ಕನ್ನಡಪ್ರಭ ವಾರ್ತೆ ಶಿರಾ ರೈತರು ಸಹಕಾರ ಬ್ಯಾಂಕುಗಳಲ್ಲಿ ತೆಗೆದುಕೊಂಡ ಸಾಲಗಳನ್ನು ಸರಿಯಾದ ಉದ್ದೇಶಗಳಿಗೆ ಬಳಸಿಕೊಂಡು ಅವರು ಸ್ವಾವಲಂಬಿಗಳಾಗಬೇಕು ಅವರ ಮಕ್ಕಳನ್ನು ಉತ್ತಮ ವಿದ್ಯಾವಂತರನ್ನಾಗಿ ಮಾಡುವ ಮೂಲಕ ದೇಶದ ಆಸ್ತಿಯಾಗಿಸಬೇಕು ಎಂದುಸಹಕಾರ ಸಚಿವ ಕೆ ಎನ್ ರಾಜಣ್ಣ ಹೇಳಿದರು.ಅವರು ಶಿರಾ ತಾಲೂಕು ಬುಕ್ಕಾಪಟ್ಟಣದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡ, ಗೋದಮು ಮಳಿಗೆಗಳು ಹಾಗೂ ತುಮಕೂರು ಡಿಸಿಸಿ ಬ್ಯಾಂಕಿನ 44ನೇ ಶಾಖೆಯ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಸಹಕಾರ ಸಂಘಗಳಿಂದ ರೈತರು ತೆಗೆದುಕೊಂಡ ಸಾಲವನ್ನು ಮಗಳ ಮದುವೆಗೊ, ಹಬ್ಬಕ್ಕೋ ಬಳಸದೆ ಕೃಷಿ ಸಾಮಗ್ರಿಗಳನ್ನು ಖರೀದಿ ಮಾಡಲು, ಸ್ವಾವಲಂಬನೆಯಿಂದ ಬದುಕಲು, ಉಪಕಸುಬುಗಳನ್ನು ಅಭಿವೃದ್ಧಿಪಡಿಸಲು, ಬಳಸಿಕೊಂಡು ಸ್ವಾವಲಂಬನೆಯತ್ತ ಹೆಜ್ಜೆ ಹಾಕಬೇಕು, ತುಮಕೂರು ಜಿಲ್ಲೆಯ ಪ್ರತಿ ಹೋಬಳಿಯಲ್ಲೂ ಒಂದೊಂದು ಡಿಸಿಸಿ ಬ್ಯಾಂಕ್ ತೆರೆಯುವ ಕನಸು ನಮ್ಮದಾಗಿದ್ದು ರೈತರು ಲೀಡ್ ಬ್ಯಾಂಕುಗಳ ಮುಂದೆ ಕೈಕಟ್ಟಿ ಸಾಲ ಕೇಳಲು ನಿಲ್ಲುವಂತಹ ಸ್ಥಿತಿ ಕೊನೆ ಆಗಬೇಕು ಎಲ್ಲ ರೈತರಿಗೂ ತಾಲೂಕು ಹಂತಗಳಲ್ಲದೇ ಹೋಬಳಿ ಹಂತಗಳಲ್ಲಿಯೇ ಸಾಲ ಮಂಜೂರಾಗಬೇಕು ಆಗ ಸಹಕಾರಿಗಳ ಶ್ರಮ ಸಾರ್ಥಕವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಚಿ. ನಾ. ಹಳ್ಳಿ ಶಾಸಕ ಸಿಬಿ ಸುರೇಶ್ ಬಾಬು ರವರು ನಬಾರ್ಡ್ ನ ಜಿಲ್ಲಾ ಅಭಿವೃದ್ಧಿ ಅಧಿಕಾರಿ ಕೀರ್ತಿ ಪ್ರಭಾ, ಡಿಸಿಸಿ ಬ್ಯಾಂಕ್ ಜಿಲ್ಲಾ ನಿರ್ದೇಶಕರಾದ ಜಿ ಎನ್ ಮೂರ್ತಿ, ಜಿ ಎಸ್ ರವಿಕುಮಾರ್, ಸಿಂಗದಹಳ್ಳಿ ರಾಜಕುಮಾರ್, ಪ್ರಭಾಕರ್, ನಾಗೇಶ್ ಬಾಬು, ಕರೆಮಾದೇನಹಳ್ಳಿ ನಾಗರಾಜು, ಬುಕ್ಕಾಪಟ್ಟಣ ವಿ ಎಸ್ ಎಸ್ ಎನ್ ಅದ್ಯಕ್ಷ ಗೋವಿಂದರಾಜು, ಗ್ರಾ ಪಂ ಅಧ್ಯಕ್ಷ ಮುಜಾಹಿದ್ ಬಿ ಆರ್ ಮಂಜುನಾಥ್ , ಶಾಂತಕುಮಾರ್ , ಹೊಸಪಾಳ್ಯ ಜೈ ಪ್ರಕಾಶ್, ಲಿಂಗಪ್ಪ, ಬಿ ಆರ್ ಎಂ ಸತ್ಯನಾರಾಯಣ, ಸೇರಿದಂತೆ ಗ್ರಾಮಸ್ಥರು ಅಕ್ಕಪಕ್ಕ ಗ್ರಾಮಗಳ ರೈತರು ಹಾಜರಿದ್ದರು. 16ಶಿರಾ1: ಶಿರಾ ತಾಲೂಕು ಬುಕ್ಕಾಪಟ್ಟಣದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡ, ಗೋದಮು ಮಳಿಗೆಗಳು ಹಾಗೂ ತುಮಕೂರು ಡಿಸಿಸಿ ಬ್ಯಾಂಕಿನ 44ನೇ ಶಾಖೆಯನ್ನು ಸಹಕಾರ ಸಚಿವ ಕೆ.ಎನ್.ರಾಜಣ್ಣ ಉದ್ಘಾಟಿಸಿದರು.