ಹೃದಯ ಸಮಸ್ಯೆ ಬರದಂತೆ ಎಚ್ಚರ ವಹಿಸಿ: ಎನ್.ಗೋಪಿನಾಥ್

KannadaprabhaNewsNetwork |  
Published : Oct 01, 2024, 01:22 AM IST
ಪೊಟೊ: 30ಎಸ್‌ಎಂಜಿಕೆಪಿ02ಶಿವಮೊಗ್ಗ ನಗರದ  ಹೃದಯ ದಿನದ ಪ್ರಯುಕ್ತ ಯೂತ್ ಹಾಸ್ಟೆಲ್ ಮತ್ತು ಶಿವಮೊಗ್ಗ ಸೈಕಲ್ ಕ್ಲಬ್ ಆಯೋಜಿಸಿದ್ದ ಜಾಥಾಗೆ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಮಾಜಿ ಅಧ್ಯಕ್ಷ ಎನ್.ಗೋಪಿನಾಥ್ ಚಾಲನೆ ನೀಡಿದರು. | Kannada Prabha

ಸಾರಾಂಶ

ಶಿವಮೊಗ್ಗ ನಗರದಲ್ಲಿ ಹೃದಯ ದಿನದ ಪ್ರಯುಕ್ತ ಯೂತ್ ಹಾಸ್ಟೆಲ್ ಮತ್ತು ಶಿವಮೊಗ್ಗ ಸೈಕಲ್ ಕ್ಲಬ್ ವತಿಯಿಂದ ಸೈಕಲ್‌ ಜಾಥಾ ಆಯೋಜಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಸೈಕಲ್ ಅಭ್ಯಾಸ ಮಾಡುವುದರಿಂದ ಹೃದಯ ಸಂಬಂಧಿ ಕಾಯಿಲೆ ಸೇರಿದಂತೆ ಅನೇಕ ಕಾಯಿಲೆಗಳನ್ನು ದೂರ ಇಡಲು ಸಾಧ್ಯವಿದ್ದು, ಸೈಕಲ್ ಅಭ್ಯಾಸವು ಜನಸಾಮಾನ್ಯರ ವ್ಯಾಯಾಮ ಶಾಲೆಯಾಗಿದೆ ಎಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಮಾಜಿ ಅಧ್ಯಕ್ಷ ಎನ್.ಗೋಪಿನಾಥ್ ಹೇಳಿದರು.

ನಗರದಲ್ಲಿ ಹೃದಯ ದಿನದ ಪ್ರಯುಕ್ತ ಯೂತ್ ಹಾಸ್ಟೆಲ್ ಮತ್ತು ಶಿವಮೊಗ್ಗ ಸೈಕಲ್ ಕ್ಲಬ್ ಆಯೋಜಿಸಿದ್ದ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿ, ಯೂಸ್ ಹಾರ್ಟ್ ಫಾರ್ ಆಕ್ಷನ್ ಈ ವರ್ಷದ ಧ್ಯೇಯವಾಕ್ಯ. ನಿತ್ಯ ಯೋಗ, ವ್ಯಾಯಾಮ, ಧ್ಯಾನದಿಂದ, ಸದಾ ಚಟುವಟಿಕೆಯಿಂದ ಇರುವುದರಿಂದ ಅಪಾಯ ಕಡಿಮೆ ಮಾಡಲು ಸಾಧ್ಯ. ಹೃದಯ ಸಮಸ್ಯೆ ಬಾರದಂತೆ ತಡೆಯೊಡ್ಡುವುದು ಜಾಣತನ. ಪ್ರತಿ ದಿನ ಸೈಕಲ್ ತುಳಿಯುವುದರಿಂದ ಎಲ್ಲರೂ ಆರೋಗ್ಯವಂತರಾಗಲು ಸಾಧ್ಯ ಎಂದು ತಿಳಿಸಿದರು.

ಮಥುರಾ ಪ್ಯಾರಾಡೈಸ್ ಬೆಳ್ಳಿ ಸಂಭ್ರಮ ಸಮಿತಿ ಅಧ್ಯಕ್ಷ ವಸಂತ ಹೋಬಳಿದಾರ್ ಮಾತನಾಡಿ, ಶಿವಮೊಗ್ಗದಲ್ಲಿ ಅತ್ಯುತ್ತಮ ಉದ್ಯಮ ಸ್ಥಾಪಿಸಿ ನಗರದ ಮನೆ ಮಾತಾಗಿರುವ ಗೋಪಿನಾಥ್ ಅವರ ಕಾರ್ಯ ಮೆಚ್ಚಿ ಅವರ ಅಭಿಮಾನಿಗಳು ವರ್ಷಪೂರ್ತಿ ಸಂಭ್ರಮದಲ್ಲಿ ಭಾಗಿಯಾಗುತ್ತಿದ್ದಾರೆ. ಈ ದಿನ ಶಿವಮೊಗ್ಗ ಸೈಕಲ್ ಕ್ಲಬ್ ನಮ್ಮ ಕಾರ್ಯಕ್ರಮದ ಜತೆ ಕೈ ಜೋಡಿಸುತ್ತಿರುವುದು ಸಂತೋಷ ತಂದಿದೆ ಎಂದರು.

ತರುಣೋದಯ ಘಟಕದ ಚೇರ್ಮನ್ ಎಸ್.ಎಸ್.ವಾಗೇಶ್ ಮಾತನಾಡಿ, ಶಿವಮೊಗ್ಗ ಸೈಕಲ್ ಕ್ಲಬ್ ಹಲವಾರು ಸಂಘ ಸಂಸ್ಥೆ ಗಳ ಜೊತೆಗೂಡಿ ಸಾಕಷ್ಟು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಸಾಕಷ್ಟು ಜನ ಗಿನ್ನೆಸ್ ದಾಖಲೆ ಪಡೆದ ಸೈಕ್ಲಿಸ್ಟ್ ಗಳು ತಂಡದಲ್ಲಿರುವುದು ವಿಶೇಷವಾಗಿದೆ ಎಂದು ಹೇಳಿದರು.

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್ ಮಾತನಾಡಿ, ಸೈಕಲ್ ತುಳಿಯು ವುದರಿಂದ ನಮ್ಮ ದೇಹ ಮನಸ್ಸು ಸದೃಢವಾಗಿರುವುದರ ಜೊತೆಗೆ ದೇಹದಲ್ಲಿ ರಕ್ತ ಚೆನ್ನಾಗಿ ಸಂಚರಿಸುತ್ತದೆ. ಇದರಿಂದ ಹೃದಯಾಘಾತದ ಪ್ರಮಾಣ ಕಡಿಮೆಯಾಗುತ್ತದೆ. ಶಿವಮೊಗ್ಗ ಸೈಕಲ್ ಕ್ಲಬ್ ನಿರಂತರವಾಗಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಶಿವಮೊಗ್ಗ ಸೈಕಲ್ ಕ್ಲಬ್ ರಾಜ್ಯದಲ್ಲಿ ಒಂದು ಮಾದರಿ ಸಂಸ್ಥೆಯಾಗಿದೆ ಎಂದು ತಿಳಿಸಿದರು.

ಸೈಕಲ್ ಕ್ಲಬ್ ಅಧ್ಯಕ್ಷ ಶ್ರೀಕಾಂತ್, ಕಾರ್ಯದರ್ಶಿ ಗಿರೀಶ್ ಕಾಮತ್, ಸಂಚಾಲಕ ಹರೀಶ್ ಪಾಟಿಲ್, ಯೂತ್ ಹಾಸ್ಟೆಲ್ಸ್ ಕಾರ್ಯದರ್ಶಿ ಸುರೇಶ್ ಕುಮಾರ್, ನರಸಿಂಹಮೂರ್ತಿ, ಪ್ರಕಾಶ್, ಮಲ್ಲಿಕಾರ್ಜನ್ ಕಾನೂರು, ನೂರಕ್ಕಿಂತ ಹೆಚ್ಚು ಸೈಕಲ್ ಪಟುಗಳು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!