ಅಸ್ಪೃಶ್ಯತೆ ವಿರುದ್ಧ ಅರಿವು ಮೂಡಿಸಿದ ಬಸವೇಶ್ವರರು: ರಾಧಾಕೃಷ್ಣ

KannadaprabhaNewsNetwork |  
Published : May 13, 2024, 12:04 AM IST
ಚಿಕ್ಕಮಗಳೂರು ತಾಲ್ಲೂಕಿನ ಇಂದಾವರ ಗ್ರಾಮದ ಅನ್ನಪೂರ್ಣ ವೃದ್ದಾಶ್ರಮದಲ್ಲಿ ಏರ್ಪಡಿಸಲಾಗಿದ್ದ ಜಗಜ್ಯೋತಿ ಬಸವೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಕೆ.ಟಿ. ರಾಧಾಕೃಷ್ಣ, ಕೆ.ಬಿ. ಸುಧಾ, ಗಂಗಾಧರ್ ಇದ್ದರು. | Kannada Prabha

ಸಾರಾಂಶ

ಚಿಕ್ಕಮಗಳೂರು, ಅಸ್ಪೃಶ್ಯತೆ, ಅಸಮಾನತೆ, ಮೇಳು-ಕೀಳು ಎಂಬ ಭೇದ - ಭಾವ ತೊರೆದು ಸರ್ವರು ಸಮಾನರೆಂಬ ಸಂದೇಶವನ್ನು ಎಲ್ಲೆಡೆ ಪಸರಿಸಿದವರು ಕಾಯಕ ಯೋಗಿ ಬಸವಣ್ಣನವರು ಎಂದು ಬಿಎಸ್ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ಹೇಳಿದರು.

ವೃದ್ಧಾಶ್ರಮದಲ್ಲಿ ಜಗಜ್ಯೋತಿ ಬಸವೇಶ್ವರರ ಜಯಂತಿ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಅಸ್ಪೃಶ್ಯತೆ, ಅಸಮಾನತೆ, ಮೇಳು-ಕೀಳು ಎಂಬ ಭೇದ - ಭಾವ ತೊರೆದು ಸರ್ವರು ಸಮಾನರೆಂಬ ಸಂದೇಶವನ್ನು ಎಲ್ಲೆಡೆ ಪಸರಿಸಿದವರು ಕಾಯಕ ಯೋಗಿ ಬಸವಣ್ಣನವರು ಎಂದು ಬಿಎಸ್ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ಹೇಳಿದರು.ತಾಲೂಕಿನ ಇಂದಾವರ ಗ್ರಾಮದ ಅನ್ನಪೂರ್ಣ ವೃದ್ಧಾಶ್ರಮದಲ್ಲಿ ಏರ್ಪಡಿಸಲಾಗಿದ್ದ ಜಗಜ್ಯೋತಿ ಬಸವೇಶ್ವರ ಜಯಂತಿ ಯಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು. ಪ್ರಜಾತಂತ್ರವನ್ನು ರೂಪಿಸುವ ಸಲುವಾಗಿ ಅಂದಿನ ಕಾಲ ಘಟ್ಟದಲ್ಲಿ ಅನುಭವ ಮಂಟಪ ಸ್ಥಾಪಿಸಿದ ಮಹಾಪುರುಷ ಬಸವಣ್ಣ ಎಂದ ಅವರು, ಸರ್ಕಾರಗಳು ಬಸವಣ್ಣರ ತತ್ವಗಳು ಹಾಗೂ ನಾವೆಲ್ಲರೂ ಒಂದೇ ಎಂಬ ಅಂಶಗಳನ್ನು ಸಂವಿಧಾನದಡಿ ಜಾರಿಗೊಳಿಸಿದರೆ ದೇಶದಲ್ಲಿ ಜಾತೀಯತೆ ತೊಲಗಿ, ಸರ್ವರು ಸಮಾನರೆಂದು ಜೀವಿಸಲು ಸಾಧ್ಯವಾಗಲಿದೆ ಎಂದರು.

12ನೇ ಶತಮಾನದ ಕಾಲಘಟ್ಟದಲ್ಲಿ ಮೂಲನಿವಾಸಿಗಳನ್ನು ಪ್ರಾಣಿಗಳಿಗಿಂತ ಕಡೆಯಾಗಿ ಕಾಣಲಾಗುತ್ತಿತ್ತು. ಬಸವಣ್ಣ ಶಕ್ತಿ ಯಾಗಿ ಉದಯಿಸಿ ಸಮಾಜದಲ್ಲಿ ಮಾನವೀಯತೆ ಮರೆದು ತುಳಿತಕ್ಕೆ ಒಳಗಾಗಿದ್ದ ದೀನ, ದಲಿತರ ಬಗ್ಗೆ ಹೆಚ್ಚು ಕಾಳಜಿ ಎಲ್ಲರೂ ಒಂದೇ ಎಂಬ ಸಂದೇಶವನ್ನು ನಾಡಿಗೆ ಹಬ್ಬಿಸಿದರು ಎಂದರು.ನಾಡಿನಲ್ಲಿ ಬಲಿಷ್ಟ ಸಮುದಾಯ ದಲಿತ ಹಾಗೂ ಹಿಂದುಳಿದವರನ್ನು ಬಳಸಿಕೊಂಡು ಎಲ್ಲವನ್ನು ಕಸಿದುಕೊಂಡಿತ್ತು. ಪ್ರಪಂಚದಲ್ಲಿ ಮಾನವನ ರಕ್ತ ಕೆಂಪು, ಗಾಳಿ, ನೀರು ಎಲ್ಲರಿಗೂ ಮೀಸಲೆಂಬುದನ್ನು ಅರಿವಿರಲಿಲ್ಲ. ಮಹಿಳೆಯರಿಗೆ ವಾಕ್ ಸ್ವಾತಂತ್ರ್ಯ ಇಲ್ಲದಿದ್ದ ವೇಳೆಯಲ್ಲಿ ಬಸವಣ್ಣ ಬೆಳಕಿಗಾಗಿ ಧಾವಿಸಿ ಬದಲಾವಣೆಗೆ ಮುನ್ನುಡಿ ಬರೆದವರು ಎಂದರು.ಡಾ. ಬಿ.ಆರ್.ಅಂಬೇಡ್ಕರ್ ದೇಶಕ್ಕೆ ನೀಡಿರುವ ಸಂವಿಧಾನದಲ್ಲಿ ಬಸವಣ್ಣನವರ ಅನೇಕ ಅಂಶಗಳು ಒಳಗೊಂಡಿವೆ. ಯಥಾವತ್ತಾಗಿ ಸಂವಿಧಾನ ದೇಶದಲ್ಲಿ ಜಾರಿಗೊಳಿಸಿದರೆ ಬಡವ ಶ್ರೀಮಂತ, ಮೇಲು ಕೀಳು, ಅಸಮಾನತೆ ಎಲ್ಲವೂ ನಾಶವಾಗಿ ಭಾರತ ಅದ್ಬುತ ದೇಶವಾಗುವುದರಲ್ಲಿ ಸಂಶಯವಿಲ್ಲ ಎಂದು ತಿಳಿಸಿದರು.ಬಿಎಸ್ಪಿ ರಾಜ್ಯ ಕಾರ್ಯದರ್ಶಿ ಕೆ.ಬಿ.ಸುಧಾ ಮಾತನಾಡಿ, ವಿಶ್ವಗುರು ಬಸವಣ್ಣ ಬಾಲ್ಯದಿಂದಲೇ ಚುರುಕು ಹಾಗೂ ಮೌಢ್ಯ ವನ್ನು ನಿಗ್ರಹಿಸುವ ಗುಣವಿತ್ತು. ಕಾಲಕ್ರಮೇಣ ಕಾಯಕ ಯೋಗಿ ಎಂದು ಬಿಂಬಿತರಾಗಿ ದುಡಿಮೆಯಲ್ಲೇ ದೇವರನ್ನು ನೋಡುವ ಪ್ರವೃತ್ತಿ ಬೆಳೆಸಿಕೊಂಡಿದ್ದರು. ಪ್ರಾಮಾಣಿಕತೆ ಹೊಂದಿದ್ದರೆ ಯಶಸ್ಸುಗಳಿಸಲು ಸಾಧ್ಯವೆಂಬ ಪರಿಪಾಠ ಬೋಧಿಸಿದ ನಾಯಕ ಎಂದರು.

ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಬಿಎಸ್ಪಿ ಸಂಯೋಜಕ ಗಂಗಾಧರ್ ಮಾತನಾಡಿ, ಬಡತನ ನಿರ್ಮೂಲನೆ, ಜಾತೀ ಯತೆ, ಮೇಲುಕೀಳು ಇರಬಾರದೆಂಬ ದೃಷ್ಟಿಯಿಂದ ಆ ಕಾಲದಲ್ಲಿ ಅಂತರ್ಜಾತಿ ವಿವಾಹ ನಡೆಸಿ ಎಲ್ಲರೂ ಒಂದೇ ಎಂಬ ಸಂದೇಶವನ್ನು ಬಿತ್ತರಿಸಿದ ಮಹಾಪುರುಷರು ಬಸವಣ್ಣ ಎಂದು ಬಣ್ಣಿಸಿದರು.ಕಾರ್ಯಕ್ರಮವನ್ನು ವೃದ್ಧಾಶ್ರಮದ ಸದಸ್ಯೆ ನಂಜಮ್ಮ ಉದ್ಘಾಟಿಸಿದರು. ಬಳಿಕ ಮಧ್ಯಾಹ್ನದ ಊಟದ ವ್ಯವಸ್ಥೆಯಲ್ಲಿ ವೃದ್ಧರಿಗೆ ಕಲ್ಪಿಸಲಾಯಿತು. ಈ ಸಂದರ್ಭದಲ್ಲಿ ಪಕ್ಷದ ಉಪಾಧ್ಯಕ್ಷೆ ಕೆ.ಎಸ್.ಮಂಜುಳಾ, ಪ್ರಧಾನ ಕಾರ್ಯದರ್ಶಿ ಆರ್. ವಸಂತ್, ಮುಖಂಡರಾದ ಹೊನ್ನಪ್ಪ, ಕಲಾವತಿ, ಟಿ.ಎಚ್.ರತ್ನ, ಜಯಚಂದ್ರ, ಶಂಕರ್, ಜಯಮ್ಮ, ವೃದ್ಧಾಶ್ರಮದ ವ್ಯವಸ್ಥಾಪಕ ಶಿವಣ್ಣ ಹಾಜರಿದ್ದರು.12 ಕೆಸಿಕೆಎಂ 1ಚಿಕ್ಕಮಗಳೂರು ತಾಲೂಕಿನ ಇಂದಾವರ ಗ್ರಾಮದ ಅನ್ನಪೂರ್ಣ ವೃದ್ಧಾಶ್ರಮದಲ್ಲಿ ಏರ್ಪಡಿಸಲಾಗಿದ್ದ ಜಗಜ್ಯೋತಿ ಬಸವೇಶ್ವರ ಜಯಂತಿಯಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಕೆ.ಟಿ. ರಾಧಾಕೃಷ್ಣ, ಕೆ.ಬಿ. ಸುಧಾ, ಗಂಗಾಧರ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ