ಮತದಾರರ ಪಟ್ಟಿ ಪರಿಶೀಲನೆಗೆ ಜಾಗ್ರತರಾಗಿ: ದೇಶಪಾಂಡೆ

KannadaprabhaNewsNetwork |  
Published : Oct 13, 2025, 02:02 AM IST
ಎಚ್೧೨.೧೦-ಡಿಎನ್‌ಡಿ೧ಎ ಮತ್ತು 1ಬಿ: ಓಟ್‌ಚೋರ್ ಗದ್ದಿಛೋಡ್ ಸಹಿ ಸಂಗ್ರಹ ಅಭಿಯಾನದಲ್ಲಿ ಶಾಸಕ ದೇಶಪಾಂಡೆ ಸಹಿ ಮಾಡುತ್ತಿರುವರು ಮತ್ತು ಸಹಿ ಸಂಗ್ರಹದ ಪ್ರತಿ ತೊರಿಸುತ್ತಿರುವುದು. | Kannada Prabha

ಸಾರಾಂಶ

ಹಳಿಯಾಳ ವಿಧಾನಸಭಾ ಕ್ಷೇತ್ರದ ದಾಂಡೇಲಿ ತಾಲೂಕು ಕಾಂಗ್ರೆಸ್ ವತಿಯಿಂದ ಅಂಬೇವಾಡಿ ಗಾಂವಠಾಣ ಗ್ರಾಮದಲ್ಲಿ ಓಟ್‌ಚೋರ್ ಗದ್ದಿಛೋಡ್ ಸಹಿ ಸಂಗ್ರಹ ಅಭಿಯಾನ ಭಾನುವಾರ ನಡೆಯಿತು.

ಓಟ್‌ಚೋರ್ ಗದ್ದಿಛೋಡ್ ಸಹಿ ಸಂಗ್ರಹ ಅಭಿಯಾನದಲ್ಲಿ ಶಾಸಕ

ಕನ್ನಡಪ್ರಭ ವಾರ್ತೆ ದಾಂಡೇಲಿ

ಹಳಿಯಾಳ ವಿಧಾನಸಭಾ ಕ್ಷೇತ್ರದ ದಾಂಡೇಲಿ ತಾಲೂಕು ಕಾಂಗ್ರೆಸ್ ವತಿಯಿಂದ ಅಂಬೇವಾಡಿ ಗಾಂವಠಾಣ ಗ್ರಾಮದಲ್ಲಿ ಓಟ್‌ಚೋರ್ ಗದ್ದಿಛೋಡ್ ಸಹಿ ಸಂಗ್ರಹ ಅಭಿಯಾನ ಭಾನುವಾರ ನಡೆಯಿತು.

ಈ ಅಭಿಯಾನದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಆರ್.ವಿ. ದೇಶಪಾಂಡೆ, ಚುನಾವಣೆ ಬಂದಾಗ ಮಾತ್ರ ಮತದಾರರ ಬಗ್ಗೆ ಒಲವು ತೋರಿಸುವುದು ಸರಿಯಲ್ಲ. ಪ್ರತಿ ವಾರ್ಡಿನ ಮತದಾರರ ಪಟ್ಟಿ ಪರಿಶೀಲನೆ ಸೇರ್ಪಡೆ, ತಿದ್ದುಪಡಿಗೆ ಸದಾ ಗಮನ ಹರಿಸಬೇಕು. ಯಾವುದೇ ಪಕ್ಷ ಅಧಿಕಾರಕ್ಕೆ ಬರಬೇಕಾದರೆ ಪಕ್ಷದ ನಿಜವಾದ ಮತದಾರರ ಬಲಪ್ರದರ್ಶನದಿಂದ ಮಾತ್ರ ಅಧಿಕಾರ ಹಿಡಿಯಲು ಸಾಧ್ಯ. ಪ್ರಸ್ತುತ ಬಿಜೆಪಿ ಸರ್ಕಾರವು ಮತಗಳ್ಳತನದ ಆರೋಪ ಹೊತ್ತಿರುವುದು ನಾಚಿಕೆಗೇಡಿನ ಸಂಗತಿ. ದೇಶದ ಸಂವಿಧಾನಕ್ಕೆ ಇದು ಎಸಗಿದ ಅಪಚಾರವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಎನ್ನುವುದು ಸರ್ವಶ್ರೇಷ್ಟವಾಗಿದೆ. ಈ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ತಮ್ಮ ವ್ಯಾಪ್ತಿಯಲ್ಲಿನ ಮತದಾರರ ಪಟ್ಟಿ ಪರಿಶೀಲನೆಗೆ ಜಾಗ್ರತರಾಗಿರಬೇಕು ಎಂದು ಕರೆ ನೀಡಿದರು. ದೇಶವ್ಯಾಪ್ತಿ ಸಹಿ ಅಭಿಯಾನ ನಮ್ಮ ನಾಯಕರು ಕೈಗೊಂಡಿದ್ದು ಇದರ ಯಶಸ್ಸಿಗೆ ಕಾರ್ಯಕರ್ತರ ಸಹಕಾರ ಅತೀ ಅವಶ್ಯವಾಗಿದೆ ಎಂದರು.

ದಾಂಡೇಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ ಹಲವಾಯಿ ಓಟ್‌ಚೋರ್ ಗದ್ದಿಛೋಡ್ ಸಹಿ ಸಂಗ್ರಹ ಅಭಿಯಾನ ಕುರಿತು ವಿವರವಾಗಿ ಮಾತನಾಡಿದರು.

ವೇದಿಕೆಯಲ್ಲಿ ಅಂಬೇವಾಡಿ ಗ್ರಾಪಂ ಅಧ್ಯಕ್ಷ ಪ್ರಕಾಶ ಜಿ.ಇ., ಕಾಂಗ್ರೆಸ ಮುಖಂಡರಾದ ಕೃಷ್ಣಾ ಪಾಟೀಲ, ಇಕ್ಬಾಲ್ ಶೇಖ, ರೇಣುಕಾ ಬಂದಮ್, ಕರೀಂ ಖತಿಬ್, ಕಸ್ತೂರಿ ಗೋವಿಂದಗೊಳ್, ಮಾಳು ಗಂಗಾರಾಮ, ಸಾಹಿನ ಬಾನು, ಪರಶುರಾಮ ಉಚ್ಚಗಾಂವಕರ, ನಾಗುಬಾಯಿ, ರೇಣುಕಾ ತಿರುಮೂಲಕರ ಮುಂತಾದವರಿದ್ದರು.

ಅಭಿಯಾನದ ಆರಂಭದಲ್ಲಿ ಪರಶುರಾಮ ಸ್ವಾಗತಿಸಿದರು. ಕೀರ್ತಿ ಗಾಂವಕರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಳಗಾವಿ ಅಧಿವೇಶನಕ್ಕೆ ಪೊಲೀಸರ ಸರ್ಪಗಾವಲು
ಮೆಕ್ಕೆಜೋಳ ಖರೀದಿಯ ಮಿತಿ 50 ಕ್ವಿಂಟಲ್‌ಗೇರಿಕೆ