ಬಿಕಾಂ ಇ-ಕಾಮರ್ಸ್‌ ಆಪರೇಷನ್ಸ್‌ ಕೋರ್ಸ್‌ ಆರಂಭ

KannadaprabhaNewsNetwork |  
Published : Jun 02, 2024, 01:45 AM IST
 ಬಿಕಾಂ ಇ-ಕಾಮರ್ಸ್‌ ಆಪರೇಷನ್ಸ್‌ ಕೋರ್ಸ್‌ ಆರಂಭ | Kannada Prabha

ಸಾರಾಂಶ

ಪ್ರಸಕ್ತ ಸಾಲಿನಿಂದ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇ–ಕಾಮರ್ಸ್‌ ಆಪರೇಷನ್ಸ್ ಕೋರ್ಸ್‌ಗಳಾದ ಇ-ಕಾಮರ್ಸ್‌, ಬಿಸಿಎ ಹಾಗೂ ವಿಜ್ಞಾನ ವಿಭಾಗದಲ್ಲಿ ರಸಾಯನಶಾಸ್ತ್ರ ಕೋರ್ಸ್‌ಗಳು ಆರಂಭವಾಗಲಿವೆ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಪ್ರಸಕ್ತ ಸಾಲಿನಿಂದ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇ–ಕಾಮರ್ಸ್‌ ಆಪರೇಷನ್ಸ್ ಕೋರ್ಸ್‌ಗಳಾದ ಇ-ಕಾಮರ್ಸ್‌, ಬಿಸಿಎ ಹಾಗೂ ವಿಜ್ಞಾನ ವಿಭಾಗದಲ್ಲಿ ರಸಾಯನಶಾಸ್ತ್ರ ಕೋರ್ಸ್‌ಗಳು ಆರಂಭವಾಗಲಿವೆ.ರಾಜ್ಯದ ಐದು ಕಾಲೇಜಿನಲ್ಲಿ ಬಿಕಾಂ ಇ-ಕಾಮರ್ಸ್‌ ಆಪರೇಷನ್ಸ್‌ ಕೋರ್ಸ್‌ ಆರಂಭಕ್ಕೆ ಸರ್ಕಾರ ಅನುಮತಿ ನೀಡಿದ್ದು ಐದು ಕಾಲೇಜುಗಳಲ್ಲಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಒಂದಾಗಿದೆ. ಪ್ರಸಕ್ತ ಸಾಲಿನಲ್ಲಿ ಆರಂಭವಾಗಿರುವ ಬಿಕಾಂ ಇನ್‌ –ಕಾಮರ್ಸ್‌ ಆಪರೇಷನ್ಸ್ ಕೋರ್ಸ್‌ನಲ್ಲಿ ಎರಡು ವರ್ಷ ವಿದ್ಯಾರ್ಥಿಗಳು ಕಾಲೇಜಿನಲ್ಲಿ ಕಡ್ಡಾಯವಾಗಿ ವ್ಯಾಸಂಗ ಮಾಡಿದರೆ ಅಂತಿಮ ವರ್ಷದಲ್ಲಿ ಸರ್ಕಾರ ನಿಗದಿಪಡಿಸಿದ ಕಂಪನಿಗಳಲ್ಲಿ ತರಬೇತಿ ಪಡೆದುಕೊಳ್ಳಬೇಕು. ಒಂದು ವರ್ಷ ಕಂಪನಿಯಲ್ಲಿ ವಿದ್ಯಾರ್ಥಿಗಳಿಗೆ ಸರ್ಕಾರ ಹತ್ತು ಸಾವಿರ ಶಿಷ್ಯ ವೇತನ ಕೂಡ ನೀಡಲಿದೆ. ಈ ಕೋರ್ಸ್‌ ವಿದ್ಯಾರ್ಥಿಗಳ ಉದ್ಯೋಗ ಮತ್ತು ಕೌಶಲ್ಯ ಶಿಕ್ಷಣಕ್ಕೆ ಹೆಚ್ಚಿನ ಅವಕಾಶ ಕೂಡ ಸಿಗಲಿದೆ.

ಕೌಶಲ್ಯಧಾರಿತ ಕೋರ್ಸ್‌ಗಳನ್ನು ನಡೆಸಲು ರಾಜ್ಯ ಐದು ಕಾಲೇಜಿಗೆ ಸರ್ಕಾರ ಅವಕಾಶ ಮಾಡಿಕೊಟ್ಟಿದ್ದು, ಅದರಲ್ಲಿ ಗುಂಡ್ಲುಪೇಟೆ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸೇರಿರುವುದು ತಾಲೂಕಿನ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಶಿಕ್ಷಣದ ಜೊತೆಗೆ ತರಬೇತಿ, ಹಣಗಳಿಕೆ ಹಾಗೂ ಉದ್ಯೋಗದ ಭರವಸೆ ಇರುವುದು ಕೂಡ ವಿದ್ಯಾರ್ಥಿಗಳ ಭವಿಷ್ಯಕ್ಕೆ ಪೂರಕವಾಗಿದೆ. ಈ ಹೊಸ ಕೋರ್ಸ್‌ಗೆ ಸರ್ಕಾರಿ ಕಾಲೇಜಿಗೆ ಅವಕಾಶ ನೀಡಿರುವುದು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಲೇ ೩ನೇ ವರ್ಷದಲ್ಲಿ ಉದ್ಯೋಗ ತರಬೇತಿ ಜೊತೆಗೆ ಸ್ಟೈಫಂಡ್‌ ಸಿಗಲಿದೆ. ವಿದ್ಯಾರ್ಥಿಗಳು ಓದುವ ಹಂತದಲ್ಲೇ ಆದಾಯಗಳಿಸಲು ಒಂದೊಳ್ಳೆ ಅವಕಾಶವನ್ನು ಸರ್ಕಾರ ಮಾಡಿ ಕೊಟ್ಟಿದೆ ಎಂದು ಇ-ಕಾಮರ್ಸ್‌ ಆಪರೇಷನ್ಸ್‌ ಮುಖ್ಯಸ್ಥೆ ಡಾ.ಶಾಲಿನಿ ಹೇಳಿದ್ದಾರೆ.ಪ್ರಸಕ್ತ ಸಾಲಿನಿಂದಲೇ ಗುಂಡ್ಲುಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಇ-ಕಾಮರ್ಸ್‌ ಆಪರೇಷನ್ಸ್‌ ಹೊಸ ಕೋರ್ಸ್‌ ಗಳು ಆರಂಭವಾಗಿವೆ. ಇದು ತಾಲೂಕಿನ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಹೊಸ ಕೋರ್ಸ್‌ಗಳ ಲಾಭ ಪಡೆದು ವಿದ್ಯಾರ್ಥಿಗಳು ಉದ್ಯೋಗ ಗಳಿಸಲು ಪ್ರಯತ್ನಿಸಲಿ.

-ಎಚ್.ಎಂ.ಗಣೇಶ್‌ ಪ್ರಸಾದ್‌, ಶಾಸಕ

PREV

Latest Stories

ಡಿಕೆಶಿ ಪರ ದಾವಣಗೆರೆಯಲ್ಲಿ 101 ತೆಂಗಿನಕಾಯಿ ಸೇವೆ
ಬೆಂಗಳೂರು-ತುಮಕೂರುಪ್ರಯಾಣ, ಜನ ಹೈರಾಣ
ಸ್ಮಾರ್ಟ್‌ ಮೀಟರ್‌ ವಿವಾದ: ಸಚಿವಜಾರ್ಜ್ ವಿರುದ್ಧ ಬಿಜೆಪಿ ದೂರು