ವಿದ್ಯಾಸಂಸ್ಥೆಗಳ ಬೆಳವಣಿಗೆಗೆ ಎಲ್ಲರ ಸಹಭಾಗಿತ್ವ ಅಗತ್ಯವಾಗಿದ್ದು, ಆಡಳಿತ ಮಂಡಳಿ, ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು ಜೊತೆ ಸೇರಿದಾಗ ಮಾತ್ರ ವಿದ್ಯಾಸಂಸ್ಥೆ ಸರ್ವಾಂಗೀಣ ಬೆಳವಣಿಗೆ ಆಗಲು ಸಾಧ್ಯ ಎಂದು ಸವಣೂರು ವಿದ್ಯಾರಶ್ಮಿ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಕೆ. ಸೀತಾರಾಮ ರೈ ಹೇಳಿದರು.
ಪುತ್ತೂರು: ವಿದ್ಯಾಸಂಸ್ಥೆಗಳ ಬೆಳವಣಿಗೆಗೆ ಎಲ್ಲರ ಸಹಭಾಗಿತ್ವ ಅಗತ್ಯವಾಗಿದ್ದು, ಆಡಳಿತ ಮಂಡಳಿ, ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು ಜೊತೆ ಸೇರಿದಾಗ ಮಾತ್ರ ವಿದ್ಯಾಸಂಸ್ಥೆ ಸರ್ವಾಂಗೀಣ ಬೆಳವಣಿಗೆ ಆಗಲು ಸಾಧ್ಯ ಎಂದು ಸವಣೂರು ವಿದ್ಯಾರಶ್ಮಿ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಕೆ. ಸೀತಾರಾಮ ರೈ ಹೇಳಿದರು.
ಅವರು ಸವಣೂರಿನ ವಿದ್ಯಾರಶ್ಮಿ ವಿದ್ಯಾಲಯದಲ್ಲಿ 2026- 27ನೇ ಸಾಲಿನ ಪೋಷಕರ ಸಭೆ ಉದ್ಘಾಟಿಸಿ ಮಾತನಾಡಿದರು.ಸುಳ್ಯ ಸರ್ಕಾರಿ ಪದವಿ ಪೂರ್ವ ಕಾಲೇಜ್‌ನ ಉಪ ಪ್ರಾಂಶುಪಾಲ ಪ್ರಕಾಶ್ ಮೂಡಿತ್ತಾಯ ಅವರು ಸೋಲಿನಲ್ಲೂ ಬದುಕನ್ನು ಹೇಗೆ ಕಟ್ಟಿ ಕೊಳ್ಳುವುದು ಅನ್ನುವುದನ್ನು ಪೋಷಕರು ಮತ್ತು ಶಿಕ್ಷಕರು ಒಟ್ಟು ಕೂಡಿ ಕಲಿಸೋಣ ಎಂದು ಹೇಳಿದರು. ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದು ನೂತನ ಉಪಧ್ಯಕ್ಷರಾಗಿ ಡಾ. ಜೀವನ್ ಪ್ರಕಾಶ್ ರೈ, ಸದಸ್ಯರಾಗಿ ಅಶ್ರಫ್ ಎಂ. (ಪಿಯುಸಿ ವಿಭಾಗ), ನಸೀಮ, ( ಹೈಸ್ಕೂಲ್ ವಿಬಾಗ). ಎಸ್ ಇ ಅಬ್ದುಲ್ ಸೋಂಪಾಡಿ (ಪ್ರಾಥಮಿಕ ವಿಭಾಗ) ಮತ್ತು ಮೇನಕ (ಕೆ ಜಿ ವಿಬಾಗ) ಆಯ್ಕೆಯಾದರು.
ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಅಡ್ವಕೇಟ್ ಅಶ್ವಿನ್ ಎಲ್ ಶೆಟ್ಟಿ, ಟ್ರಸ್ಟಿಗಳಾದ ಎನ್ ಸುಂದರ್ ರೈ, ರಶ್ಮಿ ಅಶ್ವಿನ್ ಶೆಟ್ಟಿ ಮತ್ತು 2025- 26ನೇ ಸಾಲಿನ ರಕ್ಷಕ ಶಿಕ್ಷಕ ಸಂಘದ ಉಪಧ್ಯಕ್ಷ ತಾರನಾಥ ಕಾಯರ್ಗ ಉಪಸ್ಥಿತರಿದ್ದರು. ಪ್ರಾಂಶುಪಾಲೆ ಶಶಿಕಲಾ ಎಸ್. ಆಳ್ವ ಪೋಷಕರಿಗೆ ಶಾಲಾ ನಿಯಾಮಾವಳಿಗಳನ್ನು ತಿಳಿಸಿದರು.ಉಪನ್ಯಾಸಕಿ ಜ್ಯೋತಿ ಸ್ವಾಗತಿಸಿದರು. ಶಿಕ್ಷಕಿ ಲಿಖಿತ ಎಂ ಎನ್ ವಂದಿಸಿದರು. ಶಿಕ್ಷಕಿ ಚೇತನಾ ನಿರೂಪಿಸಿದರು.