ಕನ್ನಡಪ್ರಭ ವಾರ್ತೆ ಕಲಬುರಗಿ
ಲೋಕಸಭೆ ಚುನಾವಣೆ ಘೋಷಣೆಯಾದ ಹಿನ್ನೆಲೆ ಎಲ್ಲೆಡೆ ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಸ್ಎಸ್‌ಟಿ, ಎಫ್ಎಸ್‌ಟಿ, ವಿಎಸ್‌ಟಿ ತಂಡಗಳನ್ನು ಭಾರತ ಚುನಾವಣಾ ಆಯೋಗದ ಮಾಗದರ್ಶನದಲ್ಲಿ ಕೆಲಸ ಕಾರ್ಯ ನಿರ್ವಹಿಸಲು ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿಯೂ ಆಗಿರುವ ಫೌಜಿಯಾ ತರನ್ನುಮ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.ಜಿಲ್ಲಾಧಿಕಾರಿ ಕಚೇರಿ ಕೆಸ್ವಾನ್ ಸಭಾಂಗಣದಲ್ಲಿ ವಿಡಿಯೋ ಕಾನ್ಪರೆನ್ಸ್ ಮೂಲಕ ಚುನಾವಣೆ ಸಮಿತಿ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ತಾಲೂಕಿನ ತಹಸೀಲ್ದಾರರು, ಎಆರ್‌ಓ ನೋಡಲ್ ಅಧಿಕಾರಿಗಳ ಸಭೆ ನಡೆಸಿದ ಅವರು, ಕಲಬುರಗಿ ಉತ್ತರ, ದಕ್ಷಿಣ ಮತಕ್ಷೇತ್ರ ಒಳಗೊಂಡಂತೆ ಕಲಬುರಗಿ ಗ್ರಾಮೀಣ, ಚಿಂಚೋಳಿ, ಸೇಡಂ, ಅಫಜಲ್ಪುರ, ಚಿತ್ತಾಪೂರ, ಯಡ್ರಾಮಿ ಮತ್ತು ಜೇವರ್ಗಿ ವಿಶೇಷವಾಗಿ ಅಂತರ ರಾಜ್ಯ ಗಡಿಯಲ್ಲಿ ಕಟ್ಟೆಚ್ಚರ ವಹಿಸಬೇಕು ಮತ್ತು ಯಾವುದೇ ವಸ್ತು ಹಣ ಸಾಮಗ್ರಿ ಅಕ್ರಮವಾಗಿ ವಾಹನಗಳಲ್ಲಿ ವಿಲೇವಾರಿ ಮಾಡುತ್ತಿದ್ದರೆ ಅವುಗಳನ್ನು ಸೀಜ್ ಮಾಡಬೇಕೆಂದರು.
ಚೆಕ್ ಪೋಸ್ಟ್‌ನಲ್ಲಿ ಯಾವುದೇ ವಾಹನ ಬಿಡಕೂಡದು, ಕಡ್ಡಾಯವಾಗಿ ತಪಾಸಣೆ ಕೈಗೊಳ್ಳಬೇಕು ಎಂದರು. ಎಸ್ಎಸ್‌ಟಿದವರು ಚೆಕ್‌ಪೋಸ್ಟ್‌ನಲ್ಲಿ 50 ಸಾವಿರಕ್ಕಿಂತ ಹೆಚ್ಚು ಹಣ ಇದ್ದರೆ ಅದಕ್ಕೆ ಸಂಬಂಧಪಟ್ಟ ದಾಖಲೆ ಪಡೆದುಕೊಳ್ಳಬೇಕು ಎಲ್ಲ ವಿಷಯ ತಿಳಿದುಕೊಳ್ಳಬೇಕೆಂದರು. ಸಂಬಂಧ ಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು ಎಂದರು.ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಕ್ಷಯ್ ಹಾಕೈ ಮಾತನಾಡಿ, ವಾಹನ ತಪಾಸಣೆಯಲ್ಲಿ ರಾಜಕೀಯ ಪಕ್ಷದ ಕ್ಯಾಪ, ಶಾಲು,ಪಾಟಿ, ಧ್ವಜ ಮತ್ತು ಲಿಕ್ಕರ್ ಸಿಕ್ಕಾಗ ಬೇರೆ ಬೇರೆ ಎಫ್‌ಐಆರ್ ಮಾಡುವ ಹಾಗೆ ಇಲ್ಲ ಎರಡು ಒಂದರಲ್ಲಿಯೇ ಮಾಡಬೇಕೆಂದರು.
ಒಂದು ಟೀಮ್‍ನಲ್ಲಿ ಮೂವರು ಜನ ಇರುತ್ತಾರೆ ಒಂದೇ ಸಮಯದಲ್ಲಿ ಮೂರು ಕಾರ್ಯಕ್ರಮಗಳು ನಡೆದಾಗ ಎಸ್ಎಸ್‌ಟಿ ದವರಿಗೆ ಕರೆಯಬೇಕು ಮತ್ತು ರಿಜಿಸ್ಟರ್‌ನಲ್ಲಿ ನಮೂದಿಸಬೇಕು. ವಿಡಿಯೋ ಕಡ್ಡಾಯವಾಗಿ ಮಾಡಬೇಕು ಒಂದು ವೇಳೆ ಕ್ಯಾಮೆರಾ ಬ್ಯಾಟರಿ ಇಲ್ಲದಿದ್ದರೆ ಪ್ರತಿಯೊಬ್ಬರಲ್ಲಿ ಮೊಬೈಲ್ ಇರುತ್ತದೆ ಅವರ ಮೊಬೈಲ್‍ನಿಂದ ವಿಡಿಯೋ ಮಾಡಬೇಕು ಪ್ರತಿಯೊಂದಕ್ಕೊ ವಿಡಿಯೋ ಒಂದು ಡಾಕ್ಯುಮೆಂಟ್ ಆಗಬೇಕು ಎಂದರು.ಸೋಷಿಯಲ್ ಮೀಡಿಯಾ ಮೇಲೆ ನಿಗಾ ವಹಿಸಿ: ಜಿಪಂನ ಭಂವರ ಸಿಂಗ್ ಮೀನಾ ಮಾತನಾಡಿ, ನೀತಿ ಸಂಹಿತೆ ಜಾರಿಯಾದ ನಂತರದಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಡಿಜಿಟಲ್ ಪ್ರಚಾರ ಹೆಚ್ಚು ಮಾಡುತ್ತಾರೆ. ರಾಜಕೀಯ ಪಕ್ಷದ ಪಕ್ಷದ ಅಭಿಮಾನಿಗಳು ಫೇಸ್ಬುಕ್, ಟ್ವೀಟರ್, ಯೂಟ್ಯೂಬ್, ಇನ್ಸ್ಟಾಗ್ರಾಂ ಖಾತೆಗಳ ಮೇಲೆ ನಿಗಾ ವಹಿಸಿ ಎಂದರು.
ಸಭೆಯಲ್ಲಿ ಉಪಸಂರಕ್ಷಣಾಧಿಕಾರಿ ಸುಮಿತ ಪಾಟೀಲ,ಡಿ.ಸಿ.ಪಿ ಕನಿಕಾ ಸಿಕ್ರಿವಾಲ್, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಸೇರಿದಂತೆ ಎಸ್ಎಸ್‌ಟಿ, ಎಫ್ಎಸ್‌ಟಿ, ವಿಎಸ್‌ಟಿ, ತಂಡದ ಮುಖ್ಯಸ್ಥರು, ತಹಸೀಲ್ದಾರರು, ಪೊಲೀಸ್, ನೋಡಲ್ ಅಧಿಕಾರಿಗಳು, ಜಿಲ್ಲಾಮಟ್ಟದ ಅಧಿಕಾರಿಗಳು ಎಆರ್‌ಓ ಉಪಸ್ಥಿತರಿದ್ದರು.