ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ
ಪಟ್ಟಣದ ಉದ್ಧಾನೇಶ್ವರ ವೃತ್ತದಲ್ಲಿ ಸಿದ್ಧಗಂಗಾ ಜ್ಯೂವೆಲರ್ಸ್ ನೂತನ ಅಂಗಡಿ ಉದ್ಘಾಟನೆ ಹಾಗೂ ಅಕ್ಷಯ ತೃತೀಯ ಹಾಗೂ ಬಸವ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಬಸವಣ್ಣ ಅವರು ಸಮಾಜದ ಕಲ್ಯಾಣಕ್ಕಾಗಿ ತಮ್ಮನ್ನು ತಾವು ತೊಡಗಿಸಿಕೊಂಡು ಭಕ್ತಿಯ ಮೂಲಕ ಆಧ್ಯಾತ್ಮಿಕ ಜ್ಞಾನೋದಯವನ್ನು ಪ್ರಚಾರ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸಾಮಾಜಿಕ ನಿಷ್ಠೆ ಪಾಲಿಸಿ ತನ್ನ ವಚನಗಳ ಮೂಲಕ ತಿಳಿಸಿ, ಕರ್ನಾಟಕದ ಇತಿಹಾಸದಲ್ಲಿ ಮೇರು ವ್ಯಕ್ತಿಯಾಗಿ ಉಳಿದಿದ್ದಾರೆ ಎಂದರು.ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿಗೆ ಸಂಬಂಧಿಸಿದಂತೆ ಮಾತನಾಡಿ, ದಾಳಿಯಲ್ಲಿ ಮೃತಪಟ್ಟವರ ಆತ್ಮಕ್ಕೆ ಶಾಂತಿಕೋರುತ್ತಾ ಪ್ರತಿಯೊಬ್ಬರೂ ಭಯೋತ್ಪಾದನೆಯನ್ನು ಖಂಡಿಸಬೇಕಿದೆ. ಶೀಘ್ರದಲ್ಲೇ ನಮ್ಮ ಸೈನಿಕರು ನಮಗೆ ಸಿಹಿ ಸುದ್ದಿ ನೀಡುವ ಭರವಸೆಯಿದ್ದು, ನಾವೆಲ್ಲರೂ ಆ ಕ್ಷಣಕ್ಕಾಗಿ ಕಾತುರದಿಂದ ಕಾಯುತ್ತಿದ್ದೇವೆ ಎಂದರು.
ಮುಖಂಡರಾದ ಗ್ರಾಪಂ ಮಾಜಿ ಅಧ್ಯಕ್ಷ ಅಂಚೆಮನೆ ರುದ್ರಪ್ಪ, ಗುರುಸಿದ್ದಪ್ಪ, ಮಹದೇವಯ್ಯ, ಪ್ರಕಾಶ್, ಉಮಾಶಂಕರ್, ಪ್ರತಾಪ್, ಸುಂದರೇಶ್, ಕರುನಾಡ ವಿಜಯಸೇನೆ ರಾಜ್ಯ ಕಾರ್ಯದರ್ಶಿ ವಿನಯ್ ಮತ್ತಿತರರಿದ್ದರು.ಪೋಟೋ 3 : ದಾಬಸ್‍ಪೇಟೆ ಪಟ್ಟಣದ ಉದ್ಧಾನೇಶ್ವರ ವೃತ್ತದಲ್ಲಿ ಸಿದ್ಧಗಂಗಾ ಜ್ಯೂವೆಲರ್ಸ್ ನೂತನ ಅಂಗಡಿ ಉದ್ಘಾಟನೆ ಹಾಗೂ ಅಕ್ಷಯ ತೃತೀಯ ಹಾಗೂ ಬಸವ ಜಯಂತಿ ಕಾರ್ಯಕ್ರಮದಲ್ಲಿ ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಭಾಗವಹಿಸಿರುವುದು.