ಮಹಿಳಾ ವಿಚಾರಗೋಷ್ಠಿಗೆ ಚಾಲನೆ ನೀಡಿದ ಧಗ್ರಾ ನಿರ್ದೇಶಕ ಪದ್ಮಯ್ಯ
ಸ್ವಸ್ಥ ಸಮಾಜ ನಿರ್ಮಿಸಿ, ಮಹಿಳೆಯರಿಗೆ ವಿವಿಧ ಯೋಜನೆ, ಸದ್ಬಳಕೆ ಮಾಡಿಕೊಳ್ಳಿ, ಗರ್ಭಕೋಶ ಕ್ಯಾನ್ಸರ್, ಕೋಲಾರಹೆಣ್ಣು ಮಕ್ಕಳು ಸರ್ವತೋಮುಖ ಅಭಿವೃದ್ಧಿಯಾಗಬೇಕೆಂಬ ಉದ್ದೇಶದಿಂದ ಧಗ್ರಾ ಸಂಸ್ಥೆ ಹಲಾವರು ಯೋಜನೆಗಳನ್ನು ಮಹಿಳೆಯರಿಗಾಗಿ ಅನುಷ್ಠಾನಗೊಳಿಸಿದೆ. ಮಹಿಳೆಯರು ಇದರ ಸದುಪಯೋಗ ಪಡಿಸಿಕೊಳ್ಳಬೇಕು. ಮಹಿಳೆಯರು ಸ್ವಂತ ದುಡಿಮೆ ಮೂಲಕ ಸ್ವಾಲಂಬಿಗಳಾದರೆ ಕುಟುಂಬವೂ ಆರ್ಥಿಕವಾಗಿ ಅಭಿವೃದ್ಧಿಯಾಗುತ್ತದೆ.
ಕನ್ನಡಪ್ರಭ ವಾರ್ತೆ ಮಾಲೂರುಹೆಣ್ಣು ಮಕ್ಕಳು ಉತ್ತಮ ವಿದ್ಯಾಭ್ಯಾಸ ಪಡೆಯುವ ಜತೆಯಲ್ಲಿ ಸ್ವಾವಲಂಬಿಯಾದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದು ಧಗ್ರಾ ಜಿಲ್ಲಾ ನಿರ್ದೇಶಕ ಸಿ.ಎಚ್.ಪದ್ಮಯ್ಯ ಹೇಳಿದರು.
ಅವರು ತಾಲೂಕಿನ ಲಕ್ಕೂರು ಗ್ರಾಮದ ಸರ್ಕಾರಿ ಪ್ರೌಡಶಾಲೆ ಅವರಣದಲ್ಲಿ ಗಡಿನಾಡು ಸಾಂಸ್ಕೃತಿಕ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿಗೆ ಚಾಲನೆ ನೀಡಿ ಮಾತನಾಡಿದರು.ಮಹಿಳೆಯರಿಗೆ ವಿವಿಧ ಯೋಜನೆ
ಹೆಣ್ಣು ಮಕ್ಕಳು ಸರ್ವತೋಮುಖ ಅಭಿವೃದ್ಧಿಯಾಗಬೇಕೆಂಬ ಉದ್ದೇಶದಿಂದ ಧಗ್ರಾ ಸಂಸ್ಥೆ ಹಲಾವರು ಯೋಜನೆಗಳನ್ನು ಮಹಿಳೆಯರಿಗಾಗಿ ಅನುಷ್ಠಾನಗೊಳಿಸಿದೆ. ಮಹಿಳೆಯರು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದರು.ಹೆಚ್ಚುತ್ತಿರುವ ಗರ್ಭಕೋಶ ಕ್ಯಾನ್ಸರ್
ವಂಶೋದಯ ಆಸ್ಪತ್ರೆ ವೈದ್ಯಾಧಿಕಾರಿ ಹಾಗೂ ಲಯನ್ಸ್ ಕ್ಲಬ್ ಅಧ್ಯಕ್ಷೆ ಡಾ.ಸುನೀತಾ ಪ್ರಭು ಮಾತನಾಡಿ, ಮಹಿಳೆಯರಲ್ಲಿ ಇತ್ತೀಚೆಗೆ ಸ್ತನ ಹಾಗೂ ಗರ್ಭಕೋಶ ಕ್ಯಾನ್ಸರ್ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಎಂಟು ನಿಮಿಷಕ್ಕೆ ಒಬ್ಬ ಮಹಿಳೆ ಈ ಕಾಯಿಲೆಗೆ ಬಲಿಯಾಗುತ್ತಿದ್ದಾರೆ. ಮಹಿಳೆಯರಿಗೆ ಈ ಬಗ್ಗೆ ಹೆಚ್ಚಿನ ಅರಿವು ಮೂಡಿಸಬೇಕಾಗಿದೆ ಎಂದರು.ಈ ಸಂದರ್ಭದಲ್ಲಿ ತಾಲೂಕು ಯೋಜನಾಧಿಕಾರಿಗಳಾದ ಸತೀಶ್, ಪಂಚಾಯ್ತಿ ಸದಸ್ಯ ಚೇತನ್ ಗೌಡ, ಜಿಲ್ಲಾ ಮಹಿಳಾ ರಕ್ಷಣಾ ವೇದಿಕೆ ಅಧ್ಯಕ್ಷ ಲತಾಬಾಯಿ, ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಉಷಾರಾಣಿ ,ಕೃಷಿ ಅಧಿಕಾರಿ ಮಧುರಾಜ್, ವಿಚಕ್ಷಣಾಧಿಕಾರಿ ತಿಪ್ಪೇಸ್ವಾಮಿ ,ಜೀವನ್, ಮೇಲ್ವಿಚಾರಕರಾದ ಪುರುಷೋತ್ತಮ್, ರಮೇಶ್, ಕವಿತಾ, ನೇತ್ರಾ, ಮಂಜುನಾಥ್, ಲತಾ, ರಂಜಿತ್, ಆದಿನಾರಾಯಣ್ ಸೇರಿದಂತೆ ಸೇವಾ ಪ್ರತಿನಿಧಿಗಳಿದ್ದರು. ಶಿರ್ಷಿಕೆ16-ಕೆ.ಎಂ.ಎಲ್.ಅರ್.1-.....ಮಾಲೂರು ತಾಲೂಕಿನ ಲಕ್ಕೂರಿನಲ್ಲಿ ಆಯೋಜಿಸಿದ್ದ ಮಹಿಳಾ ವಿಚಾರಗೋಷ್ಠಿಯನ್ನು ಧಗ್ರಾ ಜಿಲ್ಲಾ ನಿರ್ದೇಶಕ ಪದ್ಮಯ್ಯ ಚಾಲನೆ ನೀಡಿದರು.