜದಲ್ಲಿರುವ ಅಸಮಾನತೆ, ಜಾತಿಯತೆ ತೊಡೆದು ಹಾಕಲು ಪ್ರೇರಕವಾಗಿದ್ದು, ಇದನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು ಎಂದು ಮಾಜಿ ಸಚಿವ ಸಿ.ಟಿ.ರವಿ ಸಲಹೆ ಮಾಡಿದರು.

ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ವಿಶ್ವಗುರು ಬಸವೇಶ್ವರ ಜಯಂತಿಯಲ್ಲಿ ಪುಷ್ಪನಮನ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಬಸವಣ್ಣನವರು ರಚಿಸಿದ ವಚನಗಳು ಸಮಾಜದಲ್ಲಿರುವ ಅಸಮಾನತೆ, ಜಾತಿಯತೆ ತೊಡೆದು ಹಾಕಲು ಪ್ರೇರಕವಾಗಿದ್ದು, ಇದನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು ಎಂದು ಮಾಜಿ ಸಚಿವ ಸಿ.ಟಿ.ರವಿ ಸಲಹೆ ಮಾಡಿದರು.

ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ವಿಶ್ವಗುರು ಬಸವೇಶ್ವರ ಜಯಂತಿ ಕಾರ್ಯಕ್ರಮದ ಅಂಗವಾಗಿ ಶುಕ್ರವಾರ ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

ಮೂಢನಂಬಿಕೆ, ಕಂದಾಚಾರ, ಸಮಾಜದಲ್ಲಿರುವ ಲೋಪ ದೋಷಗಳನ್ನು ತಿದ್ದುವ ಮೂಲಕ ಅಂದಿನ ಶರಣ ಸಮುದಾಯದ ನೇತೃತ್ವ ವಹಿಸಿದ ಬಸವಣ್ಣನವರ ಕೊಡುಗೆ ಅನನ್ಯವಾದುದು. ಸ್ತ್ರೀ ಅಸಮಾನತೆಯನ್ನು ಖಂಡಿಸಿದ್ದಲ್ಲದೆ ಸ್ತ್ರೀಯರಿಗೂ ಸಮಾತೆಗೆ ಪ್ರೇರೇಪಿಸಿದರು ಎಂದು ತಿಳಿಸಿದರು.ಬಸವಣ್ಣನವರ ವಚನಗಳು ಸಮಾಜದ ಶುದ್ಧಿಯ ಆಂದೋಲನಕ್ಕೆ ಪ್ರೇರೇಪಣೆಯಾಗಿವೆ. ಪ್ರಜಾಪ್ರಭುತ್ವ ಮಾದರಿ ವ್ಯವಸ್ಥೆಯ ಮೂಲವಾದ ಅನುಭವ ಮಂಟಪ ಸ್ಥಾಪಿಸಿ ಜನಸಾಮಾನ್ಯರೆಲ್ಲರೂ ವರ್ಣ, ವರ್ಗ ಭೇಧವಿಲ್ಲದೆ ಒಂದೆಡೆ ಸೇರಿ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಸಮಾನತೆಯ ಸಂಸ್ಕೃತಿಗೆ ಮುನ್ನುಡಿ ಬರೆದವರು ಎಂದರು.ಬಸವಣ್ಣನವರ ತತ್ತ್ವ ಸಿದ್ದಾಂತಗಳು ಇಂದು ಹೆಚ್ಚು ಪ್ರಸ್ತುತವಾಗಿವೆ. 12ನೇ ಶತಮಾನದಲ್ಲಿಯೇ ಬಸವಣ್ಣನವರು ಜಾತಿ ವ್ಯವಸ್ಥೆ, ಮಹಿಳೆಯರ ಸಮಾನತೆಗಾಗಿ ಹೋರಾಡಿದ ಮಹಾ ಪುರುಷ ಎಂದ ಅವರು, ಇಂದಿನ ಯುವಪೀಳಿಗೆ ಅವರ ಆದರ್ಶವನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕಿದೆ ಎಂದು ಹೇಳಿದರು.ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್‌ಶೆಟ್ಟಿ ಮಾತನಾಡಿ, ಸರ್ವ ಸಮಾನತೆ ಹಾಗೂ ಶೋಷಣೆ ರಹಿತ ಸಮಾಜ ನಿರ್ಮಾಣ ಕಾರ್ಯದಲ್ಲಿ ನಿರತರಾದ ಶರಣ ಮಹಾಶಯರು ಆರ್ಥಿಕ ವಿಚಾರಗಳಲ್ಲಿ ಬದಲಾವಣೆ ತಂದು ಗುರುತಿಸಿದವರು ಬಸವಣ್ಣ ನವರು ಎಂದರು.ಕಾರ್ಯಕ್ರಮದಲ್ಲಿ ಬಿಜೆಪಿ ನಗರಾಧ್ಯಕ್ಷ ಕೆ.ಎಸ್.ಪುಷ್ಪರಾಜ್, ಎಸ್ಸಿ ಘಟಕದ ಜಿಲ್ಲಾಧ್ಯಕ್ಷ ಕುರುವಂಗಿ ವೆಂಕಟೇಶ್, ನಗರಸಭೆ ಸದಸ್ಯ ಮಧುಕುಮಾರ್‌ ಅರಸ್, ಮುಖಂಡರಾದ ಸೀತರಾಮಭರಣ್ಯ, ಪ್ರೇಮ್ ಕುಮಾರ್, ಈಶ್ವರಹಳ್ಳಿ ಮಹೇಶ್, ಕಾರ್ಯಾಲಯ ಕಾರ್ಯದರ್ಶಿ ದುರ್ಗೇಶ್, ಬಸವರಾಜ್ ಹಾಜರಿದ್ದರು. 11 ಕೆಸಿಕೆಎಂ 1ಚಿಕ್ಕಮಗಳೂರಿನ ಬಿಜೆಪಿ ಕಚೇರಿಯಲ್ಲಿ ವಿಶ್ವಗುರು ಬಸವೇಶ್ವರ ಜಯಂತಿ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಸಿ.ಟಿ. ರವಿ, ದೇವರಾಜ್‌ ಶೆಟ್ಟಿ, ಪುಷ್ಪರಾಜ್‌ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಲ್‌ಪಿಜಿ ಪೂರೈಕೆ ಸುಧಾರಣೆ: ಸಪ್ಲೈ ಶೇ.20ರಷ್ಟು ಏರಿಕೆ
ಬಾಗಲಕೋಟೆ, ದಾವಣಗೆರೆ ಕ್ಷೇತ್ರಕ್ಕೆ ಏ.9ಕ್ಕೆ ಉಪಸಮರ