ಕನ್ನಡಪ್ರಭ ವಾರ್ತೆ ಅಥಣಿ
ಡೆಂಘೀ ಈಡೀಸ್ ಹೆಣ್ಣು ಸೊಳ್ಳೆಯ ಕಡಿತದಿಂದ ಹರಡುವ ರೋಗವಾಗಿದ್ದು, ಮುಂಗಾರು ಜಿಟಿ ಜಿಟಿ ಮಳೆಯಿಂದ ಮನೆಯ ಸುತ್ತಮುತ್ತ ಇರುವ ನಿರುಪಯುಕ್ತ ವಸ್ತುಗಳಾದ ತೆಂಗಿನಕಾಯಿ ಚಿಪ್ಪು, ಎಳನೀರು ಬುರುಡೆ, ಪ್ಲಾಸ್ಟಿಕ್ ಕಪ್, ಒಡೆದ ಮಡಕೆ, ಹಂಚು, ಟಯರ್ ಇತ್ಯಾದಿಗಳಲ್ಲಿ ಮಳೆನೀರು ಸಂಗ್ರಹವಾಗಿ ಸೊಳ್ಳೆಗಳ ಸಂತಾನೋತ್ಪತ್ತಿ ತಾಣವಾಗಿವೆ. ಇವುಗಳ ಸೂಕ್ತ ನಿರ್ವಹಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಪಟ್ಟಣದ ವಿವಿಧ ವಾರ್ಡಿನ ನಿವಾಸಿಗಳು ಮನೆಯ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಪ್ರತಿ ಮನೆಗಳಲ್ಲಿ ಸಂಗ್ರಹಿಸುವ ನೀರಿನ ಬ್ಯಾರೆಲ್, ಸಿಂಟೆಕ್ಸ್ ಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಸಂಗ್ರಹಿಸಿದ ನೀರಿನಲ್ಲಿ ಕ್ರಿಮಿಗಳು ಆಗದಂತೆ ಎಚ್ಚರಿಕೆ ವಹಿಸಬೇಕು. ಒಂದು ವೇಳೆ ಮನೆಯಲ್ಲಿ ಯಾರಿಗಾದರೂ ಜ್ವರ ಕಂಡು ಬಂದರೆ ನಿರ್ಲಕ್ಷ್ಯ ಮಾಡದೆ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆದುಕೊಳ್ಳಬೇಕು. ಮನೆಗಳಲ್ಲಿ ಸೊಳ್ಳೆಗಳ ನಿಯಂತ್ರಣಕ್ಕಾಗಿ ಲಿಕ್ವಿಡ್ ಇಲ್ಲವೆ ಮಾಸ್ಕಿಟ್ ಕ್ವಾಯಿಲ್ ಬಳಸಬೇಕು. ಮಲಗುವ ವೇಳೆ ಸೊಳ್ಳೆ ಪರದೆ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ನಂತರ ವಿವಿಧ ಮನೆಗಳಿಗೆ ಭೇಟಿ ನೀಡಿ ಸೊಳ್ಳೆಗಳ ನಿಯಂತ್ರಣಕ್ಕೆ ಕೈಕೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆ ಜನರಿಗೆ ತಿಳುವಳಿಕೆ ನೀಡಿದರು. ಈ ವೇಳೆ ತಾಲೂಕ ಆರೋಗ್ಯ ನಿರೀಕ್ಷಣಾಧಿಕಾರಿ ಪ್ರಭು ದೊಡಮನಿ, ಆರ್ ಜಿ ಅಂಕುಶಕರ, ಜಿ ಎಸ್ ವರದಾಯಿ ಉಪಸ್ಥಿತರಿದ್ದರು.
ಸೊಳ್ಳೆಗಳ ನಿಯಂತ್ರಣಕ್ಕೆ ಉಚಿತ ಫಾಗಿಂಗ್..!ಅಥಣಿ: ಆರೋಗ್ಯ ಇಲಾಖೆ ಮತ್ತು ಪುರಸಭೆ ಕಾರ್ಯಾಲಯದ ಸಿಬ್ಬಂದಿ ಪಟ್ಟಣದಲ್ಲಿನ ಸೊಳ್ಳೆಗಳ ನಿಯಂತ್ರಣಕ್ಕಾಗಿ ಜನರಲ್ಲಿ ಜನಜಾಗೃತಿ ಮೂಡಿಸುತ್ತಿದ್ದರೆ, ಇದಕ್ಕೆ ಪೂರಕವಾಗಿ ಸಮಾಜ ಸೇವಕರೊಬ್ಬರು ಪಟ್ಟಣದ ವಿವಿಧ ಶಾಲೆ ಮತ್ತು ಕಾಲೇಜು ಸುತ್ತಮುತ್ತ ಸೊಳ್ಳೆಗಳ ನಿಯಂತ್ರಣಕ್ಕಾಗಿ ಉಚಿತ ಫಾಗಿಂಗ್ ವ್ಯವಸ್ಥೆ ಮಾಡುವ ಮೂಲಕ ಸಾಮಾಜಿಕ ಬದ್ಧತೆ ಮೆರೆದಿದ್ದಾರೆ.
- ಪ್ರಫುಲ್ ಹoಜಿ, ಸಮಾಜ ಸೇವಕ.