ಕನ್ನಡಪ್ರಭ ವಾರ್ತೆ ಚಿತ್ತಾಪುರ
ಶುಕ್ರವಾರ ಬೆಳ್ಳಂಬೆಳಗೆ ಕಾಲೇಜು ವಿದ್ಯಾರ್ಥಿನಿಯರು ವಾರ್ಡನ್ ಆಗಿ ಸೇವೆ ಸಲ್ಲಿಸುತ್ತಿದ್ದ ಪ್ರಿಯಾಂಕಾ ಅವರನ್ನು ಧಿಡೀರ್ ಅಂತಾ ವರ್ಗಾವಣೆ ಮಾಡಿ ಹೊಸದಾಗಿ ವಾರ್ಡನ್‌ಆಗಿ ವರ್ಗಾವಣೆಗೊಂಡ ಅನಿತಾ ಬಜಂತ್ರಿ ಅವರನ್ನು ನೇಮಿಸಿರುವದನ್ನು ವಿರೋಧಿಸಿ ಅವರನ್ನು ಕೂಡಲೇ ವರ್ಗಾವಣೆ ಮಾಡಬೇಕು ಎಂದು ಪ್ರತಿಭಟನೆ ಮಾಡಿದ್ದರು ಇದನ್ನು ಕನ್ನಡಪ್ರಭದಲ್ಲಿ ವರದಿ ಪ್ರಕಟಗೊಂಡಿದ್ದರ ಹಿನ್ನಲೆಯಲ್ಲಿ ಜಿಲ್ಲಾ ಬಿಸಿಎಂ ಅಧಿಕಾರಿ ಪ್ರಭು ದೊರೆ ವಸತಿ ನಿಲಯಕ್ಕೆ ಭೆಟ್ಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಚರ್ಚೆ ಮಾಡಿ ಅವರ ವಿದ್ಯಾಭ್ಯಾಸಕ್ಕೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲು ವಾರ್ಡನ್ ಆಗಿ ನಿಯುಕ್ತಿಗೊಂಡಿದ್ದ ಅನಿತಾ ಬಜಂತ್ರಿ ಅವರನ್ನು ಬಿಸಿಎಂ ಮೆಟ್ರೀಕ್ ಪೂರ್ವ ವಸತಿ ನಿಲಯಕ್ಕೆ ನಿಯೊಜನೆಯನ್ನು ಮಾಡಿ ತಾಲೂಕು ವಿಸ್ತಿರ್ಣಾಧಿಕಾರಿ ಸುನಿತಾ ಅವರನ್ನು ತಾತ್ಕಾಲಿಕವಾಗಿ ಕಾಲೇಜು ವಸತಿ ನಿಲಯಕ್ಕೆ ನಿಯೊಜನೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.