ಲಿಂಗಾಯತ ಧರ್ಮದ ಸ್ಥಾಪಕರಾದ ಬಸವಣ್ಣ ನವರು ಸಮಾನತೆಯ ಪ್ರತಿಪಾದನೆ ಮತ್ತು ಜಾತಿ ವ್ಯವಸ್ಥೆಯನ್ನು ತಿರಸ್ಕರಿಸಿ ಕಾಯಕವೇ ಕೈಲಾಸ ಎಂಬ ಘೋಷ ವಾಕ್ಯ ವನ್ನು ನೀಡಿದರು.
ಕನ್ನಡಪ್ರಭ ವಾರ್ತೆ ಕಲಬುರಗಿಅಪ್ರತಿಮ ಸಮಾಜ ಸುಧಾರಕ ಮತ್ತು ಆಧ್ಯಾತ್ಮಿಕ ನಾಯಕ, ಮಹಾತ್ಮಾ ಬಸವೇಶ್ವರರ 891 ನೇ ಜಯಂತಿಯು ಶರಣಬಸವೇಶ್ವರ ಸಂಯುಕ್ತ ವಸತಿ ಪದವಿಪೂರ್ವ ಕಾಲೇಜು ನಲ್ಲಿ ಆಚರಿಸಲಾಯಿತು .
ಮಹಾವಿದ್ಯಾಲಯದ ಪ್ರಭಾರಿ ಡಾ.ಶ್ರೀಶೈಲ್ ಜಿ ಹೊಗಾಡೆ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ,ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿ ಲಿಂಗಾಯತ ಧರ್ಮದ ಸ್ಥಾಪಕರಾದ ಬಸವಣ್ಣ ನವರು ಸಮಾನತೆಯ ಪ್ರತಿಪಾದನೆ ಮತ್ತು ಜಾತಿ ವ್ಯವಸ್ಥೆಯನ್ನು ತಿರಸ್ಕರಿಸಿ ಕಾಯಕವೇ ಕೈಲಾಸ ಎಂಬ ಘೋಷ ವಾಕ್ಯ ವನ್ನು ನೀಡಿದರು ಎಂದರು.
ಎಲ್ಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಮಹಾನ್ ಸುಧಾರಕನನ್ನು ಗೌರವಿಸಿದರು.ಸಮಾನತೆಯ ಆಧಾರದ ಮೇಲೆ ಮತ್ತು ಜಾತಿ, ಧರ್ಮ ಅಥವಾ ಲಿಂಗದ ಆಧಾರದ ಮೇಲೆ ತಾರತಮ್ಯದಿಂದ ಮುಕ್ತವಾದ ಸಮಾಜವನ್ನು ಬೆಳೆಸುವ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು. ಕಾರ್ಯ ಕ್ರಮದಲ್ಲಿ ಮಹಾವಿದ್ಯಾಲಯದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.