ಕನ್ನಡಪ್ರಭ ವಾರ್ತೆ ಬಾಗಲಕೋಟೆ
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪುಣ್ಯಕ್ಷೇತ್ರಗಳ ನದಿಯಲ್ಲಿ ಸ್ನಾನ ಮಾಡುವಾಗ ಟೂಥ್‌ಪೇಸ್ಟ್, ಸಾಬೂನು, ಶಾಂಪೂ ಇತ್ಯಾದಿಗಳನ್ನು ಬಳಸಿದರೆ ಅವುಗಳ ರಾಸಾಯನಿಕಗಳು ಮೀನು, ಮೊಸಳೆಯಂತಹ ಜಲಚರ ಜೀವಿಗಳಿಗೆ ಅಪಾಯಕಾರಿಯಾಗುತ್ತದೆ ಎಂದರು.
ರಾಸಾಯನಿಕ ನೀರನ್ನು ಬಳಕೆ ಮಾಡುವುದರಿಂದ ಕುಡಿಯಲು, ಪೂಜೆ ಮಾಡಲು ಮತ್ತಿತರ ಕೆಲಸ ಕಾರ್ಯಗಳಿಗೆ ಬಳಸುತ್ತವೆ. ಅಲ್ಲದೇ ಶಾಂಪೂ ಕವರ್‌ಗಳನ್ನು ಬಿಸಾಡುವುದರಿಂದಲೂ ನದಿಗಳು ಮಲೀನಗೊಳ್ಳುತ್ತದೆ ಎಂದು ಹೇಳಿದರು.ಕೂಡಲಸಂಗಮದಲ್ಲಿ ಸಂಕ್ರಾಂತಿ ಹಬ್ಬದಂಗವಾಗಿ ನಡೆಯುವ ಪುಣ್ಯಸ್ನಾನದಲ್ಲಿ ಲಕ್ಷಾಂತರ ಭಕ್ತರು ಭಾಗವಹಿಸಲಿದ್ದಾರೆ. ಅಲ್ಲಿ ನಮ್ಮ ಫೌಂಡೇಶನ್‌ನಿಂದ ಜಾಗೃತಿ ಮೂಡಿಸಲಾಗುತ್ತದೆ. ರಾಸಾಯನಿಕ ಮಿಶ್ರಿತ ಸಾಬೂನು, ಶಾಂಪೂ ಬಳಸದೆ ಅರಿಷಿಣ, ಎಳ್ಳು, ಕಡಲೆಹಿಟ್ಟು, ಬೇವಿನ ಎಲೆ, ಲಿಂಬೆ ಸಿಪ್ಪೆಯಿಂದ ಸ್ನಾನ ಮಾಡಬೇಕು ಎಂದು ಅಲ್ಲಿಯ ಭಕ್ತಾದಿಗಳಿಗೆ ಅರಿವು ಮೂಡಿಸುತ್ತೇವೆ. ಅದಕ್ಕಾಗಿ ನಮ್ಮ ಫೌಂಡೇಶನ್‌ನಿಂದ ಭಕ್ತಾದಿಗಳಿಗೆ ಉಚಿತವಾಗಿ 1 ಲಕ್ಷಕ್ಕಿಂತ ಹೆಚ್ಚು ಕಡಲೆಹಿಟ್ಟಿನ ಚೀಟನ್ನು ಹಂಚಲಾಗುವುದು. ತಕ್ಕಮಟ್ಟಿಗಾದರೂ ವಿಷಮುಕ್ತ ಮಾಡುವ ಸಂಕಲ್ಪ ಹೊಂದಿದ್ದೇವೆ. ಇಂತಹ ಅಭಿಯಾನಕ್ಕೆ ಅನೇಕರು ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.