ಕನ್ನಡಪ್ರಭ ವಾರ್ತೆ ಗೋಕಾಕ
ನಗರದ ತಮ್ಮ ಗೃಹ ಕಚೇರಿಯಲ್ಲಿ ಭಾನುವಾರ ಸಂಭವನೀಯ ಪ್ರವಾಹ ಮುನ್ನೆಚ್ಚರಿಕೆ ಕುರಿತು ಕಂದಾಯ ಇಲಾಖೆ, ತಾಪಂ, ನಗರಸಭೆ, ಪಟ್ಟಣ ಪಂಚಾಯತಿ, ಲೋಕೋಪಯೋಗಿ, ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಅಧಿಕಾರಿಗಳ ಜೊತೆಗೆ ಸಭೆ ನಡೆಸಿ ಮಾತನಾಡಿ, ಸಂಭನೀಯ ಪ್ರವಾಹ ನಿಯಂತ್ರಿಸಲು ಇಂದಿನಿಂದಲೇ ಕಾರ್ಯಪ್ರವೃತ್ತರಾಗುವಂತೆ ಸೂಚನೆ ನೀಡಿದರು.
ನಗರದಲ್ಲಿ ಘಟಪ್ರಭಾ ಮತ್ತು ಮಾರ್ಕಂಡೇಯ ನದಿಗಳ ಸಂಗಮವಾಗುವ ಹಿನ್ನೆಲೆ ನದಿ ತೀರದ ಜನವಸತಿ ಪ್ರದೇಶಗಳಿಗೆ ಅಧಿಕಾರಿಗಳು ಹೆಚ್ಚಿನ ಗಮನವಹಿಸಿ, ಬಳ್ಳಾರಿ ನಾಲಾ ಮತ್ತು ಮಾರ್ಕಂಡೇಯ ನದಿಯ ನೀರು ಅಂಕಲಗಿ ಕುಂದರಗಿ ಸೇರಿ ಇನ್ನಿತರ ಪ್ರದೇಶಗಳಲ್ಲಿ ಮಳೆ ನಿರಂತರವಾಗಿ ಸುರಿದರೆ ಪ್ರವಾಹ ಪರಿಸ್ಥಿತಿ ತೆಲೆದೊರಬಹುವುದು. ಹೀಗಾಗಿ ಜನರು ಮತ್ತು ಜಾನುವಾರುಗಳ ಸುರಕ್ಷತೆಗೆ ಕ್ರಮವಹಿಸಿ, ಗ್ರಾಮೀಣ ಭಾಗದಲ್ಲಿ ಮಳೆಯಿಂದಾಗಿ ರೋಗ ರುಜಿನುಗಳು ಹರಡುವ ಸಾಧ್ಯತೆ ಹೆಚ್ಚಿದ್ದು, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಆರೋಗ್ಯ ಇಲಾಖೆ ಹೆಚ್ಚಿನ ಗಮನವಹಿಸಿ ರೋಗ ಹರಡದಂತೆ ತಡೆಯಲು ಕ್ರಮ ವಹಿಸುವಂತೆ ಸೂಚನೆ ನೀಡಿದರು.ಕಳೆದೆರಡು ದಿನಗಳಿಂದ ಮಳೆಯ ಪ್ರಮಾಣ ಹೆಚ್ಚುತ್ತಿದ್ದು, ರಸ್ತೆಗಳಲ್ಲಿ ಗುಂಡಿಗಳು ಬೀಳುತ್ತಿವೆ. ಪಿಡಬ್ಲುಡಿ ಅಧಿಕಾರಿಗಳು ಗುಂಡಿ ಮುಚ್ಚಿಸುವ ಕಾರ್ಯ ಮಾಡಬೇಕು. ಈಗಾಗಲೇ ಮಾರ್ಕಂಡೇಯ ನದಿ ಮತ್ತು ಘಟಪ್ರಭಾ ನದಿಗೆ ಜಲಾಶಯಗಳಿಂದ ನೀರು ಹರಿ ಬಿಡುತ್ತಿದ್ದು, ಘಟಪ್ರಭಾ ನದಿ ತುಂಬಿ ಹರಿಯುತ್ತಿದೆ ಎಂದರು.ಈ ಸಂದರ್ಭದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಇತರರು ಇದ್ದರು.
-ರಮೇಶ ಜಾರಕಿಹೊಳಿ ಶಾಸಕ