ಇಡೀ ವಿಶ್ವಕ್ಕೆ ಶಾಂತಿ ಸಂದೇಶ ನೀಡಿದವರು ಬಸವಣ್ಣ

KannadaprabhaNewsNetwork |  
Published : May 01, 2025, 12:45 AM IST
ಹೊಳೆನರಸೀಪುರದ ತಾಲೂಕು ಕಚೇರಿಯಲ್ಲಿ ವೈ.ಎಂ.ರೇಣುಕುಮಾರ್ ಉಪಸ್ಥಿತಿಯಲ್ಲಿ ಆಯೋಜಿಸಿದ್ದ ಬಸವಣ್ಣನವರ ಜಯಂತ್ಯುತ್ಸವ ಕಾರ್ಯಕ್ರಮವನ್ನುಶಾಸಕ ಎಚ್.ಡಿ.ರೇವಣ್ಣ ಜ್ಯೋತಿ ಬೆಳಗಿಸಿ, ಉದ್ಘಾಟಿಸಿದರು. | Kannada Prabha

ಸಾರಾಂಶ

ಕಾಯಕವೇ ಕೈಲಾಸವೆಂಬ ತತ್ವದಡಿ ಜನ ಸಾಮಾನ್ಯರನ್ನು ಪ್ರೇರೇಪಿಸಿ, ಸಣ್ಣ ಕೆಲಸ ಮಾಡುವ ವ್ಯಕ್ತಿಯಿಂದ ಆಡಳಿತ ನಡೆಸುವ ವ್ಯಕ್ತಿಯ ತನಕ ಸಮಾನತೆಯ ಸಂದೇಶ ಸಾರುವ ಜತೆಗೆ ವೃತ್ತಿಯ ಪ್ರಾಮುಖ್ಯತೆಯನ್ನು ತಿಳಿಸಿಕೊಟ್ಟು, ಸಮಾನತೆಯ ಸಾರವನ್ನು ತಿಳಿಸಿಕೊಡುವ ಜತೆಗೆ ವಿಶ್ವಕ್ಕೆ ಅಗತ್ಯವಾದ ವಚನಗಳನ್ನು ನೀಡುವ ಮೂಲಕ ಶ್ರೀ ಜಗಜ್ಯೋತಿ ಬಸವೇಶ್ವರರು ವಿಶ್ವಮಾನವರಾದರು ಎಂದು ಶಾಸಕ ಎಚ್.ಡಿ.ರೇವಣ್ಣ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ಶ್ರೀ ಜಗಜ್ಯೋತಿ ಬಸವೇಶ್ವರರು 12ನೇ ಶತಮಾನದಲ್ಲಿ ವಚನ ಸಾಹಿತ್ಯ ಮೂಲಕ ಸರ್ವಧರ್ಮ ಸಮಾನತೆ ಸಾರುವ ಜತೆಗೆ ಇಡೀ ವಿಶ್ವಕ್ಕೆ ಶಾಂತಿ ಸಂದೇಶ ನೀಡಿದ ಶ್ರೇಷ್ಠ ವ್ಯಕ್ತಿ ಬಸವಣ್ಣ ಎಂದು ಶಾಸಕ ಎಚ್.ಡಿ.ರೇವಣ್ಣ ಅಭಿಪ್ರಾಯಪಟ್ಟರು.ಪಟ್ಟಣದ ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್ ವೈ.ಎಂ.ರೇಣುಕುಮಾರ್ ಉಪಸ್ಥಿತಿಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಆಯೋಜಿಸಿದ್ದ ಶ್ರೀ ಬಸವಣ್ಣನವರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಕಾಯಕವೇ ಕೈಲಾಸವೆಂಬ ತತ್ವದಡಿ ಜನ ಸಾಮಾನ್ಯರನ್ನು ಪ್ರೇರೇಪಿಸಿ, ಸಣ್ಣ ಕೆಲಸ ಮಾಡುವ ವ್ಯಕ್ತಿಯಿಂದ ಆಡಳಿತ ನಡೆಸುವ ವ್ಯಕ್ತಿಯ ತನಕ ಸಮಾನತೆಯ ಸಂದೇಶ ಸಾರುವ ಜತೆಗೆ ವೃತ್ತಿಯ ಪ್ರಾಮುಖ್ಯತೆಯನ್ನು ತಿಳಿಸಿಕೊಟ್ಟು, ಸಮಾನತೆಯ ಸಾರವನ್ನು ತಿಳಿಸಿಕೊಡುವ ಜತೆಗೆ ವಿಶ್ವಕ್ಕೆ ಅಗತ್ಯವಾದ ವಚನಗಳನ್ನು ನೀಡುವ ಮೂಲಕ ಶ್ರೀ ಜಗಜ್ಯೋತಿ ಬಸವೇಶ್ವರರು ವಿಶ್ವಮಾನವರಾದರು ಎಂದರು.ಬಿಇಒ ಕಚೇರಿಯ ಬಿಆರ್‌ಪಿ ನಾಗರಾಜು ಪ್ರಧಾನ ಭಾಷಣ ಮಾಡಿದರು. ಉಪ ನೋಂದಣಾಧಿಕಾರಿ ರಾಕೇಶ್, ಶಿರಸ್ತೇದಾರ್ ಲೋಕೇಶ್, ದೈಹಿಕ ಶಿಕ್ಷಣ ಪರಿವೀಕ್ಷಕ ಮಹೇಶ್ ಜಿ., ಶಿಕ್ಷಕ ಸುಜಾತ ಅಲಿ, ವೀರಶೈವ ಜನಾಂಗದ ಮುಖಂಡರಾದ ಎಚ್. ಆರ್‌.ಸುರೇಶ್ ಕುಮಾರ್, ಜೈಶಂಕರ್, ವಕೀಲರಾದ ರಾಜಶೇಖರಯ್ಯ ಹಾಗೂ ಮೋಹನ್ ಕುಮಾರ್, ಕುಮಾರಸ್ವಾಮಿ ಎಂ.ಸಿ., ತೆರಣ್ಯ ರವಿ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!