ದಾಬಸ್‌ಪೇಟೆ: ದೇವರು ಮತ್ತು ಧರ್ಮದ ಹೆಸರಿನಲ್ಲಿ ನಡೆಯುವ ಜಾತ್ರೆ ವಿಶೇಷ ಪೂಜೆ ಆಚರಣೆಗಳು ಮತ್ತು ಸಂಪ್ರದಾಯಗಳು ಜನರಲ್ಲಿ ಭಕ್ತಿ ಭಾವ ಮತ್ತು ಸ್ನೇಹ ಸೌಹಾರ್ದತೆ ಬೆಸೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಬಸವೇಶ್ವರ ದೇವಾಲಯ ಅರ್ಚಕ ನಾಗರಾಜು ತಿಳಿಸಿದರು.
ಅರ್ಚಕ ಜಯರಾಮು ಮಾತನಾಡಿ, ದೇವರ ಸೇವೆ ಮಾಡಿದರೆ ಒಂದು ಮನೆಯಷ್ಟೇ ಅಲ್ಲ, ಇಡೀ ಸಮಾಜಕ್ಕೆ ಒಳಿತಾಗುತ್ತದೆ. ದೇವಾಲಯ ಕಟ್ಟುವುದು ಗ್ರಾಮಸ್ಥರ ಸಂಕಲ್ಪ. ಸೇವೆ ಮಾಡಿಸಿಕೊಳ್ಳುವುದು ದೇವರ ಕರ್ತವ್ಯ, ಪ್ರತಿಫಲ ನೀಡುವುದು ದೇವರಿಗೆ ಬಿಟ್ಟದ್ದು ಎಂದರು.
ಜಾತ್ರಾ ಮಹೋತ್ಸವ ಪ್ರಯುಕ್ತ ಬಸವೇಶ್ವರ ಸ್ವಾಮಿಗೆ ಅಕ್ಕಿಪೂಜೆ ಏರ್ಪಡಿಸಲಾಗಿತ್ತು. ನಂತರ ಬಸವೇಶ್ವರ ಸ್ವಾಮಿಗೆ ಹಾಗೂ ಅಂಜನೇಯ ದೇವರ ಗ್ರಾಮದಲ್ಲೆಡೆ ಬೆಳ್ಳಿ ರಥದಲ್ಲಿ ಮೆರವಣಿಗೆ ಮಾಡಲಾಯಿತು.ಪ್ರಸಾದ ವ್ಯವಸ್ಥೆ: ಬಸವೇಶ್ವರ ಜಯಂತಿ ಪ್ರಯುಕ್ತ ಬಸವೇಶ್ವರ ದೇವಾಲಯದ ಆವರಣದಲ್ಲಿ ಬೆಳಿಗ್ಗೆ 7 ಗಂಟೆಯಿಂದ ತಿಂಡಿ ವ್ಯವಸ್ಥೆ ಹಾಗೂ ಮಧ್ಯಾಹ್ನ 12 ಗಂಟೆಗೆ ಊಟದ ವ್ಯವಸ್ಥೆ ಮಾಡಿದ್ದರು. ಪೋಟೋ 3 : ಹೊನ್ನೇನಹಳ್ಳಿ ಗ್ರಾಮದಲ್ಲಿ ಬಸವ ಜಯಂತಿ ಜಾತ್ರಾ ಮಹೋತ್ಸವ ಪ್ರಯುಕ್ತ ಬಸವೇಶ್ವರ ಸ್ವಾಮಿ ಹಾಗೂ ಅಂಜನೇಯ ದೇವರನ್ನು ಬೆಳ್ಳಿ ರಥದಲ್ಲಿ ಕೂರಿಸಿ ಮೆರವಣಿಗೆ ಮಾಡಲಾಯಿತು.