ಜಾತಿಯ ಕತ್ತಲೆ ಕಳೆದು ಜ್ಯೋತಿ ಬೆಳಗಿದವರು ಬಸವಣ್ಣ: ಡಾ.ಎನ್.ಜೆ.ಶಿವಕುಮಾರ್

KannadaprabhaNewsNetwork | Published : May 1, 2025 12:48 AM

ಸಾರಾಂಶ

ನರಸಿಂಹರಾಜಪುರ, 12 ನೇ ಶತಮಾನದಲ್ಲಿಯೇ ಜಾತಿ ಎಂಬ ಕತ್ತಲೆ ಹೋಗಲಾಡಿಸಿ, ಜ್ಯೋತಿ ಬೆಳಗಿಸಿದವರು ಬಸವಣ್ಣನವರು ಎಂದು ದಾವಣಗೆರೆ ಸಾಹಿತಿ ಡಾ.ಎನ್.ಜೆ.ಶಿವಕುಮಾರ್ ಹೇಳಿದರು.

- ಮೆಣಸೂರು ಬಸವ ಕೇಂದ್ರದಲ್ಲಿ 892 ನೇ ಬಸವಣ್ಣನವರ ಜಯಂತಿ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

12 ನೇ ಶತಮಾನದಲ್ಲಿಯೇ ಜಾತಿ ಎಂಬ ಕತ್ತಲೆ ಹೋಗಲಾಡಿಸಿ, ಜ್ಯೋತಿ ಬೆಳಗಿಸಿದವರು ಬಸವಣ್ಣನವರು ಎಂದು

ದಾವಣಗೆರೆ ಸಾಹಿತಿ ಡಾ.ಎನ್.ಜೆ.ಶಿವಕುಮಾರ್ ಹೇಳಿದರು.

ಬುಧವಾರ ತಾಲೂಕಿನ ಮೆಣಸೂರು ಬಸವ ಕೇಂದ್ರದಲ್ಲಿ ಆಯೋಜಿಸಿದ್ದ 892 ನೇ ಬಸವಣ್ಣನವರ ಜಯಂತಿ ಯಲ್ಲಿ ವಿಶೇಷ ಉಪನ್ಯಾಸ ನೀಡಿ , ಬಸವಣ್ಣನವರು 12,342 ವಚನಗಳನ್ನು ರಚಿಸಿದ್ದಾರೆ. 1913 ರಲ್ಲಿ ದಾವಣೆಗೆರೆ ದೊಡ್ಡಪೇಟೆಯ ಶ್ರೀ ವಿರಕ್ತಮಠದಲ್ಲಿ ಮೊದಲ ಬಾರಿಗೆ ಬಸವಣ್ಣನವರ ಜಯಂತಿ ಆಚರಿಸಿದ ಐತಿಹಾಸಿಕ ಸ್ಥಳವಾಗಿದೆ. ಹರ್ಡೇಕರ್‌ ಮಂಜಪ್ಪ ಹಾಗೂ ಮೃತ್ಯುಂಜಯಪ್ಪ ಎಂಬುವರು ಮೊದಲ ಬಾರಿಗೆ ಬಸವಣ್ಣನವರ ಜಯಂತಿ ಪ್ರಾರಂಭಿಸಿದ್ದರು ಎಂದರು.

ಜಾತಿ ಎಂಬ ಅನಿಷ್ಠ ಪದ್ಧತಿಯನ್ನು ನಾವಾಗಿಯೇ ಸೃಷ್ಟಿಮಾಡಿಕೊಂಡಿದ್ದೇವೆ. ಬಸವಣ್ಣನವರು ಎಲ್ಲರೂ ಸಮಾನರು ಎಂದು ಸಾರಿದವರು. ಜಾತಿ ಪದ್ಧತಿ, ಮೂಢ ನಂಭಿಕೆಗೆ ಎಲ್ಲರೂ ಕಟ್ಟು ಬಿದ್ದಿದ್ದೆವು. ಹಿಂದೆ ಮನುಷ್ಯರನ್ನು ಪ್ರಾಣಿಗಿಂತ ಹೀನಾಯವಾಗಿ ಕಾಣಲಾಗುತ್ತಿತ್ತು. ಜಾತಿ ಪದ್ಧತಿ, ಮೂಡ ನಂಬಿಕೆ ಹೋಗಲಾಡಿಸಲು ಬಸವಣ್ಣನವರು ಶ್ರಮಿಸಿದ್ದಾರೆ. ಮಕ್ಕಳಿಗೆ ಬಸವಣ್ಣನವರ ಆದರ್ಶ, ತತ್ವ, ಆಚಾರ, ವಿಚಾರಗಳನ್ನು ಹೇಳಿಕೊಡುವ ಮೂಲಕ ದಾರಿ ತಪ್ಪುತ್ತಿರುವ ಇಂದಿನ ನಿಮ್ಮ ಮಕ್ಕಳನ್ನು ಉನ್ನತೀಕರಣದತ್ತ ಕೊಂಡೊಯ್ಯಿರಿ ಎಂದು ಕರೆ ನೀಡಿದರು.ಪ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್.ಎಲ್.ಶೆಟ್ಟಿ ಮಾತನಾಡಿ, ಸಮ ಸಮಾಜದ ಪರಿಕಲ್ಪನೆ ಬಸವಣ್ಣನವರು 12 ನೇ ಶತಮಾನದಲ್ಲಿ ಹೊಂದಿದ್ದರು. ಅವರ ಆದರ್ಶ, ತತ್ವ, ಸಿದ್ಧಾಂತ ಇಂದಿಗೂ ಅನುಕರಣೀಯ. ಬಸವಣ್ಣನವರ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವನ್ನಾಗಿ ಆಚರಿಸಲು ಸಿಎಂ ಸಿದ್ದರಾಮಯ್ಯನವರೇ ಮೂಲ ಕಾರಣೀಭೂತ ರಾಗಿದ್ದಾರೆ ಎಂದರು.ತಹಸೀಲ್ದಾರ್ ತನುಜಾ. ಟಿ.ಸವದತ್ತಿ ಮಾತನಾಡಿ, ವಿಶ್ವಕ್ಕೇ ಗುರುವಾದ ಬಸವಣ್ಣನವರನ್ನು ಸರ್ಕಾರ ಕರ್ನಾಟಕ ಸಾಂಸ್ಕೃತಿಕ ರಾಯಬಾರಿ ಎಂದು ಘೋಷಿಸಿದೆ. ಬಸವಣ್ಣನವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಬಸವಣ್ಣ ನವರು ಕಂಡ ಸಮ ಸಮಾಜದ ಕಲ್ಪನೆ ಸಾಕಾರಗೊಳಿಸೋಣ ಎಂದರು.ಕಾರ್ಯಕ್ರಮದಲ್ಲಿ ಪ.ಪಂ. ಅಧ್ಯಕ್ಷೆ ಜುಬೇದ, ಸಿಪಿಐ ಗುರುದತ್‌ಕಾಮದತ್, ವೀರ ಶೈವ ಸಮಾಜದ ಮುಖಂಡ ವೈ.ಎಸ್.ರವಿ ಮಾತನಾಡಿದರು. ಎಲ್ಲಾ ಅತಿಥಿಗಳಿಗೂ ಬಸವಣ್ಣನವರ ವಚನಗಳ ಪುಸ್ತಕ ನೀಡಿ ಶಾಲು ಹೊದಿಸಿ ಅಭಿನಂದಿಸಲಾಯಿತು. ಅತಿಥಿಗಳು ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಕಾರ್ಯಕ್ರಮಕ್ಕೂ ಮುನ್ನ ಮಡಬೂರಿನ ಶರಣ, ಶರಣೆಯಿಂದ ಭಜನಾ ಕಾರ್ಯಕ್ರಮ ಜರುಗಿತು. ನಂತರ ಎಲ್ಲಾ ಭಕ್ತಾಧಿಗಳಿಗೂ ಪ್ರಸಾದ ನೀಡಲಾಯಿತು.ಸಭೆ ಅಧ್ಯಕ್ಷತೆಯನ್ನು ಬಸವ ಕೇಂದ್ರದ ಅಧ್ಯಕ್ಷ ಶಾಂತರಾಜ್ ವಹಿಸಿದ್ದರು. ಚಿತ್ರದುರ್ಗ ಮುರುಘಾ ಮಠದ ಸಂಚಾಲಕ ಪುಟ್ಟಸ್ವಾಮಿ, ಮುರುಘಾ ಮಠದ ಗುರು ಕುಲ ಸಾಧಕ ಶರಣ ಲಂಕೇಶ್ ದೇವರು, ಮುಖಂಡರಾದ ಸೋಮೇಶ್,ಆಂಜನೇಯ ಇದ್ದರು.

Share this article