ಶ್ರದ್ಧೆಯಿಂದ ಕ್ರೀಡೆಯಲ್ಲಿ ಪಾಲ್ಗೊಂಡರೆ ಯಶಸ್ಸು

KannadaprabhaNewsNetwork |  
Published : May 10, 2026, 02:00 AM IST
ಸಮಾರಂಭದಲ್ಲಿ ಕೃಷ್ಣಗೌಡ ಪಾಟೀಲ ಮಾತನಾಡಿದರು. | Kannada Prabha

ಸಾರಾಂಶ

ಕ್ರೀಡೆ ಇಲ್ಲದ ಬದುಕು ಕೀಟಕ್ಕೆ ಸಮಾನ. ಆಟಗಳ ಮೂಲಕ ಮಕ್ಕಳಲ್ಲಿ ಸದೃಢ ಆರೋಗ್ಯ ವೃದ್ಧಿಯಾಗುತ್ತದೆ.

ಗದಗ:

ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಶ್ರದ್ಧೆಯಿಂದ ಪಾಲ್ಗೊಂಡರೆ ಉತ್ತಮ ಸಾಧನೆ ತೋರಬಹುದೆಂದು ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ಕೃಷ್ಣಗೌಡ ಪಾಟೀಲ್‌ ಹೇಳಿದರು.

ನಗರದಲ್ಲಿ ಟೀರ್ಸ್‌ ಹಾಗೂ ಫ್ರೇಂಡ್ಸ್‌ ಸ್ಪೋಟ್ಸ್ ಕ್ಲಬ್ ವತಿಯಿಂದ ಬಾಲಕ, ಬಾಲಕಿಯರಿಗಾಗಿ ಆಯೋಜಿಸಿದ್ದ ವಾಲಿಬಾಲ್‌ ತರಬೇತಿ ಬೇಸಿಗೆ ಶಿಬಿರದ ಮುಕ್ತಾಯ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕ್ರೀಡೆಗಳು ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಿಸುತ್ತವೆ ಎಂದರು.

ಕ್ಲಬ್‌ ಮಾಜಿ ಅಧ್ಯಕ್ಷ ವಿಜಯಕುಮಾರ ಗಡ್ಡಿ ಮಾತನಾಡಿ, ಕ್ರೀಡೆ ಮತ್ತು ಅಭಿವೃದ್ಧಿ ಕಾರ್ಯಗಳಲ್ಲಿ ರಾಜಕೀಯ ಮಾಡದೆ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಮುಂಬರುವ ದಿನಗಳಲ್ಲಿ ಕ್ರೀಡಾಪಟುಗಳಿಗೆ ಕ್ರೀಡಾ ಪೋತ್ಸಾಹಕ್ಕಾಗಿ ತನು-ಮನ-ಧನದ ಸಹಾಯ ಮಾಡುವುದಾಗಿ ತಿಳಿಸಿದರು.

ರಾಷ್ಟ್ರಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಎಸ್‌.ಎನ್. ಬಳ್ಳಾರಿ ಮಾತನಾಡಿ, ಕ್ರೀಡೆ ಇಲ್ಲದ ಬದುಕು ಕೀಟಕ್ಕೆ ಸಮಾನ. ಆಟಗಳ ಮೂಲಕ ಮಕ್ಕಳಲ್ಲಿ ಸದೃಢ ಆರೋಗ್ಯ ವೃದ್ಧಿಯಾಗುತ್ತದೆ ಎಂದು ಹೇಳಿದರು.

ಕ್ಲಬ್‌ ಅಧ್ಯಕ್ಷ ಗಂಗಾಧರ ಹಿರೇಮಠ ಮಾತನಾಡಿ, ಕ್ಲಬ್‌ಗೆ ನಾಲ್ಕು ದಶಕಗಳ ಇತಿಹಾಸವಿದ್ದು, ಕ್ರಿಯಾತ್ಮಕ ಕೆಲಸಗಳ ಮೂಲಕ ಕ್ಲಬ್‌ನ್ನು ಕ್ರಿಯಾಶೀಲಗೊಳಿಸಿಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.ಪ್ರಧಾನ ತರಬೇತುದಾರ ವೈ.ಕೆ. ಚೌಡಾಪೂರ ಪ್ರಾಸ್ತಾವಿಕ ಮಾತನಾಡಿದರು. ನಗರಸಭೆ ಸದಸ್ಯ ಸುರೇಶ ಕಟ್ಟಿಮನಿ, ಚಂದ್ರಗೌಡ ಕರಿಸೋಮನಗೌಡ್ರ, ಕೃಷ್ಣಾ ಪರಾಪೂರ, ಉಮರ ಫಾರೂಕ್‌, ಅಶೋಕ ಮಂದಾಲಿ, ಶ್ರೀಕಾಂತ ಖಟವಟೆ, ಮುನೀರ ಅಹ್ಮದ್‌, ಇಂತಿಯಾಜ್ ಶಿರಹಟ್ಟಿ, ಎಲ್.ಆರ್. ಖಟವಟೆ, ಅಜ್ಜಣ್ಣ ಮ್ಲಲಾಡದ, ಎಸ್.ಎಸ್. ಶಿರೂರ, ರಾಮಕೃಷ್ಣ ಗಾಮನಗಟ್ಟಿ, ಎನ್.ಎಂ. ಬೇಪ್ಪಾರಿ, ಎಂ.ಡಿ. ಮುಲ್ಲಾ, ಎಂ.ಟಿ. ರಾಠೋಡ, ಎಫ್.ಎಂ. ನಂದಿಕೋರ, ಸತೀಶ ಪರತಗೌಡ್ರ, ಟಿ. ಉದಯಕುಮಾರ, ಎಂ.ಎನ್. ಮುಜಾವರ, ಲೋಕೇಶ ಪಾಟೀಲ, ಎಸ್.ಎಚ್. ಬಚನಳ್ಳಿ, ವಾಣೀಶ್ರೀ ಪಾಟೀಲ, ಮಹಾಂತೇಶ ಕುಂದಗೋಳ, ಪಾಂಡುರಂಗ ಅಬ್ಬಿಗೇರಿ, ಸಂಜೀವ ಗಂಗಾವತಿ, ಬಿ.ವೈ. ಡೊಳ್ಳಿನ, ಶಿಕ್ಷಕ ಬಡೆಖಾನ ಹಾಗೂ ವಿದ್ಯಾರ್ಥಿಗಳು, ಪಾಲಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮನುಕುಲಕ್ಕೆ ಮಾನವೀಯ ಸಂದೇಶ ಸಾರಿದ ಬಸವಣ್ಣ
ಗುಡಿಸಾಗರ ಗ್ರಾಪಂ ವ್ಯಾಪ್ತಿಯಲ್ಲಿ ಮತ್ತೆ ರಾಡಿ ನೀರು ಪೂರೈಕೆ!