12ನೇ ಶತಮಾನದ ಬಸವಣ್ಣ ಸಮಾನತೆಯ ಸಂಕೇತ ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹೇಳಿದರು. ಪಟ್ಟಣದ ತಾಲೂಕು ಕಚೇರಿ ಸಭಾ ಭವನದಲ್ಲಿ ತಾಲೂಕು ಆಡಳಿತ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬಸವಣ್ಣ 12 ನೇ ಶತಮಾನದಲ್ಲಿ ಮಹಿಳೆಯರಿಗೆ ಸಮಾನತೆ ತಂದರು. ಎಲ್ಲಾ ತಳ ಸಮುದಾಯಗಳನ್ನು ನಮ್ಮವರೇ ಎಂದು ಸಾರುವ ಮೂಲಕ ಸಮ ಸಮಾಜದ ಕನಸು ಕಂಡುವರು ಬಸವಣ್ಣ ಎಂದು ಪ್ರತಿಪಾದಿಸಿದರು. ಬಸವಣ್ಣ ವಿಚಾರ ಧಾರೆಗಳ ಮೇಲೆಯೇ ಸರ್ಕಾರಗಳು ಆಡಳಿತ ನಡೆಸುತ್ತಿವೆ. ಪ್ರಸ್ತುತ ಸಮಾಜದಲ್ಲಿ ಸಮ ಸಮಾಜದ ಕನಸುಗಳನ್ನು ಕಾಣುತ್ತಿದ್ದೇವೆ. ಬಸವಣ್ಣ ಹಾದಿಯಲ್ಲಿ ಸಾಗುವ ಕೆಲಸ ಆಗಬೇಕಿದೆ ಎಂದರು. ಇಂದು ಬಸವಣ್ಣನ ಜಯಂತಿ ಸಾಂಕೇತಿಕವಾಗಿ ನಡೆದಿದೆ. ಮುಂದಿನ ತಿಂಗಳು ಅದ್ದೂರಿಯಾಗಿ ಬಸವ ಜಯಂತಿ ಆಚರಣೆ ಆಗಲಿದೆ ಎಂದರು. ಮುಖ್ಯ ಭಾಷಣದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಎಂ.ಶೈಲಕುಮಾರ್ (ಶೈಲೇಶ್) ಮಾತನಾಡಿ, ಬಸವಣ್ಣ ನಡೆ, ನುಡಿಗೆ ಹೆಸರಾದವರು ಅಲ್ಲದೆ ಎಲ್ಲರನ್ನು ಒಳಗೊಂಡಂತೆ ಸಾಗುವುದೇ ಬಸವ ತತ್ವ ಎಂದರು. ಬಸವಣ್ಣ ಇವ ನಮ್ಮವ, ಇವ ನಮ್ಮವ ಎಂದರೆ ಪ್ರಸ್ತುತ ಸಮಾಜದಲ್ಲಿ ಇವ ನಾರವ ಇವ ನಾರವ ಎಂಬ ಮಾತು ಚಾಲ್ತಿಯಲ್ಲಿದೆ. ಬಸವಣ್ಣ ಕಾಯಕ ಯೋಗಿ, ಕಾಯಕ ಮಾಡಬೇಕು ಎಂಬ ಬಸವಣ್ಣ ಮಾತು ಎಷ್ಟು ನಿಜ ಈ ಸಮಾಜದಲ್ಲಿ ಎಂದರು. ತಹಸೀಲ್ದಾರ್ ಟಿ.ರಮೇಶ್ ಬಾಬು, ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ, ವೀರಶೈವ ಸಮಾಜದ ಅಧ್ಯಕ್ಷ ಕೆ.ಎಸ್.ಶಿವಪ್ರಕಾಶ್, ಮಂಡಲ ಬಿಜೆಪಿ ಅಧ್ಯಕ್ಷ ಸಿ.ಮಹದೇವಪ್ರಸಾದ್, ವೀರಶೈವ ಸಮಾಜದ ಯುವ ಘಟಕದ ಅಧ್ಯಕ್ಷ ಎಸ್.ಗುರುಪ್ರಸಾದ್, ಕಸಾಪ ಮಾಜಿ ಅಧ್ಯಕ್ಷ ಚಿದಾನಂದ, ಮುಖಂಡರಾದ ಅಭಿಷೇಕ್ ಗುಡಿಮನೆ, ಮಾಡ್ರಹಳ್ಳಿ ನಾಗೇಂದ್ರ, ಬಲಚವಾಡಿ ಸುಬ್ಬು, ಬಿ.ಸಿ.ಮಹದೇವಸ್ವಾಮಿ, ಮಡಹಳ್ಳಿ ಶಿವಮೂರ್ತಿ,ಹಂಗಳ ನಂದೀಶ್, ಗೋಪಾಲಪುರ ಲೋಕೇಶ್, ಪ್ರಗತಿ ಪರ ಸಂಘಟನೆಗಳ ಸುಭಾಷ್ ಮಾಡ್ರಹಳ್ಳಿ, ಆರ್.ಡಿ.ಉಲ್ಲಾಸ್, ಶಿರಸ್ತೇದಾರ್ ಮಹೇಶ್ ಸೇರಿದಂತೆ ಹಲವರಿದ್ದರು.ಅಧಿಕಾರಿಗಳ ಗೈರು, ಮುಖಂಡರ ಆಕ್ರೋಶ !ಬಸವ ಜಯಂತಿ ಕಾರ್ಯಕ್ರಮಕ್ಕೆ ತಾಲೂಕಿನ ಬಹುತೇಕ ಅಧಿಕಾರಿಗಳು ಗೈರಾಗಿದ್ದಕ್ಕೆ ವೀರಶೈವ ಸಮಾಜದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು. ಯಾಕೆ ಗೈರಾಗಿದ್ದಾರೆ ಎಂದು ತಹಸೀಲ್ದಾರ್ ಟಿ.ರಮೇಶ್ ಬಾಬುರನ್ನು ಮುಖಂಡರು ಪ್ರಶ್ನಿಸಿದ ಬಳಿಕ ಯಾವುದೇ ಜಯಂತಿಗಳು ನಡೆದರೂ ಎಲ್ಲ ವರ್ಗದ ಮುಖಂಡರನ್ನು ಸಭೆಗೆ ಆಹ್ವಾನಿಸಬೇಕು ಎಂದು ಒತ್ತಾಯಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.