ಕನ್ನಡಪ್ರಭ ವಾರ್ತೆ ಬೀದರ್
ಭಾರತೀಯರಾಗಿ, ರಾಷ್ಟ್ರದ ಹೀತಕ್ಕಾಗಿ ಹಾಗೂ ಭೂತಾಯಿಯ ರಕ್ಷಣೆಗೋಸ್ಕರ ಯಾವ ತ್ಯಾಗಕ್ಕೂ ಯುವಕರು ಸಿದ್ಧರಾಗಬೇಕು ಎಂದು ಹಲಬರ್ಗಾದ ರಾಚೋಟೇಶ್ವರ ವಿರಕ್ತ ಮಠದ ಹಾವಗಿಲಿಂಗ ಶಿವಾಚಾರ್ಯರರು ಕರೆ ನೀಡಿದರು.ನಗರದ ಲಾಡಗೇರಿ ಹಿರೇಮಠ ಸಂಸ್ಥಾನದಲ್ಲಿ ನಡೆದ ಕ್ರಾಂತಿಕಾರಿ ಭಗತಸಿಂಗ್ ಅವರ 117ನೇ ಜಯಂತಿ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ವಿಜಯಕುಮಾರ ಸೋನಾರೆ ಮಾತನಾಡಿ, ಲಾಡಗೇರಿ ಹಿರೇಮಠ ಸಂಸ್ಥಾನದ ಗಂಗಾಧರ ಶಿವಾಚಾರ್ಯರು ಸರ್ವರನ್ನು ಸಮನಾಗಿ ಕಾಣುವ, ಜಾತಿ ಭೇದವೆನ್ನದೇ ಎಲ್ಲರೂ ತಮ್ಮವರೆನ್ನುವ ಭಾವ ಹೊಂದಿದ್ದಾರೆ ಎಂದರು.ಬಿಜೆಪಿ ಮುಖಂಡ ನಾಗರಾಜ ಕರ್ಪೂರ್ ಮಾತನಾಡಿ, ಭಗತಸಿಂಗ್ ಬಾಲ್ಯದಿಂದಲೇ ದೇಶಭಕ್ತಿ, ದೇಶಪ್ರೇಮ ಮೈಗೂಡಿಸಿಕೊಂಡಿದ್ದ ಅವರು ಬ್ರಿಟಿಷರ ಕಪಿ ಮುಷ್ಠಿಯಿಂದ ಮಾತೃಭೂಮಿ ಭಾರತ ಮಾತೆಯ ವಿಮೋಚನೆಗಾಗಿ ಕಠಿಣ ಸಂಘರ್ಷ ಮಾಡಿದ್ದರು. ಬ್ರಿಟೀಷ ಅಧಿಕಾರಿ ಮತ್ತು ಸೈನಿಕರ ವಿರುದ್ಧ ತಮ್ಮ ಬೆಂಬಲಿಗರಾದ ಸುಖದೇವ ರಾಜಗುರು ಅವರೊಡಗೂಡಿ ಹೋರಾಡಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದರು. ಅವರ ಆದರ್ಶ ಜೀವನ ಇಂದಿನ ಯುವ ಪಿಳಿಗೆಗೆ ಮಾರ್ಗದರ್ಶನವಾಗಿದೆ ಎಂದು ಹೇಳಿದರು.
ಜೈ ಭಾರತ ಸೇವಾ ಸಮಿತಿ ನವದೇಹಲಿ ರಾಷ್ಟ್ರೀಯ ಸಂಸ್ಥಾಪಕ ಅಧ್ಯಕ್ಷರಾದ ನಿರಗುಡಿ ಹವಾ ಮಲ್ಲಿನಾಥ ಮಹಾರಾಜರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.ಲಾಡಗೇರಿ ಹಿರೇಮಠ ಸಂಸ್ಥಾನದ ಗಂಗಾಧರ ಶಿವಾಚಾರ್ಯರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಿದರು.
ವೈಷ್ಣೋದೇವಿ ಆರಾಧಕ ಅಮೃತರಾವ್, ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಸುನೀಲ ಭಾವಿಕಟ್ಟಿ, ಮುಖಂಡರಾದ ಚಂದ್ರಕಾಂತ ಅಷ್ಟೂರ್, ಮಲ್ಲಪ್ಪ ಹುಲೇಪ್ಪನೋರ್, ಶಿವರಾಜ ಅಷ್ಟೂರ್, ಕಂಟೇಪ್ಪಾ ಪಾಟೀಲ್ ಹಳ್ಳದಕೇರಿ, ಸೋಮಶೇಖರ್ ನಿಲಪ್ಪನೋರ್, ಮಹಾರುದ್ರಪ್ಪಾ ಚಿಕ್ಲೆ, ಅಶೋಕ ಹಳ್ಳದಕೇರಿ, ಪಪ್ಪು ಪಾಟೀಲ್ ಖಾನಾಪೂರ್, ಮಾಣಿಕ ಮೇತ್ರೆ, ಶ್ರೀಮಂತ ಸಪಾಟೆ, ಮಾರುತಿ ಮೇತ್ರೆ, ವಿರುಪಾಕ್ಷಯ್ಯಾ ಸ್ವಾಮಿ, ಸಿದ್ರಾಮಯ್ಯಾ ಸ್ವಾಮಿ, ದೀಪಕ್ ಥಮಕೆ ಸೇರಿ ಅನೇಕರು ಉಪಸ್ಥಿತರಿದ್ದರು