ಕನ್ನಡಪ್ರಭ ವಾರ್ತೆ ಜಮಖಂಡಿ
ತಾಲೂಕಿನ ಜಕನೂರು ಗ್ರಾಮದ ಮಾದಣ್ಣ ಮದಗೊಂಡೇಶ್ವರ ಸಿದ್ದಾಶ್ರಮದ ಬಂಡಾರ ಸಂಸ್ಕೃತಿ, ಜನಪದ ಮತ್ತು ಡೊಳ್ಳಿನ ಕಲಾಮಹೋತ್ಸವ ಉದ್ಘಾಟಿಸಿ ಅವರು ಮಾತನಾಡಿ, ಹಿಂದುಗಳ ಆಸ್ತಿಕ ವಿಷಯದಲ್ಲಿ ಚೆಲ್ಲಾಟ ಆಡುತ್ತಿರುವವರನ್ನು ಎಂದಿಗೂ ಕ್ಷಮಿಸಬಾರದು. ಹಿಂದುಗಳ ಆರಾಧ್ಯ ದೈವ ತಿಮ್ಮಪ್ಪನ ಪ್ರಸಾದವನ್ನು ಕಲಬೆರಕೆ ಮಾಡಿದ್ದು ಅಕ್ಷಮ್ಯ ಅಪರಾಧ. ಹಿಂದೂಗಳನ್ನು ಅವರ ಭಾವನೆಗಳನ್ನು ಲೆಕ್ಕಿಸದೇ ಇಂತಹ ಕೃತ್ಯಗಳನ್ನು ನಡೆಸುತ್ತಿರುವವರ ವಿರುದ್ಧ ಸಮಾಜ ಜಾಗೃತವಾಗಿ ತಕ್ಕಪಾಠ ಕಲಿಸಬೇಕು ಎಂದರು.
ನಾಗಮಂಗಲದ ಗಣೇಶ ಉತ್ಸವದ ಮೆರವಣಿಗೆಯಲ್ಲಿ ಗಲಭೆಯಾಗಿ ಆಸ್ತಿ-ಪಾಸ್ತಿ ಕಳೆದುಕೊಂಡ ಅಮಾಯಕ ಹಿಂದೂಗಳನ್ನು ರಾಜ್ಯದ ಕಾಂಗ್ರೆಸ್ ಸರ್ಕಾರ ಬಂಧಿಸಿದೆ. ಗಲಭೆ ಮಾಡಿದ ತಪ್ಪಿಸ್ಥರನ್ನು ಕೈಬಿಡಲಾಗಿದೆ. 32 ಹಿಂದೂ ಯುವಕರು ಬಂಧನಕ್ಕೊಳಗಾಗಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.ಕಾಂಗ್ರೆಸ್ ಸರ್ಕಾರ ಓಲೈಕೆಯ ರಾಜಕಾರಣ ಮಾಡುತ್ತಿದೆ. ದೇಶ, ಧರ್ಮ, ಸಂಸ್ಕೃತಿಯ ಬಗ್ಗೆ ಮಾತನಾಡಿದರೆ ಕೋಮುವಾದದ ಪಟ್ಟ ಕಟ್ಟಲಾಗುತ್ತಿದೆ. ದೇಶದ ಸ್ವತಂತ್ರಕ್ಕಾಗಿ ಲಕ್ಷಗಟ್ಟಲೇ ದೇಶಭಕ್ತರು ಪ್ರಾಣತ್ಯಾಗ ಮಾಡಿದ್ದಾರೆ. ಆದರೂ ನಮಗೆ ಪೂರ್ಣ ಸ್ವತಂತ್ರ ದೊರೆತಿಲ್ಲ. ಪಾಕಿಸ್ತಾನವನ್ನು ನಮ್ಮ ದೇಶದಲ್ಲಿ ಸೇರಿಸಿಕೊಂಡು ಅಖಂಡ ಭಾರತ ರಚಿಸುತ್ತೇವೆ ಎಂದು ಹೇಳಿದರು.
ಬಾಕ್ಸ್
ತಾಲೂಕಿನ ಜಕನೂರು ಗ್ರಾಮದ ಮಾದಣ್ಣ ಮದಗೊಂಡೇಶ್ವರ ಸಿದ್ದಾಶ್ರಮದ ಬಂಡಾರ ಸಂಸ್ಕೃತಿ, ಜನಪದ ಮತ್ತು ಡೊಳ್ಳಿನ ಕಲಾಮಹೋತ್ಸವದಲ್ಲಿ ವಿಶೇಷ ಆಹ್ವಾನಿತರಾಗಿ ಮಾತನಾಡಿದ ಅವರು, ಈಶ್ವರಪ್ಪ ಅವರಿಗೆ ಅನ್ಯಾಯವಾಗಿದೆ. ಅವರು ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಮಾಡಿದಾಗ ಅವರಿಗೆ ತೊಂದರೆ ನೀಡಲಾಗಿದೆ ಎಂಬ ವಿಷಯ ಎಲ್ಲರಿಗೂ ತಿಳಿದಿದೆ. ರಮೇಶ ಜಾರಕಿಹೊಳಿ ಮತ್ತು ಇನ್ನೂ ಹಲವು ಮುಖಂಡರು ಹೊಂದಾಣಿಕೆ ಮಾಡಿಕೊಂಡಿದ್ದೇವೆ. ಸರಿಯಾದ ಸಮಯಕ್ಕೆ ಕಾಯುತ್ತಿದ್ದೇವೆ. ಸಿದ್ಧರಾಮಯ್ಯ ಅವರನ್ನು ಬಿಟ್ಟರೇ ಈಶ್ವರಪ್ಪ ಅವರೇ ಮುಂದಿನ ಮುಖ್ಯಮಂತ್ರಿಗಳಾಗಲಿದ್ದಾರೆ. ನಾವು ಅವರನ್ನು ಬಿಟ್ಟುಕೊಡುವುದಿಲ್ಲ ಎಂದರು.