ಮೊದಲು ಪ್ರಜಾಸತ್ತಾತ್ಮಕ ಮೌಲ್ಯ ಬೋಧಿಸಿದವರು ಬಸವಣ್ಣನವರು

KannadaprabhaNewsNetwork |  
Published : Apr 29, 2025, 12:46 AM IST
ಬೆಳಗಾವಿಯಲ್ಲಿ ಬಸವಜಯಂತಕಾರ್ಯಕ್ರಮವನ್ನು ಡಾ..ತೋಂಟದಸಿದ್ದರಾಮಸ್ವಾಮೀಜಿ ಉದ್ಘಾಟಿಸಿದರು | Kannada Prabha

ಸಾರಾಂಶ

ಇಂದಿನ ಆಧುನಿಕ ವೈಜ್ಞಾನಿಕ ಯುಗದಲ್ಲೂ ಅನೇಕ ರಾಷ್ಟ್ರಗಳಲ್ಲಿ ಹೆಣ್ಣು ಮಕ್ಕಳಿಗೆ ಸ್ವಾತಂತ್ರ್ಯ ಇಲ್ಲ. ಬಾಲ್ಯದಲ್ಲಿ ತಂದೆ, ತಾಯಿ, ಯೌವ್ವನದಲ್ಲಿ ಗಂಡನ ಹಾಗೂ ಮುಪ್ಪಾವಸ್ಥೆಯಲ್ಲಿ ಮಕ್ಕಳ ಆಶ್ರಯದಲ್ಲಿ ಹೆಣ್ಣು ಇರುವುದರಿಂದ ಅವಳು ಸ್ವಾತಂತ್ರ್ಯಕ್ಕೆ ಅರ್ಹಳಲ್ಲ ಎಂಬ ಭಾವ ಸಮಾಜದಲ್ಲಿತ್ತು. ಆದರೆ, ಇವೆಲ್ಲವನ್ನೂ ತಿರಸ್ಕರಿಸಿ ಹೆಣ್ಣುಮಕ್ಕಳಿಗೆ ಮೊಟ್ಟಮೊದಲ ಬಾರಿಗೆ ಧಾರ್ಮಿಕ ಸ್ವಾತಂತ್ರ್ಯ ಹಾಗೂ ಜಗತ್ತಿಗೆ ಪ್ರಜಾಸತ್ತಾತ್ಮಕ ಮೌಲ್ಯವನ್ನು ಬೋಧಿಸಿದವರು ಬಸವಣ್ಣ ಎಂದು ಎಡೆಯೂರು ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠದ ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ ನುಡಿದರು.

ಕನ್ನಡಪ್ರಭವಾರ್ತೆ ಬೆಳಗಾವಿ

ಇಂದಿನ ಆಧುನಿಕ ವೈಜ್ಞಾನಿಕ ಯುಗದಲ್ಲೂ ಅನೇಕ ರಾಷ್ಟ್ರಗಳಲ್ಲಿ ಹೆಣ್ಣು ಮಕ್ಕಳಿಗೆ ಸ್ವಾತಂತ್ರ್ಯ ಇಲ್ಲ. ಬಾಲ್ಯದಲ್ಲಿ ತಂದೆ, ತಾಯಿ, ಯೌವ್ವನದಲ್ಲಿ ಗಂಡನ ಹಾಗೂ ಮುಪ್ಪಾವಸ್ಥೆಯಲ್ಲಿ ಮಕ್ಕಳ ಆಶ್ರಯದಲ್ಲಿ ಹೆಣ್ಣು ಇರುವುದರಿಂದ ಅವಳು ಸ್ವಾತಂತ್ರ್ಯಕ್ಕೆ ಅರ್ಹಳಲ್ಲ ಎಂಬ ಭಾವ ಸಮಾಜದಲ್ಲಿತ್ತು. ಆದರೆ ಇವೆಲ್ಲವನ್ನೂ ತಿರಸ್ಕರಿಸಿ ಹೆಣ್ಣುಮಕ್ಕಳಿಗೆ ಮೊಟ್ಟಮೊದಲ ಬಾರಿಗೆ ಧಾರ್ಮಿಕ ಸ್ವಾತಂತ್ರ್ಯ ಹಾಗೂ ಜಗತ್ತಿಗೆ ಪ್ರಜಾಸತ್ತಾತ್ಮಕ ಮೌಲ್ಯವನ್ನು ಬೋಧಿಸಿದವರು ಬಸವಣ್ಣ ಎಂದು ಎಡೆಯೂರು ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠದ ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ ನುಡಿದರು.

ಜಾಗತಿಕ ಲಿಂಗಾಯತ ಮಹಾಸಭೆಯ ವತಿಯಿಂದ ನಾಗನೂರು ರುದ್ರಾಕ್ಷಿ ಮಠದ ಪ್ರಭುದೇವ ಸಭಾಗೃಹ ದಲ್ಲಿ ಸೋಮವಾರ ಹಮ್ಮಿಕೊಂಡ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಸವಣ್ಣನವರು ನೀಡಿದ ಕಾಯಕ, ದಾಸೋಹ ಹಾಗೂ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡ ಯಾವುದೇ ರಾಷ್ಟ್ರ ಎಂದೂ ಬಡವಾಗುವುದಿಲ್ಲ. ಬದಲಿಗೆ ಅದು ಸದಾ ಸಂಪದ್ಭರಿತವಾಗುತ್ತದೆ. ನಾನು ಎಂಬ ಅಹಂ ಭಾವ ಅಳಿದರೆ ಸಮಾಜದಲ್ಲಿ ಸಂಘರ್ಷ ಕಡಿಮೆಯಾಗುತ್ತದೆ ಎಂದರು.ಪ್ರವಚನ ನೀಡಿದ ಕುಲವಳ್ಳಿ ಸುಕುಮಾರ ಯೋಗಾಶ್ರಮದ ಮಲ್ಲಿಕಾರ್ಜುನ ದೇವರು ಮಾತನಾಡಿ, ದೇಶದಲ್ಲಿ ಕೋಟ್ಯಾಂತರ ದೇವಾಲಯಗಳು, ಲಕ್ಷಾಂತರ ಧಾರ್ಮಿಕ ಮುಖಂಡರಿದ್ದರೂ ಸಮಾಜದಲ್ಲಿ ಕೊಲೆ, ಅನ್ಯಾಯ, ಅನಾಚಾರ ನಿಂತಿಲ್ಲ. ತಲೆಯಲ್ಲಿ ಹೊಟ್ಟಾದರೆ ಶಾಂಪೂ ಬಳಸಿ ಸ್ವಚ್ಚಗೊಳಿಸಬಹುದು. ಬಟ್ಟೆ ಹೊಲಸಾದರೆ ಮಡಿವಾಳರಿಗೆ ನೀಡಬಹುದು. ಆದರೆ ಮನಸ್ಸಿನ ಮೈಲಿಗೆಯನ್ನು ತೊಳೆಯಬೇಕಾದರೆ ಶರಣರ ಮಹಾತ್ಮರ ವಾಣಿಯನ್ನು ಆಲಿಸುತ್ತಾ ಅವುಗಳನ್ನು ನಿಜ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅಂದಾಗ ಮಾತ್ರ ಸುಸಂಸ್ಕೃತ ಸಮಾಜ ನಿರ್ಮಾಣವಾಗುತ್ತದೆ ಎಂದು ತಿಳಿಸಿದರು.ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಗಡಹಿಂಗ್ಲಜ ಜಡೆಸಿದ್ದೇಶ್ವರ ಬಿಲ್ವಾಶ್ರಮದ ಮಹಾಂತ ಸಿದ್ದೇಶ್ವರ ಸ್ವಾಮೀಜಿ, ಎತ್ತುಗಳನ್ನು ಪೂಜಿಸುವುದು ಬಸವ ಜಯಂತಿಯಲ್ಲ. ಬದಲಿಗೆ ಬಿದ್ದವರನ್ನು ಎತ್ತುವುದು ಬಸವ ಜಯಂತಿ ಎಂದರು. ಜಾಗತಿಕ ಲಿಂಗಾಯತ ಮಹಾಸಭೆಯ ಜಿಲ್ಲಾಧ್ಯಕ್ಷ ಬಸವರಾಜ ರೊಟ್ಟಿ ಅಧ್ಯಕ್ಷತೆ ವಹಿಸಿದ್ದರು. ಅನುಶರಣ ಸಮೂಹ ಸಂಸ್ಥೆಗಳ ಕಾರ್ಯಾಧ್ಯಕ್ಷೆ ಅನ್ನಪೂರ್ಣ ಅಗಡಿ ಷಟಸ್ಥಲ ಧ್ವಜಾರೋಹಣ ನೆರವೇರಿಸಿದರು.ಡಾ.ರೋಹಿಣಿ ಕರ್ಜಗಿಮಠ ಹಾಗೂ ನಯನಾ ಗಿರಿಗೌಡರ ಪ್ರಾರ್ಥಿಸಿದರು. ಜಾಗತಿಕ ಲಿಂಗಾಯತ ಮಹಾಸಭೆಯ ನಗರ ಘಟಕದ ಕಾರ್ಯದರ್ಶಿ ಸಿ.ಎಂ. ಬೂದಿಹಾಳ ಸ್ವಾಗತಿಸಿದರು. ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆಯ ಪ್ರಾಧ್ಯಾಪಕರಾದ ಎ.ಕೆ.ಪಾಟೀಲ, ಮಂಜುನಾಥ ಶರಣಪ್ಪನವರ ನಿರೂಪಿಸಿದರು. ರತ್ನಾ ಬೆಣಚಿನಮರಡಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ