ಕನ್ನಡಪ್ರಭ ವಾರ್ತೆ ವಿಜಯಪುರ
ವರ್ಣರಹಿತ, ವರ್ಗರಹಿತ, ಲಿಂಗರಹಿತ ಸಮಾಜ ಕಟ್ಟುವ ಮೂಲಕ ಅಂದಿನ ಅನುಭವ ಮಂಟಪದಲ್ಲಿಯೂ ಮಹಿಳೆಯರಿಗೆ ಮುಕ್ತವಾಗಿ ಸ್ತ್ರೀ ಸಮಾನತೆಯ ಮೂಲಕ ಭಾಗವಹಿಸಲು ಅವಕಾಶ ಕಲ್ಪಿಸಿಕೊಟ್ಟ ಶ್ರೀ ಬಸವೇಶ್ವರರು ಪ್ರಥಮ ಸಂಸತ್ತಿನ ರಚನಾಕಾರರು ಎಂದು ಹಿರಿಯ ಸಾಹಿತಿ ಡಾ.ರೇಖಾ ಪಾಟೀಲ ಹೇಳಿದರು.ವಿಜಯಪುರದ ಕಸಾಪ ಸಭಾಂಗಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನೇತೃತ್ವದಲ್ಲಿ ಬಸವ ಜಯಂತಿ ಪ್ರಯುಕ್ತ ನಡೆದ ಕವಿಗೋಷ್ಠಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಬಸವಣ್ಣನವರ ವ್ಯಕ್ತಿತ್ವವೇ ಒಂದು ಕಾವ್ಯ. ಜೀವನದ ಹಂಗನ್ನು ತೊರೆದು ಸಾಮಾಜಿಕ ಚಿಂತನೆಯ ಹರಿಕಾರರಾಗಿ, ಮಹಾಮಾನವತಾವಾದಿಯಾಗಿ, ವಿಶ್ವಗುರುವಾಗಿ, ಸಾಂಸ್ಕೃತಿಕ ನಾಯಕರಾಗಿ ಹೊರಹೊಮ್ಮಿದ ಆದರ್ಶ ಸಮಾಜದ ನಿರ್ಮಾಣದಲ್ಲಿ ತಮ್ಮ ವಚನಗಳ ಮೂಲಕ ಇಡೀ ಸಮಾಜವನ್ನು ಧರ್ಮದ ನೆಲೆಗಟ್ಟಿನಲ್ಲಿಯೇ ಕಟ್ಟಿದ ಶ್ರೇಯಸ್ಸು ವಿಶ್ವಗುರು ಬಸವಣ್ಣನವರಿಗೆ ಸಲ್ಲುತ್ತದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ ಮಾತನಾಡಿ, ೯೦೦ ವರ್ಷಗಳ ಹಿಂದೆ ಆಗಿ ಹೋದ ಮಹಾನ್ ಕ್ರಾಂತಿ ಪುರುಷರಾದ ಜಗಜ್ಯೋತಿ ಬಸವೇಶ್ವರರು ಇಂದಿಗೂ ನಮಗೆಲ್ಲ ಮಾದರಿ. ಬಸವಣ್ಣನವರಲ್ಲಿದ್ದ ಪ್ರಾಮಾಣಿಕತೆ ಹಾಗೂ ಸಮಾಜದ ಪ್ರತಿಯೊಬ್ಬ ವ್ಯಕ್ತಿಯ ಬಗ್ಗೆ ಅವರಿಗೆ ಇರುವ ಕಾಳಜಿ ಕಳಕಳಿಗಳೇ ಅವರನ್ನು ಇಂದು ಅವತಾರಿ ಪುರುಷರಾಗಿ ದೈವತ್ವದ ಸ್ಥಾನವನ್ನು ತಂದುಕೊಡಲು ಸಾಧ್ಯವಾಗಿದೆ ಎಂದರು.ವಾಗ್ಮಿ ಸವಿತಾ ದೇಶಮುಖ ಮಾತನಾಡಿ, ವೈಚಾರಿಕ ಚಿಂತನೆಗಳನ್ನು ತಮ್ಮ ವಚನಗಳಲ್ಲಿ ಬಿತ್ತುವ ಮೂಲಕ ಮೂಢನಂಬಿಕೆಗಳನ್ನು, ಸಮಾಜದ ಗೊಡ್ಡು ಸಂಪ್ರದಾಯಗಳನ್ನು ಕಿತ್ತೊಗೆಯುವ ಮೂಲಕ ಸಮಾನತೆಯ ಸಂದೇಶವನ್ನು ಇಡೀ ಜಗತ್ತಿಗೆ ಸಾರಿದ್ದಾರೆ ಎಂದರು.
ಈ ವೇಳೆ ಕವಿತಾ ಕಲ್ಯಾಣಪ್ಪಗೋಳ, ಅಂಬಿಕಾ ಕರಕಪ್ಪಗೋಳ, ಪ್ರೊ. ಸಿದ್ದು ಸಾವಳಸಂಗ, ಕುಮಾರಿ ಹೇಮಾ ಬಿರಾದಾರ, ಭಾರತಿ ಗೊಂಗಡಿ, ವೈಶಾಲಿ ಬಿಳೂರ, ಶಾಂತಲಾ ಪಾಟೀಲ, ಶಿಲ್ಪಾ ಹಂಜಿ ದಾನಮ್ಮ ಹೂಗಾರ, ಆಕಾಶ ಮ್ಯಾಗೇರಿ, ಶಿವಾಜಿ ಮೋರೆ, ಸಿದ್ಧನಗೌಡ ಕಾಶಿನಕುಂಟಿ, ಸಂತೋ?ಕುಮಾರ ಬಂಡೆ, ಸುರೇಶ ಪೂಜಾರಿ, ಶಿವಲೀಲಾ ಕೋರವಾರ, ಸುಜಾತಾ ಹ್ಯಾಳದ, ರಜಿಯಾ ದಳವಾಯಿ, ಶೋಭಾ ಹರಿಜನ, ಸಂತೋಷ ಪಾಟೀಲ, ಸುನಂದಾ ಕೋರಿ, ಸಂಗಮೇಶ ಕರೆಪ್ಪಗೋಳ, ಶೋಭಾ ಹರಿಜನ, ವೈಶಾಲಿ ಬೀಳೂರ, ಸುಜಾತಾ ಹ್ಯಾಳದ, ಶಿವಲೀಲಾ ಕೊರವಾರ, ರಜಿಯಾ ದಳವಾಯಿ, ಸುನಂದಾ ಕೋರಿ, ಸಂತೋಷಕುಮಾರ ಬಂಡೆ, ಸುರೇಶ ಪೂಜಾರಿ, ಶಿವಾಜಿ ಮೋರೆ, ದಾನಮ್ಮ ಹೂಗಾರ ಶ್ರೀ ಬಸವೇಶ್ವರರ ಕುರಿತು ಕವನ ವಾಚನ ಮಾಡಿದರು. ಕಮಲಾ ಮುರಾಳ, ಮಡಿವಾಳಮ್ಮ ನಾಡಗೌಡ, ಶಾಂತಾ ವಿಭೂತಿ, ಶೇ?ರಾವ ಮಾನೆ ಉಪಸ್ಥಿತರಿದ್ದರು. ಚೈತ್ರಾವತಿ, ಪೂಜಾ ಹಾಗೂ ರಾಗಿಣಿ ಪ್ರಾರ್ಥಿಸಿದರು. ಡಾ. ಮಾಧವ ಗುಡಿ ಸ್ವಾಗತಿಸಿದರು. ಡಾ ಆನಂದ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿದ್ಧನಗೌಡ ಕಾಶಿನಕುಂಟಿ ಕಾರ್ಯಕ್ರಮ ನಿರೂಪಿಸಿದರು. ಕುಮಾರಿ ಅನ್ನಪೂರ್ಣ ಬೆಳ್ಳೆಣ್ಣವರ ವಂದಿಸಿದರು.