ಬಸವೇಶ್ವರ ಜಯಂತಿ, ಎತ್ತುಗಳ ಮೆರವಣಿಗೆ

KannadaprabhaNewsNetwork |  
Published : May 12, 2024, 01:19 AM IST
 ಪೊಟೋ ಪೈಲ್ ನೇಮ್ ೧೧ಎಸ್‌ಜಿವಿ೧    ಪಟ್ಟಣದ ವಿರಕ್ತಮಠ ಓಣಿ ಇಂದ ಮೆರವಣಿಗೆ ಪ್ರಾರ೦ಭವಾಗಿ ಶಿಗ್ಗಾಂವ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೇರವಣಿಗೆ ಜರುಗಿತು.೧೧ಎಸ್‌ಜಿವಿ೧-೧    ಪಟ್ಟಣದ ವಿರಕ್ತಮಠದಲ್ಲಿ  ಜಗಜ್ಯೋತಿ ಬಸವೇಶ್ವರರ ಜಯಂತಿಯ  ಪ್ರಯುಕ್ತ ಬಸವೇಶ್ವರ ಭಾವಚಿತ್ರಕ್ಕೆ  ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ಮತ್ತು ಸದಾಶಿವ ಪೇಟೆಯ ಗದ್ದಿಗೆಯ ಮಹಾಸ್ವಾಮಿಗಳು ಪೂಜೆ ಸಲ್ಲಿಸಿದರು. | Kannada Prabha

ಸಾರಾಂಶ

ಜಗಜ್ಯೋತಿ ಬಸವೇಶ್ವರ ಜಯಂತಿಯ ಪ್ರಯುಕ್ತ ಬಸವೇಶ್ವರ ಭಾವಚಿತ್ರದೊಂದಿಗೆ ಎತ್ತುಗಳ ಜೀವಂತ ಬಸವಣ್ಣನನ್ನು ಶೃಂಗರಿಸಿ ಪಾದಪೂಜೆ ಮಾಡಿ ಮೆರವಣಿಗೆ ಮಾಡಲಾಯಿತು.

ಶಿಗ್ಗಾವಿ: ಜಗಜ್ಯೋತಿ ಬಸವೇಶ್ವರ ಜಯಂತಿಯ ಪ್ರಯುಕ್ತ ಬಸವೇಶ್ವರ ಭಾವಚಿತ್ರದೊಂದಿಗೆ ಎತ್ತುಗಳ ಜೀವಂತ ಬಸವಣ್ಣನನ್ನು ಶೃಂಗರಿಸಿ ಪಾದಪೂಜೆ ಮಾಡಿ ಮೆರವಣಿಗೆ ಮಾಡಲಾಯಿತು.

ವಿಶ್ವ ಗುರು ಬಸವಣ್ಣನವರ ಜಯಂತಿ ಅಂಗವಾಗಿ ಶ್ರೀ ಬಸವ ಸೇವಾ ಸಮಿತಿ ವಿರಕ್ತಮಠ ಓಣಿ ಹಾಗೂ ಸದ್ಭಕ್ತರು ಎತ್ತುಗಳ ಮೆರವಣಿಗೆ ನಡೆಸಿದರು.

ಪಟ್ಟಣದ ವಿರಕ್ತಮಠ ಓಣಿಯಿಂದ ಮೆರವಣಿಗೆ ಪ್ರಾರ೦ಭವಾಗಿ ಶಿಗ್ಗಾವಿ ಪಟ್ಟಣದ ಟೆಂಪೋ ಸ್ಟ್ಯಾಂಡ್, ಚೆನ್ನಮ ವೃತ್ತ, ಜೋಳದಪೇಟೆ, ಹಳಪೇಟಿ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಜೂಲಾ, ಕೋಂಬೆಣಸು, ಗೆಜ್ಜೆ, ಬಸವೇಶ್ವರ ಫೋಟೋಗಳನ್ನು ನೊಗದ ಮೇಲೆ ಹೊತ್ತು ಎತ್ತುಗಳು ಶೃಂಗರಿಸಿದ್ದು ವಿಶೇಷವಾಗಿತ್ತು.

ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ಮತ್ತು ಸದಾಶಿವ ಪೇಟೆಯ ಗದ್ದಿಗೆಯ ಮಹಾ ಸ್ವಾಮಿಗಳು ಮೆರವಣಿಗೆಗೆ ಚಾಲನೆ ನೀಡಿದರು ನ೦ತರ ಬಸವಲಿಂಗ ಸ್ವಾಮೀಜಿಗಳು ಬಸವಣ್ಣನವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಂಗಪ್ಪ ಕಂಕನವಾಡ, ಶಿವಾನಂದ್ ಮ್ಯಾಗೇರಿ ಹಾಗೂ ಶಶಿಧರ್ ಯಲಿಗಾರ, ಶಂಕ್ರಪ್ಪ ಯಲಿಗಾರ, ಶಿವಣ್ಣ ಕಾರದಾನಿ, ಫಕೀರೇಶ್ ಯಲಿಗಾರ, ಪ್ರಶಾಂತ್ ಬಡ್ಡಿ, ಮುತ್ತು ಜ. ಯಲಿಗಾರ, ಮಾಲತೇಶ್ ಹಾವಣಗಿ, ಅನೀಲ ಯಲಿಗಾರ, ಬಸವರಾಜ ಹಾವನ್ನವರ, ಕಲ್ಲಪ್ಪ ವನಹಳ್ಳಿ, ದಯಾನಂದ ನಂದಿ, ವಿರುಪಾಕ್ಷಿ ಬನ್ನಿಕೊಪ್ಪ, ರಾಜಣ್ಣ ವಿರಕ್ತಮಠ, ಬಸಣ್ಣ ಕಾರಡಗಿ, ಪವನ್ ಹಾವೇರಿ, ರುದ್ರಪ್ಪ ಕುಂದಗೋಳ, ಮಂಜು ಹಿತ್ತಲಮನಿ, ಕುಮಾರ್ ಮಳಲಿ, ರಾಜು ಮಳ್ಳೂರ್, ಮಂಜು ವನ್ನಿಹಳ್ಳಿ, ರಮೇಶ್ ಹೊರಟೂರ್, ನವೀನ್ ಯಲವಗಿ, ಚಂದ್ರು ಜವಳಗಟ್ಟಿ, ಮಂಜು ಜವಳಗಟ್ಟಿ ಅನೇಕರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!