ಆಸ್ತಿ ತೆರಿಗೆ ಬಾಕಿದಾರರಿಗೆ ಬಡ್ಡಿ, ದಂಡ ಮನ್ನಾ: ಪಾಲಿಕೆ

KannadaprabhaNewsNetwork |  
Published : Mar 01, 2024, 02:23 AM IST
ಬಜೆಟ್‌ | Kannada Prabha

ಸಾರಾಂಶ

ಜು.31ರೊಳಗೆ ತೆರಿಗೆ ಕಟ್ಟಿ ದಂಡ ತಪ್ಪಿಸಿಕೊಳ್ಳಿ ಎಂದು ಬಿಬಿಎಂಪಿ ತಿಳಿಸಿದೆ. ಈ ಮೂಲಕ 15 ಲಕ್ಷ ಆಸ್ತಿಗಳಿಗೆ ಅನುಕೂಲವಾಗಲಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಮಂಡಿಸಲಾಗಿರುವ ಬೆಂಗಳೂರಿಗರಿಗೆ ಯಾವುದೇ ತೆರಿಗೆ ಹೊರೆ ಹೊರಿಸದಂತೆ ಬಿಬಿಎಂಪಿ ಬಜೆಟ್‌ ಮಂಡಿಸಲಾಗಿದೆ. ಅದರ ಬದಲು ಆಸ್ತಿ ಮಾಲೀಕರ ಮೇಲಿದ್ದ ತೆರಿಗೆ ಹೊರೆ ಇಳಿಸುವ ಯೋಜನೆಯನ್ನು ಘೋಷಿಸಲಾಗಿದೆ.

ಬಿಬಿಎಂಪಿ ಬಜೆಟ್‌ನಲ್ಲಿ ಈ ಬಾರಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಹಾಗೂ ಎಸ್‌ಎಎಸ್‌ ಅಡಿ ಆಸ್ತಿ ವಿವರ ತಪ್ಪು ನೀಡಿದ ಆಸ್ತಿ ಮಾಲೀಕರಿಗೆ ಸಂತಸದ ಸುದ್ದಿ ನೀಡಲಾಗಿದೆ. ಅದರಂತೆ ತೆರಿಗೆ ಬಾಕಿ ತೆರಿಗೆ ಉಳಿಸಿಕೊಂಡಿರುವ 15 ಲಕ್ಷ ಆಸ್ತಿಗಳಿಗೆ ಒನ್‌ ಟೈಂ ಸೆಟಲ್‌ಮೆಂಟ್‌ (ಒಟಿಎಸ್‌) ಅಡಿಯಲ್ಲಿ ಶೇ.100ರಷ್ಟು ಬಡ್ಡಿ ಮತ್ತು ದಂಡ ಮನ್ನಾ ಮಾಡುವ ಯೋಜನೆ ಘೋಷಿಸಲಾಗಿದೆ. 2024ರ ಜುಲೈ 31ರೊಳಗೆ ಬಾಕಿ ತೆರಿಗೆ ಪಾವತಿಸಿದರೆ ಬಾಕಿ ತೆರಿಗೆ ಮೇಲೆ ವಿಧಿಸಲಾಗುವ ದಂಡ ಮತ್ತು ಬಡ್ಡಿ ವಿನಾಯಿತಿ ನೀಡುವುದಾಗಿ ಘೋಷಿಸಲಾಗಿದೆ. ಅದರಿಂದ ಬಿಬಿಎಂಪಿಗೆ ₹2,500 ಕೋಟಿ ಆದಾಯ ಖೋತಾ ಆಗಲಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

5 ಪಾಲಿಕೆಗೆ ಜಿಎಸ್‌ಟಿಯಲ್ಲಿ ಪಾಲು ಕೊಡಲು ಆಯೋಗ ಶಿಫಾರಸು
ಮೆಜೆಸ್ಟಿಕ್‌ನಲ್ಲಿ ಸಿಂಗಾಪುರ ಮೀರಿಸುವ ಪ್ರಾಜೆಕ್ಟ್‌ ಮೆಜೆಸ್ಟಿಕ್‌