ಬಸವೇಶ್ವರ ಜಯಂತಿ ಉತ್ಸವಕ್ಕೆ ಅದ್ಧೂರಿ ಚಾಲನೆ

KannadaprabhaNewsNetwork |  
Published : Apr 28, 2025, 12:46 AM IST
ಕಕಕಕಕಕ | Kannada Prabha

ಸಾರಾಂಶ

ವಿಶ್ವಕ್ಕೆ ಸಮಾನತೆಯ ದಿವ್ಯ ಸಂದೇಶ ನೀಡಿರುವ ಜಗಜ್ಯೋತಿ ಬಸವಣ್ಣನವರ ಜಯಂತಿ ಉತ್ಸವದ ನಿಮಿತ್ತ ಬೆಳಗಾವಿಯ ಗೋವಾವೇಸ್‌ದ ಬಸವೇಶ್ವರ ವೃತ್ತದಲ್ಲಿ ಬೈಕ್ ರ‍್ಯಾಲಿಗೆ ಭವ್ಯವಾದ ಚಾಲನೆ ನೀಡಲಾಯಿತು.

ಕನ್ನಡಪ್ರಭ ವಾರ್ತೆ ಬೆಳಗಾವಿ

ವಿಶ್ವಕ್ಕೆ ಸಮಾನತೆಯ ದಿವ್ಯ ಸಂದೇಶ ನೀಡಿರುವ ಜಗಜ್ಯೋತಿ ಬಸವಣ್ಣನವರ ಜಯಂತಿ ಉತ್ಸವದ ನಿಮಿತ್ತ ಬೆಳಗಾವಿಯ ಗೋವಾವೇಸ್‌ದ ಬಸವೇಶ್ವರ ವೃತ್ತದಲ್ಲಿ ಬೈಕ್ ರ‍್ಯಾಲಿಗೆ ಭವ್ಯವಾದ ಚಾಲನೆ ನೀಡಲಾಯಿತು. ಕಾರಂಜಿಮಠದ ಗುರುಸಿದ್ಧ ಮಹಾಸ್ವಾಮೀಜಿ, ನಾಗನೂರು ರುದ್ರಾಕ್ಷಿಮಠದ ಡಾ.ಅಲ್ಲಮಪ್ರಭು ಮಹಾಸ್ವಾಮೀಜಿಯವರು ಸಾನ್ನಿಧ್ಯ ವಹಿಸಿದ್ದರು. ಬೆಳಗಾವಿ ಲೋಕಸಭಾ ಸದಸ್ಯರಾದ ಜಗದೀಶ ಶೆಟ್ಟರ, ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರು ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ರಾಷ್ಟ್ರೀಯ ಉಪಾಧ್ಯಕ್ಷ ಡಾ.ಪ್ರಭಾಕರ ಕೋರೆ, ಶಾಸಕರಾದ ಅಭಯ ಪಾಟೀಲ, ಮಾಜಿ ಎಂಎಲ್‌ಸಿ ಮಹಾಂತೇಶ ಕವಟಗಿಮಠ ಬಸವಣ್ಣನವರ ಪ್ರತಿಮೆಗೆ ಪೂಜೆಯನ್ನು ಸಲ್ಲಿಸಿ, ಷಟ್ಸಸ್ಥಲ ಧ್ವಜಾರೋಹಣ ಮಾಡಿದರು. ಬಸವಣ್ಣನವರ ವಚನಗಳನ್ನು ಪಠಿಸಿ ಸಂದೇಶಗಳನ್ನು ಸಾರಿದರು. ಈ ಸಂದರ್ಭದಲ್ಲಿ ನೂರಾರು ಬಸವ ಭಕ್ತರು ಬಸವಣ್ಣನವರ ಜಯಘೋಷಗಳನ್ನು ಕೂಗಿದರು.

ಮಹಾಸಭೆ ಜಿಲ್ಲಾ ಘಟಕದ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ, ಜಾಗತಿಕ ಮಹಾಸಭೆ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ರೊಟ್ಟಿ, ಲಿಂಗಾಯತ ಸಂಘಟನೆ ಈರಣ್ಣ ದೇಯನ್ನವರ, ರಾಷ್ಟ್ರೀಯ ಬಸವ ದಳದ ಅಶೋಕ ಬೆಂಡಿಗೇರಿ, ಚಂದ್ರಶೇಖರ ಬೆಂಬಳಗಿ, ಶಂಕರ ಗುಡಸ, ಎಂ.ಬಿ.ಜೀರಲಿ ಮೊದಲಾದ ಗಣ್ಯರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ, ಜಾಗತಿಕ ಲಿಂಗಾಯತ ಮಹಾಸಭೆ, ಲಿಂಗಾಯತ ಸಂಘಟನೆ, ರಾಷ್ಟ್ರೀಯ ಬಸವದಳ, ಲಿಂಗಾಯತ ಮಹಿಳಾ ಸಮಾಜ, ಲಿಂಗಾಯತ ಸೇವಾ ಸಮಿತಿ, ಬಸವ ಕಾಯಕಜೀವಿಗಳ ಸಂಘ, ಬಸವೇಶ್ವರ ಯುವಕ ಸಂಘ, ಮಹಾಂತೇಶ ನಗರದ ಲಿಂಗಾಯತ ಧರ್ಮ ಮಹಾಸಭಾ, ಸಹ್ಯಾದ್ರಿನಗರದ ಲಿಂಗಾಯತ ಕ್ಷೇಮಾಭಿವೃದ್ಧಿ ಸಂಘ, ಲಿಂಗಾಯತ ಬಿಜ್ನಿಸ್ ಪೋರಂ, ಶಾಹಾಪೂರದ ದಾನಮ್ಮದೇವಿ ಮಂದಿರ ಮತ್ತು ಬಸವೇಶ್ವರ ಕಲ್ಯಾಣ ಮಂಟಪ ಟ್ರಸ್ಟ್ ಈ ಮೊದಲಾದ ಸಂಘ ಸಂಸ್ಥೆಗಳು ಪಾಲ್ಗೊಂಡಿದ್ದವು. ಡಾ.ಪ್ರಭಾಕರ ಕೋರೆಯವರು ಬೈಕ್ ರ‍್ಯಾಲಿಗೆ ಚಾಲನೆ ನೀಡಿದರು. ಸಾವಿರಾರು ಬೈಕ್ ಸವಾರರು ಬಸವಣ್ಣನವರ ಷಟ್ಸಸ್ಥಲ ಧ್ವಜದೊಂದಿಗೆ ಬೆಳಗಾವಿ ಪ್ರಮುಖ ಬೀದಿಗಳಾದ ಆರ್‌ಪಿಡಿ ಸರ್ಕಲ್, ಬಿಗ್ ಬಜಾರ್, ಅನಗೋಳ ಮುಖ್ಯ ರಸ್ತೆ, ವಡಗಾಂವ ಮುಖ್ಯ ರಸ್ತೆ, ನಾಥ್ ಪೈ ಸರ್ಕಲ್ ಶಹಾಪುರ, ಖಾಡೆ ಬಜಾರ್, ಶಿವಾಜಿ ಗಾರ್ಡನ್ ಕಪಿಲೇಶ್ವರ್ ಮಾರ್ಗ, ರಾಮದೇವ್ ಗಲ್ಲಿ, ಸಾಮಾದೇವಿ ಗಲ್ಲಿ, ಕಾಲೇಜ್ ರಸ್ತೆ, ಚೆನ್ನಮ್ಮ ವೃತ್ತ, ಆರ್.ಎನ್.ಶೆಟ್ಟಿ, ನಾಗನೂರು ಮಠ, ಲಿಂಗಾಯತ ಭವನ, ಶ್ರೀನಗರ ಉದ್ಯಾನ, ಮಹಾಂತೇಶ್ ನಗರ, ಹರ್ಷಾ ಹೋಟೆಲ್ ಮೂಲಕ ರಾಮತೀರ್ಥ ನಗರದಲ್ಲಿ ಕೊನೆಗೊಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ