ಸಂವಿಧಾನ ವಿರೋಧಿಗಳಿಗೆ ದುರ್ಗತಿ ಕಟ್ಟಿಟ್ಟಬುತ್ತಿ

KannadaprabhaNewsNetwork |  
Published : Jan 03, 2025, 12:31 AM IST
02ಬಿಜಿಪಿ-1 | Kannada Prabha

ಸಾರಾಂಶ

ದೇಶದಲ್ಲಿನ ಬಡವರು ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ರಾಜಕೀಯವಾಗಿ ಅಭಿವೃದ್ದಿ ಹೊಂದಲು ಹಾಗೂ ನಾನಾ ಸೌಲತ್ತುಗಳನ್ನು ಪಡೆದು ವಿವಿಧ ಉನ್ನತ ಹುದ್ದೆಗಳನ್ನ ಅಲಂಕರಿಸಿರುವ ಅವಕಾಶವನ್ನು ಒದಗಿಸಿಕೊಟ್ಟಿರುವಂತಹ ಸಂವಿಧಾನವನ್ನು ಹಾಗೂ ಸಂವಿಧಾನ ರಚಿಸಿರುವ ಅಂಬೇಡ್ಕರ್ ಅವರನ್ನೇ ಟೀಕಿಸಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಬಾಗೇಪಲ್ಲಿ

ಡಾ.ಬಿ.ಆರ್.ಅಂಬೇಡ್ಕರ್ ರವರು ರಚಿಸಿರುವ ಸಂವಿಧಾನದ ಅಡಿಯಲ್ಲಿ ದೇಶದ ಕಟ್ಟಕಡೆಯ ವ್ಯಕ್ತಿ ಸ್ವಾತಂತ್ರವಾಗಿ ಜೀವಿಸಲು, ನಾನಾ ಸೌಲಭಗಳನ್ನು ಪಡೆಯುವಂತಹ ಹಕ್ಕು ಸಂವಿಧಾನ ನೀಡಿದೆ. ಆದರೆ ದುರ್ದೈವ. ಸಂಸತ್‍ನಲ್ಲಿ ಸಂವಿಧಾನ ಮತ್ತು ಅಂಬೇಡ್ಕರ್ ರವರ ಬಗ್ಗೆ ಸಚಿವರೊಬ್ಬರು ಕೀಳಾಗಿ ಮಾತನಾಡಿದ್ದಾರೆ. ಇಂತಹವರಿಗೆ ಮುಂದಿನ ದಿನಗಳಲ್ಲಿ ರ್ದುಗತಿ ಕಟ್ಟಿಟ್ಟಬುತ್ತಿ ಎಂದು ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಭವಿಷ್ಯ ನುಡಿದರು.

ಭೀಮಾ ಕೋರೇಗಾಂವ್ ವಿಜಯೋತ್ಸವ ಆಚರಣಾ ಸಮಿತಿ ಹಾಗೂ ದಲಿತ ಸಂಘಟನೆಗಳ ಒಕ್ಕೂಟ ಇವರ ಸಂಯುಕ್ತ ಆಶ್ರಯದಲ್ಲಿ ಪಟ್ಟಣದ ತಾ.ಪಂ ಆವರಣದಲ್ಲಿ ಆಯೋಜಿಸಲಾಗಿದ್ದ ಪ್ರಥಮ ವರ್ಷದ ಭೀಮಾ ಕೋರೇಂಗಾಂವ್ ವಿಜಯೋತ್ಸವ ಕಾರ್ಯಕ್ರಮವನ್ನು ಡೋಳ್ಳು ಬಾರಿಸುವ ಉದ್ಘಾಟಿಸಿ ಮಾತನಾಡಿದರು.

ಸಚಿವ ಹೇಳಿಕೆಗೆ ಖಂಡನೆ

ದೇಶದಲ್ಲಿನ ಬಡವರು ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ರಾಜಕೀಯವಾಗಿ ಅಭಿವೃದ್ದಿ ಹೊಂದಲು ಹಾಗೂ ನಾನಾ ಸೌಲತ್ತುಗಳನ್ನು ಪಡೆದು ವಿವಿಧ ಉನ್ನತ ಹುದ್ದೆಗಳನ್ನ ಅಲಂಕರಿಸಿರುವ ಅವಕಾಶವನ್ನು ಒದಗಿಸಿಕೊಟ್ಟಿರುವಂತಹ ಸಂವಿಧಾನವನ್ನು ಹಾಗೂ ಸಂವಿಧಾನ ರಚಿಸಿರುವ ಅಂಬೇಡ್ಕರ್ ರವರನ್ನು ಸಂಸತ್ತಿನಲ್ಲಿಯೇ ಕೇಂದ್ರ ಸಚಿವರೊಬ್ಬರು ಅವಹೇಳಕಾರಿ ಮಾತನಾಡಿದ್ದಾರೆ ಎಂದು ಗೃಹಸಚಿವ ಅಮಿತ್‌ ಶಾ ಹೆಸರು ಹೇಳದೆ ಖಂಡಿಸಿದರು.

ಅಂಬೇಡ್ಕರ್ ರವರ ಜೀವನ ಚರಿತ್ರೆ ಬಗ್ಗೆ ಇಂದಿನ ಪೀಳಿಗೆ ತಿಳಿದುಕೊಳ್ಳಬೇಕಾದ ಅಗತ್ಯವಿದೆ. ನಾನು ಸುವರ್ಣ ಸುದ್ದಿವಾಹಿನಿಯಲ್ಲಿ ಪ್ರಸಾರವಾದ ಅಂಬೇಡ್ಕರ್ ಜೀವನ ಚರಿತ್ರೆ ಎಲ್ಲಾ ಎಪಿಸೋಡ್‍ಗಳನ್ನು ತಪ್ಪದೆ ನೋಡಿದ್ದೇನೆ. ಅವರ ಜೀವನ ಚರಿತ್ರೆ ಬಗ್ಗೆ ಚೆನ್ನಾಗಿ ಮೂಡಿಬಂದಿದೆ ಎಂದು ಇಂತಹ ವಿಚಾರಗಳನ್ನು ಪ್ರಸಾರ ಮಾಡಿದ ಸುವರ್ಣ ಸುದ್ದಿವಾಹಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಶಿಕ್ಷಣ ಹಕ್ಕಿಗಾಗಿ ನಡೆದ ಹೋರಾಟ

ಭೀಮಾ ಕೋರೇಗಾಂವ್ ವಿಜಯೋತ್ಸವ ಆಚರಣಾ ಸಮಿತಿ ಹಾಗೂ ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷರು ಹಾಗೂ ಜಿ.ಪಂ ಮಾಜಿ ಉಪಾಧ್ಯಕ್ಷ ಎ.ವಿ.ಪೂಜಪ್ಪ ಮಾತನಾಡಿ, ಭೀಮಾ ಕೋರೇಗಾಂವ್‍ನಲ್ಲಿ ಶಿಕ್ಷಣದ ಹಕ್ಕಿಗಾಗಿ ದಲಿತರು ಪ್ರಾಣ ತ್ಯಾಗ ಮಾಡಿರುವ ಚರಿತ್ರೆಯ ಬಗ್ಗೆ ಅರಿವು ಮೂಡಿಸುವ ಹಾಗೂ ಅಂದು ನಡೆದ ಯುದ್ದದಲ್ಲಿ ಹುತಾತ್ಮರಾದವರನ್ನು ನೆನೆಯುವ ಏಕೈಕ ಉದ್ದೇಶದಿಂದ ಇಲ್ಲಿ ಸ್ಥೂಪವನ್ನು ನಿರ್ಮಿಸಿ ಪ್ರಥಮ ವರ್ಷದ ಭೀಮಾ ಕೋರೇಗಾಂವ್ ವಿಜಯೋತ್ಸವನ್ನು ಕಾರ್ಯಕ್ರವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಎ. ಶ್ರೀನಿವಾಸ್, ಸದಸ್ಯ ಹಾಗೂ ವಕೀಲರ ಸಂಘದ ಅಧ್ಯಕ್ಷ ಎ. ನಂಜುಂಡಪ್ಪ, ಕೆಡಿಪಿ ಸದಸ್ಯ ಪಿ.ಮಂಜುನಾಥರೆಡ್ಡಿ, ಜಿ.ಪಂ ಮಾಜಿ ಸದಸ್ಯ ನರಸಿಂಹಪ್ಪ, ದಲಿತ ಸಂಘಟನೆಯ ಉಪಾಧ್ಯಕ್ಷ ಕಡ್ಡೀಲು ವೆಂಕಟರಮಣ, ದಲಿತ ಮುಖಂಡರಾದ ಕೋಟಪ್ಪ, ಜೀವಿಕಾ ನಾರಾಯಣಸ್ವಾಮಿ, ಗಂಗುಲಪ್ಪ, ಲಕ್ಷ್ಮೀನರಸಿಂಹಪ್ಪ, ರಮೇಶ್ ಬಾಬು ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

2025ರಲ್ಲಿ ಬಿಯರ್‌ ಮಾರಾಟ ಭಾರೀ ಕುಸಿತ
ಜನಾಶೀರ್ವಾದದಿಂದ ದೀರ್ಘಾವಧಿ ಸಿಎಂ : ಸಿದ್ದು