ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಮಾಜಿ ಪ್ರಧಾನಿಗಳ ಚಿಂತನೆ ಹುಸಿಗೊಳಿಸಲು ಉತ್ತರ ಕರ್ನಾಟಕದ ಜನತೆ ಈಗಲೇ ಎಚ್ಚೆತ್ತುಕೊಂಡು ಈ ಭಾಗದ 12 ಜಿಲ್ಲೆಗಳಲ್ಲಿ ಬಿಜೆಪಿ ಲೋಕಸಭಾ ಅಭ್ಯರ್ಥಿಗಳನ್ನು ಸೋಲಿಸಿ, ಕಾಂಗ್ರೆಸ್ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಮೂಲಕ ಸ್ವಾಭಿಮಾನ ಮೆರೆಯುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ಕೃಷ್ಣಾ ಮೇಲ್ದಂಡೆ ಯೋಜನೆ ಹಂತ ಮೂರು ಪೂರ್ಣಗೊಂಡರೆ 130 ಟಿಎಂಸಿ ನೀರು ಬಳಕೆಯಾಗುತ್ತದೆ. ಇದರಿಂದ 15 ಲಕ್ಷ ಎಕರೆ ನೀರಾವರಿ ಆಗಲಿದೆ. 7 ಜಿಲ್ಲೆಗೆ ಅನುಕೂಲವಾಗಲಿದೆ. ಕೃಷ್ಣಾ ನ್ಯಾಯಾಧೀಕರಣ 2 ಕೇಂದ್ರಕ್ಕೆ ವರದಿ ಸಲ್ಲಿಸಿ 15 ವರ್ಷಗಳಾಗುತ್ತ ಬಂದರೂ ಇದುವರೆಗೂ ಅಧಿಸೂಚನೆ ಹೊರಬೀಳುತ್ತಿಲ್ಲ ಎಂದು ಬೇಸರಿಸಿದ ಅವರು, ಕಾವೇರಿ ನದಿ ನೀರು ಹಂಚಿಕೆ ವಿಷಯದಲ್ಲಿ ನಡೆದುಕೊಂಡಂತೆ ಕೃಷ್ಣಾ ನ್ಯಾಯಾಧಿಕರಣ ವರದಿ ಅಧಿಸೂಚನೆ ಹೊರಡಿಸುವಂತೆ ಆಗ್ರಹಿಸಿದರು.ಅಧಿಸೂಚನೆ ವಿಳಂಬದಿಂದಾಗಿ ನಮ್ಮ ರಾಜ್ಯದ ಪಾಲಿನ 138 ಟಿಎಂಸಿ ನೀರು ವ್ಯರ್ಥವಾಗಿ ಬೇರೆ ರಾಜ್ಯಕ್ಕೆ ಹರಿದು ಹೋಗುತ್ತಿದೆ. ಅದನ್ನು ತಪ್ಪಿಸಲು ಆಲಮಟ್ಟಿ ಜಲಾಶಯದ ಎತ್ತರವನ್ನು 524 ಮೀ.ಗೆ ಹೆಚ್ಚಿಸಲು ಸರ್ಕಾರ ಮನಸು ಮಾಡಬೇಕು ಎಂದೂ ಅವರು ಮನವಿ ಮಾಡಿದರು.
ಕೃಷ್ಣಾ ನದಿ ನೀರನ್ನು ದಕ್ಷಿಣದ ಜಿಲ್ಲೆಗಳಿಗೆ ತೆಗೆದುಕೊಂಡು ಹೋಗುವ ಕುರಿತು ದೇವೇಗೌಡರು ಪ್ರಧಾನಮಂತ್ರಿ ಗಮನಕ್ಕೆ ತರುವುದಾಗಿ ಹೇಳಿದ್ದಾರೆ. ಉತ್ತರ ಕರ್ನಾಟಕ ಜನ ಎಚ್ಚೆತ್ತುಕೊಳ್ಳಬೇಕು ಎಂದು ಸಲಹೆ ನೀಡಿದ ಅವರು, ಕೃಷ್ಣೆಯ 130 ಟಿಎಂಸಿ ನೀರು ಬಳಕೆ ಅಭಿವೃದ್ಧಿ ಶಕೆ 7 ಜಿಲ್ಲೆಯಲ್ಲಿ ಆಗಲಿದೆ. ಗುಳೇ ಹೋಗುವುದನ್ನು ತಪ್ಪಿಸಲು ಇದರಿಂದ ಸಾಧ್ಯವಿದೆ. ದೇಶದ ಅನೇಕ ಭಾಗದಿಂದ ಉತ್ತರ ಕರ್ನಾಟಕದ ಕಡೆ ಉದ್ಯೋಗ ಮಾಡಲು ಬರಬಹುದು. ಯುಕೆಪಿ ಮೂರನೇ ಹಂತ ಕಾಮಗಾರಿ ಮುಗಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.ಕೃಷ್ಣಾ ನದಿ ನೀರಿನ ಬಳಕೆ ಸರಿಯಾದ ಸಮಯಕ್ಕೆ ಮಾಡಿಕೊಳ್ಳದೇ ಹೋದರೆ ಬೇರೆಯವರ ಕಣ್ಣು ನಮ್ಮ ಕೃಷ್ಣೆಯ ಮೇಲೆ ಬೀಳಲಿದೆ ಎಂದು ಆಗಾಗ ಎಚ್ಚರಿಕೆ ಮಾತು ಹೇಳುತ್ತಿದ್ದೆ. ಈಗ ದೇವೇಗೌಡರ ಬಾಯಿಂದ ಆ ಮಾತು ಬಂದಿದೆ ಎಂದರೆ ತಕ್ಷಣಕ್ಕೆ ನಮ್ಮ ಕೃಷ್ಣೆಯ ನೀರು ಬಳಕೆಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.
ಯಾರದೋ ಆಸ್ತಿ ತೆಗೆದುಕೊಂಡು ಇನ್ನೊಬ್ನರಿಗೆ ಕೊಡಲು ಕಾಂಗ್ರೆಸ್ ಪಕ್ಷ ಅಂತಹ ಕೆಲಸ ಮಾಡುವುದಿಲ್ಲ. ಈ ಬಗ್ಗೆ ಜನರ ಗಮನಕ್ಕೆ ತರುತ್ತೇನೆ. ಮಾಜಿ ಪ್ರಧಾನಿಯವರ ಹೇಳಿಕೆ ಸರಿಯಲ್ಲ ಎಂದು ಖಂಡಿಸಿದರು.