ರಾಮನಗರ: ಬಸವಣ್ಣನವರು ಜಾತಿ ಪದ್ಧತಿ ಸೇರಿದಂತೆ ಸಾಮಾಜಿಕ ಪಿಡುಗುಗಳ ವಿರುದ್ಧ 12ನೇ ಶತಮಾನದಲ್ಲಿಯೇ ದನಿಯೆತ್ತಿದವರು. ಅವರ ಆದರ್ಶಗಳು, ತತ್ವಗಳು ನಮ್ಮ ಜೀವನದುದ್ದಕ್ಕೂ ಅಳವಡಿಸಿಕೊಳ್ಳಬೇಕು ಎಂದು ಸಾಹಿತಿ ವಿ.ಎಚ್.ರಾಜಶೇಖರ್ ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಶುಕ್ರವಾರ ನಡೆದ ಜಗಜ್ಯೋತಿ ಬಸವೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಸವಣ್ಣನವರ ಕ್ರಾಂತಿಕಾರಕ ಹೆಜ್ಜೆಗಳು ಇಂದಿಗೂ ಪ್ರಸ್ತುತ. ಸಾವಿರಕ್ಕೂ ಹೆಚ್ಚು ವಚನಗಳನ್ನು ರಚಿಸುವ ಮೂಲಕ ಸಮಾಜದ ಸುಧಾರಣೆಗೆ ಪಣತೊಟ್ಟವರು. ಅವರ ವಚನಗಳನ್ನು ಅಧ್ಯಯನ ಮಾಡಿದರೆ ನಮ್ಮಲ್ಲಿ ಬದಲಾವಣೆ ಸಾಧ್ಯವಾಗಲಿದೆ ಎಂದರು.ವಚನ ಸಾಹಿತ್ಯದ ಕೊಡುಗೆ:
ನುಡಿದಂತೆ ನಡೆದು ಯಾವ ಪದವಿಗೂ ಆಸೆ ಪದದೆ ಜನರಲ್ಲಿ ಭಕ್ತಿಯ ಬೀಜಬಿತ್ತಿದರು. ಶರಣರು ಅಜ್ಞಾನದ ಕಡೆ ತೆರಳದಂತೆ ನವ ಸಮಾಜ ನಿರ್ಮಾಣಕ್ಕೆ ಸಾಕ್ಷಿಯಾಗಿ ಕನ್ನಡ ಸಾಹಿತ್ಯಕ್ಕೆ ವಚನ ಸಾಹಿತ್ಯದ ಕೊಡುಗೆ ನೀಡಿದ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ. ಸಮಾಜ ಸುಧಾರಣೆಗಾಗಿ ಎಲ್ಲಾ ಜಾತಿ ಧರ್ಮಗಳನ್ನು ಒಂದೆಡೆ ಸೇರಿಸಿ ಸಾಮಾಜಿಕ ಆಂದೋಲನ ನಡೆಸಿ ಬದಲಾವಣೆಯತ್ತ ಸಮಾಜವನ್ನು ಕೊಂಡೊಯ್ದರು. ಬದಲಾವಣೆಯತ್ತ ಸಮಾಜವನ್ನು ಕೊಂಡೊಯ್ಯಬೇಕು ಎಂಬ ಮಹದಾಸೆ ಅವರಲ್ಲಿತ್ತು ಎಂದು ರಾಜಶೇಖರ ಹೇಳಿದರು.ಸಮ ಸಮಾಜ ಕಟ್ಟಿ:
ಅಖಿಲ ಭಾರತ ವೀರಶೈವ ಮಹಾಸಭಾ ರಾಮನಗರ ಜಿಲ್ಲಾಧ್ಯಕ್ಷ ಪೊಲೀಸ್ ರುದ್ರೇಶ್ ಮಾತನಾಡಿ, ಬಸವಣ್ಣನವರು ಸಾಮಾಜಿಕ ನ್ಯಾಯದ ಹರಿಕಾರರು. ಹೆಣ್ಣು ಮಕ್ಕಳಿಗೆ ಅಂದೇ ಪ್ರಾಧಾನ್ಯತೆ ನೀಡಿ ಸಮಾಜದಲ್ಲಿ ಉನ್ನತ ಸ್ಥಾನ ನೀಡಿದವರು.ಬಸವಣ್ಣರವರು ಕಾಯಕದ ಮೂಲಕ ಜನರಿಗೆ ಹತ್ತಿರವಾದವರು. ಅನುಭವ ಮಂಟಪದ ಮೂಲಕ ಸರ್ವ ಸಮಾಜವನ್ನು ಒಂದೆಡೆ ಸೇರಿಸಿ ನವ ಸಮಾಜ ಕಟ್ಟಿ ಎಲ್ಲರೂ ಒಂದೇ ಎಂದು ಸಾರಿದವರು. ವಿಶ್ವಗುರು ಬಸವಣ್ಣನವರು ಅವರ ಆದರ್ಶಗಳು ನಮೆಗೆಲ್ಲರಿಗೂ ಸ್ಫೂರ್ತಿ ಅವರ ಜಯಂತಿ ನಮ್ಮೆಲ್ಲರ ಪಾಲಿನ ಪುಣ್ಯ ಎಂದರು.
ಬದಲಾವಣೆ ಬಯಸಿದ ಬಸವಣ್ಣ:ತಾಪಂ ಮಾಜಿ ಅಧ್ಯಕ್ಷ ಕೇತೋಹಳ್ಳಿ ಕೆ.ಎಸ್. ಶಂಕರಯ್ಯ ಮಾತನಾಡಿ, ಶೋಷಿತ ಸಮುದಾಯದವರ ಒಳಿತಿಗಾಗಿ ತಮ್ಮ ವಚನಗಳ ಮೂಲಕವೇ ಸಮಾಜದಲ್ಲಿ ಬಹುದೊಡ್ಡ ಬದಲಾವಣೆ ತರಲು ಬಸವಣ್ಣರವರು ಬಯಸಿದವರು. ವಿಶ್ವಗುರು ಬಸವಣ್ಣನವರು ತಮ್ಮ ವಚನಗಳ ಮೂಲಕ ಜ್ಞಾನಭಂಡಾರವನ್ನು ಬಿತ್ತಿದರು. ಶಿಲ್ಪದಂತೆ ಜ್ಞಾನವನ್ನು ಕೆತ್ತಿ ಮನುಕುಲಕ್ಕೆ ಜ್ಞಾನ ಬುತ್ತಿ ತುಂಬಿದರು. ಅವರು ಕೊಟ್ಟ ಜ್ಞಾನ ಮನುಕುಲದ ಸಾಮಾಜಿಕ ಒಗ್ಗಟ್ಟಿಗೆ ಬುನಾದಿಯಾಗಿದೆ. ವಿಶ್ವಗುರು ಬಸವಣ್ಣನವರ ದಾರಿಯಲ್ಲಿ ಸಾಗಿದರೆ ಸಮಾಜ ಹಾಗೂ ಜೀವನ ಸುಖಕರವಾಗಿರುತ್ತದೆ. ಅವರ ತತ್ವ, ಆದರ್ಶಗಳು, ಚಿಂತನೆಗಳು ಇಂದಿಗೂ ಪ್ರಸ್ತುತವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಬಿನೋಯ್, ವೀರಶೈವ ಸಂಘದ ತಾಲೂಕು ಅಧ್ಯಕ್ಷ ಎಂ.ಆರ್. ಶಿವಕುಮಾರಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಮೇಶ್ ಬಾಬು, ಪ್ರಾಧಿಕಾರ ಮಾಜಿ ಅಧ್ಯಕ್ಷ ಎಸ್.ಆರ್. ನಾಗರಾಜು, ಮುಖಂಡರಾದ ರುದ್ರದೇವರು, ವಿಭೂತಿಕೆರೆ ಶಿವಲಿಂಗಯ್ಯ ರಾಜಶೇಖರ್, ಜಗದೀಶ್, ಉಮೇಶ್, ರಾ.ಶಿ. ಬಸವರಾಜು, ಶಿವಾನಂದ್, ಶಂಕರ್, ಲೋಕೇಶ್, ವೀರಣ್ಣ ಪಟ್ಟಣಶೆಟ್ಟಿ, ಶಿವಸ್ವಾಮಿ, ಸಿದ್ದಲಿಂಗಮೂರ್ತಿ, ಬಸವರಾಜು, ಮಧುಸೂದನ್, ಧನುಷ್, ಕಾಳಯ್ಯ, ಪುಟ್ಟರಾಜು ಮತ್ತಿತರರು ಉಪಸ್ಥಿತರಿದ್ದರು.ಬಾಕ್ಸ್.......
ಅನುಭವ ಮಂಟಪ ಸಂಸತ್‌ಗೆ ಮಾದರಿಜಾತಿ, ಮತ, ಕಂದಾಚಾರದ ವಿರುದ್ಧ ಬಸವಣ್ಣರವರು ಗಟ್ಟಿ ಧ್ವನಿ ಎತ್ತಿದವರು. ತಮ್ಮನ್ನು ತಾವು ತಿದ್ದುವ ಮೂಲಕ ಸಮಾಜವನ್ನು ತಿದ್ದಿದರು. ವಚನಗಳ ಮೂಲಕ ಬದುಕಿನ ದಾರಿಯನ್ನು ಜನರಿಗೆ ಸನ್ಮಾರ್ಗದಲ್ಲಿ ತೋರಿಸಿಕೊಟ್ಟವರು ಬಸವಣ್ಣ. ಅನುಭವ ಮಂಟಪದ ಮೂಲಕ ನವ ಸಮಾಜ ನಿರ್ಮಾಣಕ್ಕೆ ಅಡಿಗಲ್ಲು ಹಾಕಿ ಸಮಾಜದ ಎಲ್ಲಾ ವರ್ಗಗಳ ಸುಖ ಶಾಂತಿಗೆ ಮುನ್ನುಡಿ ಬರೆದರು. ಅಂದಿನ ಅನುಭವ ಮಂಟಪದಲ್ಲಿ ಎಲ್ಲಾ ಜಾತಿ ವರ್ಗದವರಿಗೆ ಅವಕಾಶ ಕಲ್ಪಿಸಿಕೊಟ್ಟು ಅಂದೇ ಸಮಾನತೆಯನ್ನು ಸಾರಿದ್ದರು. ಅದು ಇಂದಿನ ಸಂಸತ್‌ಗೆ ಮಾದರಿಯಾಗಿದೆ. ವಿಶ್ವಕ್ಕೆ ಮೌಲ್ಯಯುತ, ಸರಳೀಕೃತ ಧರ್ಮ ನೀಡಿದ ಮಹಾನ್ ದಾರ್ಶನಿಕ ಜಗಜ್ಯೋತಿ ಬಸವೇಶ್ವರರು ಅವರು ವಿಶ್ವದ ಮಹಾನ್ ಗುರು. 12ನೇ ಶತಮಾನ ಇಡೀ ವಿಶ್ವದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡುವ ಕಾಲ ಎಂದು ಸಾಹಿತಿ ರಾಜಶೇಖರ್ ಹೇಳಿದರು.
10ಕೆಆರ್ ಎಂಎನ್ 1.ಜೆಪಿಜಿರಾಮನಗರದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಹಯೋಗದಲ್ಲಿ ಶುಕ್ರವಾರ ಜಗಜ್ಯೋತಿ ಬಸವೇಶ್ವರ ಜಯಂತಿ ಆಚರಿಸಲಾಯಿತು.