ಮನುಕುಲಕ್ಕೆ ಮಾನವೀಯ ಸಂದೇಶ ಸಾರಿದ ಬಸವಣ್ಣ

KannadaprabhaNewsNetwork |  
Published : May 10, 2026, 02:00 AM IST
9ಕೆಪಿಎಲ್1:ಕೊಪ್ಪಳ ನಗರದ ಶ್ರೀ ಗವಿಸಿದ್ಧೇಶ್ವರ ಪದವಿ ಕಾಲೇಜಿನಲ್ಲಿ ಜರುಗಿದ ವಿಶ್ವಗುರು ಬಸವಣ್ಣನವರ ಜಯಂತೋತ್ಸವ ಜರುಗಿತು.  | Kannada Prabha

ಸಾರಾಂಶ

ಜ್ಞಾನದ ಬೆಳಕು ಚೆಲ್ಲಿ ಕ್ರಾಂತಿಯ ಬೀಜ ಬಿತ್ತಿದವರು ವಿಶ್ವಗುರು ಬಸವಣ್ಣ. ಪ್ರಸಿದ್ಧ ಸಂತರಾಗಿದ್ದ ಇವರು ರಾಜನೀತಿಜ್ಞ, ಸಮಾಜ ಸುಧಾರಕ ತಮ್ಮ ವಿಚಾರಧಾರೆ ಮೂಲಕ ಸಮಾಜದಲ್ಲಿನ ಅಂಕುಡೊಂಕು ತಿದ್ದಿತೀಡಿ ಮನುಕುಲಕ್ಕೆ ದಾರಿದೀಪ ತೋರಿದರು

ಕೊಪ್ಪಳ: ಮೂಢನಂಬಿಕೆ, ಮಡಿ ಮೈಲಿಗೆ, ಮೇಲುಕೀಲು, ಲಿಂಗ ಅಸಮಾನತೆ ಜಾತಿ ವ್ಯವಸ್ಥೆ ಸೇರಿದಂತೆ ಸಮಾಜದಲ್ಲಿದ್ದ ಅನಿಷ್ಠ ಪದ್ಧತಿ ಹೋಗಲಾಡಿಸಿ ಹಲವಾರು ಸಾಮಾಜಿಕ ಸುಧಾರಣೆ ತಂದವರು ಬಸವಣ್ಣನವರು. ದಯವೇ ಧರ್ಮದ ಮೂಲವಯ್ಯ ಎನ್ನುತ್ತಾ ಮನುಕುಲಕ್ಕೆ ಮಾನವೀಯತೆಯ ಸಂದೇಶ ಸಾರಿದವರು. ವಚನಗಳ ಮೂಲಕವೇ ಸಮಾಜ ಸುಧಾರಣೆಗಾಗಿ ಶ್ರಮಿಸಿದ ಈ ಮಹಾನ್ ಚೇತನ ಬಸವಣ್ಣನವರಾಗಿದ್ದಾರೆ ಎಂದು ಚಿಂತಕ ಜಿ.ಎಸ್.ಗೋನಾಳ್ ಹೇಳಿದರು.

ನಗರದ ಶ್ರೀಗವಿಸಿದ್ಧೇಶ್ವರ ಪದವಿ ಕಾಲೇಜಿನಲ್ಲಿ ಜರುಗಿದ ವಿಶ್ವಗುರು ಬಸವಣ್ಣನವರ ಜಯಂತ್ಯುತ್ಸವ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಜ್ಞಾನದ ಬೆಳಕು ಚೆಲ್ಲಿ ಕ್ರಾಂತಿಯ ಬೀಜ ಬಿತ್ತಿದವರು ವಿಶ್ವಗುರು ಬಸವಣ್ಣ. ಪ್ರಸಿದ್ಧ ಸಂತರಾಗಿದ್ದ ಇವರು ರಾಜನೀತಿಜ್ಞ, ಸಮಾಜ ಸುಧಾರಕ ತಮ್ಮ ವಿಚಾರಧಾರೆ ಮೂಲಕ ಸಮಾಜದಲ್ಲಿನ ಅಂಕುಡೊಂಕು ತಿದ್ದಿತೀಡಿ ಮನುಕುಲಕ್ಕೆ ದಾರಿದೀಪ ತೋರಿದರು. ಮನುಕುಲಕ್ಕೆ ಸಮಾನತೆಯ ಪಾಠ ಕಲಿಸಿಕೊಟ್ಟ ಅವರ ವಿಚಾರ ಇಂದಿಗೂ ನಮಗೆಲ್ಲರ ಬದುಕಿಗೆ ಬದುಕಿಗೆ ದಾರಿದೀಪವಾಗಿವೆ. ಇಂತಹ ಶ್ರೇಷ್ಠರ ತತ್ವ ಸಿದ್ಧಾಂತ ಅರ್ಥೈಸಿ ಜೀವನದಲ್ಲಿ ಅಳವಡಿಸಿಕೊಂಡರೆ ಸುಂದರ ಬದುಕು ನಮ್ಮದಾಗುತ್ತದೆ ಎಂದರು.

ಮಹಾವಿದ್ಯಾಲಯ ಉಪಪ್ರಾಚಾರ್ಯ ಡಾ. ಕರಿಬಸವೇಶ್ವರ ಬಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹಿರಿಯ ಪ್ರಾಧ್ಯಾಪಕ ಶರಣಬಸಪ್ಪ ಬಿಳಿಯಲೆ, ಪ್ರಾಧ್ಯಾಪಕ ಹಾಗೂ ಕನ್ನಡ ವಿಭಾಗದ ಮುಖ್ಯಸ್ಥ ಡಾ.ನಾಗರಾಜ ದಂಡೋತಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಪ್ರಾಧ್ಯಾಪಕ ಡಾ.ಶಿವಪ್ಪ ಸ್ವಾಗತಿಸಿದರು, ಡಾ.ಸುಮಲತಾ ಬಿ.ಎಂ ನಿರೂಪಿಸಿದರು. ಅನುಷಾ ಹಿರೇಮಠ ಪ್ರಾರ್ಥಿಸಿದರು. ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗುಡಿಸಾಗರ ಗ್ರಾಪಂ ವ್ಯಾಪ್ತಿಯಲ್ಲಿ ಮತ್ತೆ ರಾಡಿ ನೀರು ಪೂರೈಕೆ!
ಶ್ರದ್ಧೆಯಿಂದ ಕ್ರೀಡೆಯಲ್ಲಿ ಪಾಲ್ಗೊಂಡರೆ ಯಶಸ್ಸು