ಮಹಿಳೆಯರು ಸಬಲರಾಗಲು ಆರ್ಥಿಕವಾಗಿ ಸದೃಢರಾಗಿ: ಜಯಲಲಿತಾ

KannadaprabhaNewsNetwork |  
Published : Mar 29, 2024, 12:48 AM IST
ಸುರಪುರ ನಗರದ ರಂಗಂಪೇಟೆಯ ಖಾದಿ ಕೇಂದ್ರದ ಆವರಣದಲ್ಲಿ ನಡೆದ ಅಂತಾರಾಷ್ಟೀಯ ಮಹಿಳಾ ದಿನಾಚಾರಣೆಗೆ ಚಾಲನೆ ನೀಡಲಾಯಿತು. | Kannada Prabha

ಸಾರಾಂಶ

ಸುರಪುರ ನಗರದ ರಂಗಂಪೇಟೆಯ ಖಾದಿ ಕೇಂದ್ರದ ಆವರಣದಲ್ಲಿ ನಡೆದ ಅಂತಾರಾಷ್ಟೀಯ ಮಹಿಳಾ ದಿನಾಚಾರಣೆಗೆ ಚಾಲನೆ ನೀಡಲಾಯಿತು.

ಕನ್ನಡಪ್ರಭ ವಾರ್ತೆ ಸುರಪುರ

ಸಮಾಜದ ಮುಖ್ಯವಾಹಿನಿಗೆ ಬರಲು ಮಹಿಳೆಯರು ಆರ್ಥಿಕವಾಗಿ ಸದೃಢರಾದಾಗ ಸಬಲರಾಗಲು ಸಾಧ್ಯ. ಉನ್ನತ ಶಿಕ್ಷಣದ ಜೊತೆಗೆ ವಿಶೇಷ ತರಬೇತಿ ಪಡೆಯುವ ಮೂಲಕ ಉದ್ಯೋಗಸ್ಥರಾಗಬೇಕು ಎಂದು ನ್ಯಾಯವಾದಿ ಜಯಲಲಿತಾ ಪಾಟೀಲ್ ಹೇಳಿದರು.

ನಗರದ ರಂಗಂಪೇಟೆ ಖಾದಿ ಕೇಂದ್ರದ ಆವರಣದಲ್ಲಿ ಸಗರನಾಡು ಸೇವಾ ಪ್ರತಿಷ್ಠಾನ ಸುರಪುರ ಹಾಗೂ ಅಕ್ಕಮಹಾದೇವಿ ಮಹಿಳಾ ಸ್ವ-ಸಹಾಯ ಸಂಘ ರಂಗಂಪೇಟ ಸಹಯೋಗದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚಾರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಹಿಳೆಯರು ಎಲ್ಲ ಕ್ಷೇತ್ರದಲ್ಲಿ ತಮ್ಮ ಛಾಪು ಮೂಡಿಸುತ್ತಿದ್ದಾರೆ. ಸರ್ವಕ್ಷೇತ್ರದಲ್ಲೂ ಪ್ರಗತಿ ಸಾಧಿಸುತ್ತಿರುವ ಮಹಿಳೆಯರು ತ್ಯಾಗದ ಪ್ರತಿರೂಪ, ಕರುಣೆ, ಮಮತೆ, ಪ್ರೀತಿ, ವಾತ್ಸಲ್ಯಗಳ ತವನಿಧಿಯಾಗಿದ್ದಾರೆ ಎಂದರು.

ನಿವೃತ್ತ ಪ್ರಾಂಶುಪಾಲೆ ಸುವರ್ಣ ಅರ್ಜುಣಗಿ ಮಾತನಾಡಿ, ಮಹಿಳೆಯರು ವಿದ್ಯಾಭ್ಯಾಸದ ಜೊತೆಗೆ ಗೃಹ ಕೈಗಾರಿಕೆ, ಗುಡಿಕೈಗಾರಿಕೆ ಹಾಗೂ ಹೊಲಿಗೆ ತರಬೇತಿ ಸೇರಿ ಅನೇಕ ಕೆಲಸ ನಿರ್ವಹಿಸಿ ಸ್ವಾವಲಂಬಿ ಜೀವನ ನಡೆಸಬೇಕು ಎಂದು ಕರೆ ನೀಡಿದರು.

ಸನ್ಮಾನ:

ಈ ವೇಳೆ ವಿವಿಧ ಕ್ಷೇತ್ರದ ಮಹಿಳಾ ಸಾಧಕರಾದ ಸೂಲಗಿತ್ತಿ ಚನ್ನಬಸಮ್ಮ ಮಲ್ಲಾ ಬಿ, ಜಯಮ್ಮ ನಂಜಲದಿನ್ನಿ, ಹನುಮವ್ವ ಬೇಡರಕಾರಲಕುಂಟಿ, ಶೋಭಾ ವಿರೂಪಾಪುರ, ಶಶಿಕಲಾ ವೀರಯ್ಯ, ನಿಂಗವ್ವ ಕಟಬಿ, ರೇಖಾ ಇಟಗಿ, ಸರೋಜಮ್ಮ ಗುನ್ನಾಳ, ಶಾಂತಮ್ಮ ಹಸಮಕಲ್, ಲಲಿತಮ್ಮ ಹಿರೇಮಠ ಅವರಿಗೆ ಅಕ್ಕ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಪ್ರತಿಷ್ಠಾನ ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ ಅಧ್ಯಕ್ಷತೆ ವಹಿಸಿದ್ದರು. ಮೇಘಾ ದಾಯಿಪುಲ್ಲೆ, ಬಸಮ್ಮ ಅಂಗಡಿ ಗೆದ್ದಲಮರಿ, ಶಿವಶರಣಪ್ಪ ಹೆಡಿಗಿನಾಳ, ಶರಣಯ್ಯ ಇಟಗಿ ಗೊರ್ಲೆಕೊಪ್ಪ, ಮಲ್ಲಪ್ಪ ಪೂಜಾರಿ ಮಸ್ಕಿ, ಶಿವನಗೌಡ ಬಿರಾದಾರ ಚಡಚಣ, ಶಿವಪ್ಪ ಹೆಬ್ಬಾಳ ಕೊಡೇಕಲ್ ಸೇರಿದಂತೆ ಇತರರಿದ್ದರು. ಲಲಿತಮ್ಮ ಹಿರೇಮಠ ಪ್ರಾರ್ಥಿಸಿದರು. ಸಿದ್ದಪ್ರಸಾದ ಪಾಟೀಲ್ ಸ್ವಾಗತಿಸಿದರು. ಹಣಮಂತ್ರಾಯ ದೇವತ್ಕಲ್ ನಿರೂಪಿಸಿದರು. ಶೋಭಾ ಕೊಟ್ರಯ್ಯ ವಂದಿಸಿದರು.

PREV

Recommended Stories

KAPPEC ಮೌನ ಕ್ರಾಂತಿ : ಸಾಲ ಪಡೆದವರಲ್ಲಿ ಶೇ.85 ಉದ್ದಿಮೆಗಳು ಯಶಸ್ಸು
ಆಹಾರೋದ್ಯಮಿಯಾಗಲು ಹಣಕಾಸು ನೆರವು ಸಿಗೋದೆಲ್ಲಿ? ಪಡೆಯೋದು ಹೇಗೆ?