ಶಾಖೆಯಲ್ಲಿ ಮಧ್ಯಾಹ್ನದಿಂದ ರಾತ್ರಿ 10ರವರೆಗೆ ಗ್ರಾಹಕರಿಗೆ ಸೇವೆ ಒದಗಿಸಿ ಕೊಡಲು ನಿರ್ಧರಿಸಿದ್ದೇವೆ
ಕೊಟ್ಟೂರು: ಬಿಡಿಸಿಸಿ ಬ್ಯಾಂಕ್ ನ ಶಾಖೆ ಗ್ರಾಹಕರಿಗೆ ಅನುಕೂಲ ಮತ್ತು ವಿವಿಧ ಬಗೆಯ ಸೌಲಭ್ಯ ಕಲ್ಪಿಸಿ ಕೊಡಬೇಕೆನ್ನುವ ಕಾರಣಕ್ಕಾಗಿ ಕೊಟ್ಟೂರು ಎಪಿಎಂಸಿ ಬಳಿ ಶುಕ್ರವಾರದಿಂದ ಪ್ರಾರಂಭಿಸಿದ್ದೇವೆ. ಉಜ್ಜಯಿನಿ ಜಗದ್ಗುರು ಸಿದ್ದಲಿಂಗ ರಾಜದೇಶಿ ಕೇಂದ್ರ ಶಿವಾಚಾರ್ಯ ಸ್ವಾಮೀಜಿ ಶಾಖಾ ಬ್ಯಾಂಕಿನ ಆರಂಭಕ್ಕೆ ಚಾಲನೆ ನೀಡಿದ್ದಾರೆ ಎಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ. ತಿಪ್ಪೇಸ್ವಾಮಿ ಹೇಳಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಡಿಸಿಸಿ ಬ್ಯಾಂಕ್ ಸದಾ ರೈತರ ಮತ್ತು ಗ್ರಾಹಕರ ಹಿತರಕ್ಷಣೆ ಅದ್ಯತೆಯನ್ನಾಗಿ ಮಾಡಿಕೊಂಡು ವಿವಿಧ ಬಗೆಯ ಯೋಜನೆ ಲಾಭ ತ್ವರಿತಗತಿಯಾಗಿ ಸೇವೆ ಸಲ್ಲಿಸುತ್ತಿದ್ದೇವೆ. ಪೂರ್ಣ ಪ್ರಮಾಣದ ಪಾರದರ್ಶಕತೆ ಎಲ್ಲ ಬಗೆಯ ವ್ಯವಹಾರ ಡಿಜಟಲೀಕರಣ ಮೂಲಕವೇ ಮಾಡಲಾಗುತ್ತಿದೆ. ಯಾವುದೇ ಬಗೆಯ ಗೊಂದಲಗಳಿಗೆ ಅಸ್ಪದವಿಲ್ಲದಂತೆ ಬ್ಯಾಂಕಿಂಗ್ ವ್ಯವಸ್ಥೆಗಳ ಸೇವೆ ಎಲ್ಲ ಶಾಖೆಗಳ ಮೂಲಕ ಸಮರ್ಥವಾಗಿ ನಿಭಾಯಿಸುತ್ತಿದ್ದೇವೆ ಎಂದು ಹೇಳಿದರು.ಇತ್ತೀಚಿಗೆ ಉತ್ತಂಗಿ, ಎಮ್ಮಿಗನೂರು, ತಂಬ್ರಳ್ಳಿಗಳಲ್ಲಿ ಬಿಡಿಸಿಸಿ ಬ್ಯಾಂಕಿನ ಹೊಸ ಶಾಖೆ ಆರಂಭಿಸಿದ್ದು, ಕೊಟ್ಟೂರಿನಲ್ಲಿ ಹಾಲಿ ನಿರ್ವಹಿಸುತ್ತಿರುವ ಬ್ಯಾಂಕಿನ ಶಾಖೆಯಲ್ಲಿ ಒತ್ತಡ ಹೆಚ್ಚಾದ ಕಾರಣಕ್ಕಾಗಿ ಎಪಿಎಂಸಿ ಶಾಖೆಯನ್ನು ಹೊಸದಾಗಿ ಆರಂಭಿಸಲು ಮುಂದಾಗಿದ್ದೇವೆ. ಈ ಶಾಖೆಯಲ್ಲಿ ಮಧ್ಯಾಹ್ನದಿಂದ ರಾತ್ರಿ 10ರವರೆಗೆ ಗ್ರಾಹಕರಿಗೆ ಸೇವೆ ಒದಗಿಸಿ ಕೊಡಲು ನಿರ್ಧರಿಸಿದ್ದೇವೆ ಎಂದರು. ಬಿಡಿಸಿಸಿ ಬ್ಯಾಂಕಿನ ಬಗ್ಗೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮ ಅವರು ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿ ತಾಲೂಕಿನ ಮೂಲೆಕಟ್ಟಿನ ಕೆಲ ಗ್ರಾಮಗಳ ವಿವರ ಕಳುಹಿಸಿ ಬಿಡಿಸಿಸಿ ಬ್ಯಾಂಕಿನ ಮೂಲಕ ಗ್ರಾಮದ ಜನರಿಗೆ ಸೇವೆ ಒದಗಿಸಲು ಸೂಚಿಸಿದ್ದಾರೆ ಎಂದ ಅವರು, ಉತ್ತಮ ಬ್ಯಾಂಕ್ ಆಡಳಿತ ನಿರ್ವಹಣೆ ಮತ್ತು ಗ್ರಾಹಕ ಸ್ನೇಹಿ ಕಾರ್ಯ ನಿರ್ವಹಣೆಗಾಗಿ ಈಗಾಗಲೇ 5 ಪ್ರಶಸ್ತಿಗಳು ಬಿಡಿಸಿಸಿ ಬ್ಯಾಂಕಿಗೆ ಲಭ್ಯವಾಗಿದ್ದು ಮತ್ತಷ್ಟು ಪ್ರಶಸ್ತಿಗಳು ಬರುವ ಆಶಾ ಭಾವನೆ ಹೊಂದಿದ್ದೇವೆ ಎಂದರು. ತಿಳಿಸಿ ಬ್ಯಾಂಕ್ ಸೇವೆಯಲ್ಲಿ ಯಾವುದೇ ಬಗೆಯ ಲೋಪ ಮತ್ತು ತಪ್ಪುಗಳು ಆಗದಂತೆ ಆಡಳಿತದಿಂದ ಸದಾ ಕಟ್ಟೇಚ್ಚರ ವಹಿಸಲಾಗಿದೆ ಎಂದು ಅವರು ಹೇಳಿದರು.
ಬಿಡಿಸಿಸಿ ಬ್ಯಾಂಕಿನ ಆಧೀನದಲ್ಲಿ ಬರುವ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯ ಎಲ್ಲ ವಿ.ಎಸ್.ಎಸ್.ಎನ್. ಗಳ ವ್ಯವಹಾರ ಮತ್ತು ರೈತ ಪರ ಯೋಜನೆಯ ಪರಾಮರ್ಶೆ ನಿರಂತರವಾಗಿ ಬಿಡಿಸಿಸಿ ಬ್ಯಾಂಕ್ ಆಡಳಿತ ಮಾಡುತ್ತ ಬಂದಿದ್ದು, 140ಕ್ಕೂ ಹೆಚ್ಚು ವಿ.ಎಸ್.ಎಸ್.ಎನ್.ಗಳು 50 ವರ್ಷದ ಸುದೀರ್ಘ ಸೇವೆ ಕಲ್ಪಿಸಿ ಕೊಡುತ್ತ ಬಂದಿದ್ದು ಇವುಗಳನ್ನು ಒಟ್ಟುಗೂಡಿಸಿ ದೊಡ್ಡ ಪ್ರಮಾಣದ 50ನೇ ವರ್ಷದ ಮಹಾ ವಾರ್ಷಿಕೋತ್ಸವ ಸಮಾರಂಭ ಹಮ್ಮಿಕೊಂಡಿದ್ದೇವೆ. ಬಹುಶಃ ನವೆಂಬರ್ ನಲ್ಲಿ ಈ ಮಹತ್ವದ ಕಾರ್ಯಕ್ರಮ ಅಚ್ಚುಕಟ್ಟಾಗಿ ಆಯೋಜಿಸಲು ಈಗಾಗಲೇ ಸಿದ್ಧತೆ ಕೈಗೊಂಡಿದ್ದೇವೆ ಎಂದರು.
ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಐ. ಧಾರುಕೇಶ, ನಿರ್ದೇಶಕ ಐಗೋಳ ಚಿದಾನಂದ, ಬ್ಯಾಂಕ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಯಪ್ರಕಾಶ ಸುದ್ದಿಗೋಷ್ಠಿಯಲ್ಲಿ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.