ಕೊಪ್ಪಳ(ಯಲಬುರ್ಗಾ):
ಯಲಬುರ್ಗಾ ಪಟ್ಟಣದ ಶ್ರೀಸಾಯಿ ಪ್ಯಾಲೇಸ್ ಆವರಣದಲ್ಲಿ ಬಸವ ಶಿವಯೋಗ ಸಮಿತಿ ಆಯೋಜಿಸಿದ್ದ ಬಸವ ದರ್ಶನ ಪ್ರವಚನದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮತ್ತು ೨೭೮೯ನೇ ತುಲಾಭಾರ ಸ್ವೀಕರಿಸಿ ಮಾತನಾಡಿದರು.
ಸಮಾಜಕ್ಕೆ ಬಸವಣ್ಣನವರ ಕೊಡುಗೆ ಅನನ್ಯ. ಅವರ ಮೌಲ್ಯ ಮತ್ತು ಚಿಂತನೆಗಳು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ೧೨ನೇ ಶತಮಾನದಲ್ಲಿ ಮೂಢನಂಬಿಕೆ ಹೋಗಲಾಡಿಸಲು ಹಾಗೂ ಜಾತಿರಹಿತ ಸಮಾಜ ನಿರ್ಮಿಸಲು ಬಸವಣ್ಣನವರು ಶ್ರಮಿಸಿದರು. ಜಾತಿ ಪದ್ಧತಿ ಹೋಗಲಾಡಿಸಿ ಸಮ-ಸಮಾಜ ನಿರ್ಮಿಸಲು ಅಂತರ್ಜಾತಿ ವಿವಾಹಗಳ ಮೂಲಕ ಕಲ್ಯಾಣ ಕ್ರಾಂತಿ ಮಾಡಿದರು. ಇಂತಹ ಮಹಾನ್ ವ್ಯಕ್ತಿಯ ವಚನಗಳನ್ನು ಸ್ಮರಿಸಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ಬಸವ ಶಿವಯೋಗ ಸಮಿತಿ ಅಧ್ಯಕ್ಷ ಸಂಗಣ್ಞ ಟೆಂಗಿನಕಾಯಿ, ಕಾಯಕವೇ ಕೈಲಾಸ ಎಂಬ ಬಸವಣ್ಣನವರ ನುಡಿಯಂತೆ ಕಾಯಕದ ಮಹತ್ವ ಅರಿತು ಪ್ರತಿಯೊಬ್ಬರು ಶ್ರಮಜೀವಿಯಾಗಬೇಕು. ಕಾಯಕ ಮಾಡುವಾಗ ಪಾರದರ್ಶಕತೆ ಹಾಗೂ ಪ್ರಾಮಾಣಿಕತೆಯಿಂದಿರಬೇಕು ಎಂದು ಹೇಳಿದರು.
ವಕೀಲರ ಸಂಘದ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು. ಈ ವೇಳೆ ವಕೀಲರ ಸಂಘಧ ನೂತನ ಅಧ್ಯಕ್ಷ ಸುಭಾಷಚಂದ್ರ ಹೊಂಬಳ, ಡಾ. ಬಿ.ವಿ. ಇಟಗಿ, ಆನಂದ ಉಳ್ಳಾಗಡ್ಡಿ, ಮುದಕಪ್ಪ ಸಜ್ಜನ, ಸಂಗಣ್ಣ ಕರಂಡಿ, ಮಲ್ಲಿಕಾರ್ಜುನ ಟೆಂಗಿನಕಾಯಿ, ವಿರೂಪಾಕ್ಷಪ್ಪ ಹನುಮಶೆಟ್ಟಿ, ಯು.ಎಸ್. ಮೆಣಸಗೇರಿ, ಎಂ.ಎಸ್. ನಾಯ್ಕರ, ಮಹಾಂತೇಶ ಈಟಿ, ಬಸವರಾಜ ತುರಕಾಣಿ, ಅನ್ನಪೂರ್ಣ ಟೆಂಗಿನಕಾಯಿ, ಶಕುಂತಲಾದೇವಿ ಮಾಲಿಪಾಟೀಲ, ದೇವಪ್ಪ ವಾಲ್ಮೀಕಿ, ಕಲ್ಲಯ್ಯ ಕಲ್ಲೂರ, ಅನುಸೂಯಾ ಟೆಂಗಿನಕಾಯಿ, ವೀರೇಶ ಟೆಂಗಿನಕಾಯಿ ಇತರರಿದ್ದರು.