ಕನ್ನಡಪ್ರಭ ವಾರ್ತೆ ಶಿರಾ
ಸೋಮವಾರ ತಾಲೂಕಿನ ಕೊಟ್ಟ ಗ್ರಾಮದಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಂಡಿರುವ ಸಂವಿಧಾನ ಜಾಗೃತಿ ಜಾಥಾವನ್ನು ಸ್ವಾಗತಿಸಿ ಅವರು ಮಾತಾನಾಡಿದರು. ಈ ದೇಶದ ಎಲ್ಲಾ ಮಹಿಳೆಯರಿಗೆ, ಶೋಷಿತರಿಗೆ, ಧ್ವನಿಯಿಲ್ಲದವರಿಗೆ ಡಾ.ಬಿ.ಆರ್.ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನವೇ ಒಂದು ದೊಡ್ಡ ಶಕ್ತಿಯಾಗಿದೆ. ಇಂತಹ ಸಂವಿಧಾನ ಅಪಾಯಕ್ಕೆ ಸಿಗದಂತೆ ಎಚ್ಚರಿಕೆಯಿಂದ ರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರದ್ದು, ಸಂವಿಧಾನ ವಿರೋಧಿ ಶಕ್ತಿಗಳು ಧರ್ಮಗಳನ್ನು ಜನರ ಮಧ್ಯೆ ಎಳೆದು ತಂದು ಒಡಕು ಸೃಷ್ಟಿಸಲು ಹವಣಿಸುತ್ತಿವೆ. ನಾವು ತುಂಬಾ ಎಚ್ಚರದಿಂದಲೇ ದೇಶದ ಐಕ್ಯತೆಯನ್ನು ಕಾಪಾಡಬೇಕಿದೆ. ಧರ್ಮಗ್ರಂಥಗಳು ಅವರವರ ಧರ್ಮದ ನಂಬಿಕೆಯ ಮನಸ್ಸಿನ ನೆಮ್ಮದಿಯ ಭಾಗವಾಗಿದ್ದರೆ ದೇಶದ ಸಂವಿಧಾನ ಮಾತ್ರ ಎಲ್ಲರ ರಕ್ಷಣೆ, ನೆಮ್ಮದಿ, ಐಕ್ಯತೆ, ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿರುತ್ತದೆ. ಹಾಗಾಗಿ ಧರ್ಮಗ್ರಂಥಗಳಿಗಿಂತ ಸಂವಿಧಾನವೇ ಶ್ರೇಷ್ಠ ಎಂದರು.
ಕೊಟ್ಟ ಗ್ರಾಪಂ ಅಧ್ಯಕ್ಷೆ ವಿಮಲಾಕ್ಷಿ ರಾಮಣ್ಣ, ಸದಸ್ಯರಾದ ಎಲ್.ಜಿ. ರಂಗನಾಥ್, ಕೆ.ಶಶಿಧರ, ವರಲಕ್ಷ್ಮೀ, ಮಂಜುಳಾ, ಧರಣೇಶ್, ದುರ್ಗಮ್ಮ, ಪಿಡಿಒ ನಾಗರಾಜು, ನೋಡಲ್ ಅಧಿಕಾರಿ ಸಂದೇಶ, ಕಸಬಾ ಕಂದಾಯ ಅಧಿಕಾರಿ ಸುದರ್ಶನ್, ಗಂಗರಾಜು ಸೇರಿ ಗ್ರಾಪಂ ಸಿಬ್ಬಂದಿ ಹಾಗೂ ಶಿಕ್ಷಕರು, ವಿದ್ಯಾರ್ಥಿಗಳು, ಗ್ರಾಮಸ್ಥರು ಹಾಜರಿದ್ದರು.