ಕನ್ನಡಪ್ರಭ ವಾರ್ತೆ, ತರೀಕೆರೆ
ಪ್ರತಿಯೊಂದು ಪೆಟ್ಟಿಗೆಯಲ್ಲಿ ಸುಮಾರು ಹತ್ತು ಕೆ.ಜಿಯಷ್ಟು ಜೇನುತುಪ್ಪ ಸಂಗ್ರಹವಾಗಿದ್ದು, ಇಂದಿನ ಮಾರುಕಟ್ಟೆ ಧಾರಣೆಯ ಒಂದು ಕೇಜಿಗೆ ಐದುನೂರು
ರು.ಗಳಿಂದ 600 ರು.ಗಳಷ್ಟು ಬೆಲೆ ಇದ್ದು, 13 ಪೆಟ್ಟಿಗೆಯಿಂದ ಸುಮಾರು 78,000 ರು.ಗಳಷ್ಟು ನಷ್ಟವಾಗಿದೆ ಹಾಗೂ ಒಂದು ಜೇನು ಕುಟುಂಬಕ್ಕೆ 2000 ರು. ಇದ್ದು, ಒಟ್ಟು 1,04,000 ನಷ್ಟವಾಗಿರುತ್ತದೆ ಎಂದು ನೋವನ್ನು ಹೇಳಿ ಕೊಂಡಿದ್ದಾರೆ.ಕರಡಿ ನುಗ್ಗಿ ಶೇಖರಣೆಯಾದ ಜೇನುತುಪ್ಪದ ಪೆಟ್ಟಿಗೆಗಳು ನಷ್ಟವಾಗಿರುವ ಕುರಿತು ತೋಟಗಾರಿಕೆ ಇಲಾಖೆಯವರಿಗೆ ಮನವಿ ಸಲ್ಲಿಸಿದ್ದು, ಇಲಾಖೆಯವರು ಅರಣ್ಯ ಇಲಾಖೆಯಲ್ಲಿ ಪರಿಹಾರ ಕೇಳಲು ಸೂಚಿಸಿದ್ದಾರೆ , ಆದರೆ, ಅರಣ್ಯ ಇಲಾಖೆಯವರು ವನ್ಯಜೀವಿ ಹಾನಿ ಮಾಡಿರುವ ಜೇನುಪೆಟ್ಟಿಗೆ ಮತ್ತು ಜೇನುತುಪ್ಪಕ್ಕೆ ತತ್ರಾಂಶದಲ್ಲಿ ಅವಕಾಶವಿಲ್ಲವೆಂದು ಹಿಂಬರಹ ನೀಡಿರುತ್ತಾರೆ ಎಂದು ತಿಳಿಸಿದ್ದಾರೆ.ಜೇನುಕೃಷಿಗೆ ಉತ್ತೇಜಿಸುವ ಸರ್ಕಾರ, ವನ್ಯಜೀವಿಯಿಂದ ಹಾನಿಯಾದಾಗ ಪರಿಹಾರವಿಲ್ಲವೆಂದು ಹೇಳಿದರೆ, ಜೇನುಕೃಷಿ ಮಾಡುವುದು ಹೇಗೆ, ನಮಗೆ ಆಗಿರುವ ನಷ್ಟಕ್ಕೆ ಹೊಣೆಗಾರರು ಯಾರು, ದಯವಿಟ್ಟು ಸರ್ಕಾರ ವನ್ಯಜೀವಿಯಿಂದ ಹಾನಿ ಯಾದ ಜೇನು ಕೃಷಿಗೆ ಪರಿಹಾರ ನೀಡಬೇಕೆಂದು ರೈತ ದಯಾನಂದ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.5ಕೆಟಿಆರ್.ಕೆ.9ಃ