ಹರಪನಹಳ್ಳಿ: ಅಸಮಾನತೆಯ ವಿರುದ್ಧ ಕ್ರಾಂತಿಕಾರಿ ಹೋರಾಟ ನಡೆಸಿದ ಸಾಂಸ್ಕೃತಿಕ ನಾಯಕ ಬಸವಣ್ಣನವರ ಚಿಂತನೆಗಳು ಸರ್ವಕಾಲಕ್ಕೂ ಪ್ರಸ್ತುತ ಎಂದು ಉಪವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿ ಹೇಳಿದರು.ಪಟ್ಟಣದ ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ತಾಲೂಕು ಆಡಳಿತದಿಂದ ಶುಕ್ರವಾರ ನಡೆದ ಜಗಜ್ಯೋತಿ, ಸಾಂಸ್ಕೃತಿಕ ನಾಯಕ ಬಸವಣ್ಣನವರ ಜಯಂತಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ತಹಶೀಲ್ದಾರ ಗಿರೀಶಬಾಬು ಮಾತನಾಡಿ, ಸಮಾಜದಲ್ಲಿ ಬೇರು ಬಿಟ್ಟಿದ್ದ ಮೇಲು-ಕೀಳು, ಜಾತಿ ವ್ಯವಸ್ಥೆ ವಿರುದ್ಧ ಬಸವಣ್ಣನವರು ನಿರಂತರ ಹೋರಾಟ ಮಾಡಿದರು. ಅವರ ತತ್ವಾದರ್ಶಗಳನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರೇಡ್-2 ತಹಶೀಲ್ದಾರ್ ನಟರಾಜ, ಪುರಸಭಾ ಸದಸ್ಯ ಗೊಂಗಡಿ ನಗರಾಜ ಸಮಾಜದ ಮುಖಂಡರಾದ ಪಾಟೀಲ್ ಬೆಟ್ಟನಗೌಡ, ಅಂಬ್ಲಿ ಮಂಜುನಾಥ, ಚನ್ನನಗೌಡ, ಅಡವಿಹಳ್ಳಿ ಪೂಜಾರ ಬಸವರಾಜ, ಎಚ್.ಎಂ.ಬಸವರಾಜಯ್ಯ, ದೇವರಾಜ, ಶೇಖರ ಪಾಟೀಲ್, ಬಸವನಗೌಡ, ರಾಜು, ದಿವಾಕರ, ಪ್ರಭಾಕರ, ತಿಮ್ಮಲಾಪುರ ನಾಗರಾಜ, ಸುಮಾ ಮಹೇಶ, ರುದ್ರಮುನಿ ಇದ್ದರು.ಹರಪನಹಳ್ಳಿ ಪಟ್ಟಣದ ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ಜಗಜ್ಯೋತಿ, ಬಸವೇಶ್ವರ ಜಯಂತಿ ಆಚರಿಸಲಾಯಿತು.