ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಕರಡಿಯೊಂದು ತಾಲೂಕಿನ ಬೇಗೂರು ಲಿಟಲ್ ಫ್ಲವರ್ ಕಾನ್ವೆಂಟ್ ಬಳಿ ಬೆಳ್ಳಂ ಬೆಳಗ್ಗೆಯೇ ಕಾಣಿಸಿಕೊಂಡ ಹಿನ್ನೆಲೆ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದು, ಕರಡಿ ಸೆರೆಗೆ ಬಂಡೀಪುರ ಅರಣ್ಯ ಇಲಾಖೆ ಬೆಳಗ್ಗೆಯಿಂದ ಸಂಜೆ ತನಕ ಕಾರ್ಯಾಚರಣೆ ನಡೆಸಿದರೂ ಕರಡಿ ಚಳ್ಳೆ ಹಣ್ಣು ತಿನ್ನುಸುತ್ತಿದೆ.ಸೋಮವಾರ ಬೆಳ್ಳಂ ಬೆಳಗ್ಗೆ ಕೋಟೆಕೆರೆ ರಸ್ತೆಯ ಮಹದೇಶ್ವರ ಬಡಾವಣೆಯಲ್ಲಿ ಕಾಣಿಸಿಕೊಂಡು ಲಿಟಲ್ ಫ್ಲವರ್ ಕಾನ್ವೆಂಟ್ ನೊಳಗೆ ತೆರಳುವುದನ್ನು ಬೆಳ್ಳಂ ಬೆಳಗ್ಗೆ ಜನರು ನೋಡಿದ್ದಾರೆ. ಬಳಿಕ ಕಾನ್ವೆಂಟ್ ಗೋಡೆ ಹಾರಿ ಕೆಇಬಿ ಸ್ಟೇಷನ್ ಕಡೆ ತೆರಳಿ ಅನತಿ ದೂರದ ತೆಂಗಿನ ತೋಟದೊಳಗೆ ಹೋದ ಬಳಿಕ ಮತ್ತೆ ಕಬ್ಬಿನ ತೋಟದೊಳಗೆ ಸೇರಿಕೊಂಡಿದೆ.
ಎಸಿಎಫ್ ಕೆ.ಸುರೇಶ್, ಆರ್‌ಎಫ್‌ಒ ಶಿವಕುಮಾರ್ ಹಾಗೂ ಎಸ್‌ಟಿಪಿಎಫ್ ಹಾಗೂ ಅರಣ್ಯ ಸಿಬ್ಬಂದಿ ಸ್ಥಳಕ್ಕಾಗಮಿಸಿ ಕಬ್ಬಿನ ತೋಟದ ಸುತ್ತ ಕಾವಲು ಕಾಯುತ್ತ ಪಟಾಕಿ ಸಿಡಿಸಿದರು. ಆದರೂ ಕಬ್ಬಿನ ತೋಟದಿಂದ ಹೊರಗೆ ಬರಲೇ ಇಲ್ಲ.ಬಳಿಕ ಕರಡಿ ಸೆರೆ ಹಿಡಿಯಬೇಕು ಎಂದು ಎಸಿಎಫ್ ಅರಣ್ಯ ಇಲಾಖೆ ಪಶು ವೈದ್ಯ ಡಾ.ವಾಸೀ ಮಿರ್ಜಾ ಕರೆಸಿದರು. ಬಳಿಕ ಕಬ್ಬಿನ ತೋಟದೊಳಗೆ ರಕ್ಷಾ ಕವಚ ಧರಿಸಿ ಹುಡುಕಾಟ ನಡೆಸುವ ಜೊತೆಗೆ ಡ್ರೋನ್ ಹಾರಿಸಿದರು. ಕರಡಿ ಸುಳಿವೇ ಸಿಗಲಿಲ್ಲ ಎಂದು ಎಸಿಎಫ್ ಕೆ.ಸುರೇಶ್ ತಿಳಿಸಿದ್ದಾರೆ.
ಬೆಳಗ್ಗೆಯಿಂದ ಸಂಜೆ ತನಕ ಕರಡಿ ಸೆರೆಗೆ ಕಾರ್ಯಾಚರಣೆ ನಡೆಸಿದರೂ ಕರಡಿ ಸಿಗದೆ ಅರಣ್ಯ ಇಲಾಖೆಗೆ ಚಳ್ಳೆ ಹಣ್ಣು ತಿನ್ನಿಸಿದ ಕಾರಣ ರಾತ್ರಿ ಕೂಡ ಸಿಬ್ಬಂದಿ ಕಾವಲು ಹಾಕಲಾಗುವುದು ಎಂದರು.5ಜಿಪಿಟಿ5ಗುಂಡ್ಲುಪೇಟೆ ತಾಲೂಕಿನ ಬೇಗೂರು ಬಳಿ ಜಮೀನಿನಲ್ಲಿ ಕರಡಿ ತೆರಳುವುದನ್ನು ಯುವಕನೊಬ್ಬ ಮೊಬೈಲ್ ನಲ್ಲಿ ಸೆರೆ ಹಿಡಿಯುವ ದೃಶ್ಯ.
-----8ಜಿಪಿಟಿ6ಗುಂಡ್ಲುಪೇಟೆ ತಾಲೂಕಿನ ಬೇಗೂರು ಬಳಿ ಕಬ್ಬಿನ ತೋಟದಲ್ಲಿ ಕರಡಿ ಸೆರೆಗೆ ಕಾರ್ಯಾಚರಣೆಗೆ ಇಳಿಯಲು ಎಸಿಎಫ್ ಕೆ.ಸುರೇಶ್ ಸಿಬ್ಬಂದಿಗೆ ಸೂಚನೆ ನೀಡಿದರು.
-----------------ಮರಿ ಚಿರತೆಗಾಗಿ ಬೋನ್ಗುಂಡ್ಲುಪೇಟೆ
ತಾಲೂಕಿನ ಹಂಗಳಪುರ ಗ್ರಾಮದ ಕಬ್ಬಿನ ತೋಟದಲ್ಲಿ ತಾಯಿ ಚಿರತೆಯಿಂದ ಬೇರ್ಪಟ್ಟ ಮರಿ ಚಿರತೆ ಸೇರಿಸಲು ಸೋಮವಾರ ರಾತ್ರಿ ಕೂಡ ತಾಯಿಂದ ಬೇರ್ಪಟ್ಟ ಸ್ಥಳದಲ್ಲೇ ಚಿರತೆ ಮರಿಯನ್ನು ಇರಿಸಲಾಗುವುದು ಆರ್‌ಎಫ್‌ಒ ಶಿವಕುಮಾರ್ ಹೇಳಿದ್ದಾರೆ.ಕನ್ನಡಪ್ರಭದೊಂದಿಗೆ ಮಾತನಾಡಿ, ಭಾನುವಾರ ರಾತ್ರಿ ಕಬ್ಬಿನ ತೋಟದಲ್ಲಿ ಚಿರತೆ ಮರಿ ಇರಿಸಲಾಗಿತ್ತು ತಾಯಿ ಚಿರತೆ ಬಂದಿರಲಿಲ್ಲ. ಸೋಮವಾರ ರಾತ್ರಿಯೂ ಚಿರತೆ ಮರಿಯನ್ನು ಬೋನಿಗೆ ಇರಿಸುವುದಾಗಿ ತಿಳಿಸಿದ್ದಾರೆ.----------------