ಜಿಲ್ಲಾ ಒಬಿಸಿ ಅಧ್ಯಕ್ಷ ಸ್ಥಾನ ನೀಡಿದ್ದಕ್ಕೆ ಬಿಜೆಪಿಗೆ ಬೀರಪ್ಪ ಧನ್ಯವಾದ

KannadaprabhaNewsNetwork |  
Published : Jul 17, 2026, 01:45 AM IST
14ಎಚ್.ಎಲ್.ಐ2. ಪ್ರಥಮ ಬಾರಿಗೆ ಹೊನ್ನಾಳಿಯ ಕಾರ್ಯಕರ್ತ ಎಸ್.ಎಸ್. ಬೀರಪ್ಪ ಅವರನ್ನು ಜಿಲ್ಲಾ ಓಬಿಸಿ ಮೋರ್ಚಾ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದರ ಹಿನ್ನಲೆಯಲ್ಲಿ ಮಂಗಳವಾರ ಮಾಜಿ ಸಚಿವ ಎಂ.ಪಿ.  ರೇಣುಕಾಚಾರ್ಯ ಅವರ ನಿವಾಸದಲ್ಲಿ ತಾಲೂಕು ಬಿಜೆಪಿ ಮುಖಂಡರು, ಕಾರ್ಯಕರ್ತರು ಅಭಿನಂದಿಸಿ, ಸನ್ಮಾನಿಸಿದರು.                                             | Kannada Prabha

ಸಾರಾಂಶ

ಸಾಮಾನ್ಯವಾಗಿ ಬಿಜೆಪಿಯಲ್ಲಿ ಒಬಿಸಿಯಡಿಯಲ್ಲಿ ಬರುವ ಹಿಂದುಳಿದ ವರ್ಗಗಳ ಬಗ್ಗೆ ಹೆಚ್ಚಿನ ಪ್ರಾಧಾನ್ಯತೆ ಕೊಡುವುದಿಲ್ಲ ಎಂಬ ಆರೋಪವಿದ್ದು, ಇದನ್ನು ಸುಳ್ಳು ಮಾಡುವಂತೆ ಇತ್ತೀಚಿನ ದಿನಗಳಲ್ಲಿ ಬಿಜೆಪಿ ರಾಷ್ಟ್ರ, ರಾಜ್ಯ ಮಟ್ಟದ ವರಿಷ್ಠರು ಹಿಂದುಳಿದ ವರ್ಗಗಳಿಗೆ ಪಕ್ಷದಲ್ಲಿ ಸಾಕಷ್ಟು ಜವಾಬ್ದಾರಿ ಸ್ಥಾನಗಳನ್ನು ನೀಡುವ ಮೂಲಕ ಆ ಆರೋಪವನ್ನು ಸುಳ್ಳಾಗಿಸಿದ್ದಾರೆ ಎಂದು ಬಿಜೆಪಿ ಪಕ್ಷದ ಓಬಿಸಿ ಮೋರ್ಚಾದ ನೂತನ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿರುವ ಹೊನ್ನಾಳಿಯ ಎಸ್.ಎಸ್.ಬೀರಪ್ಪ ಹೇಳಿದರು.

ಕನ್ಕಡಪ್ರಭ ವಾರ್ತೆ ಹೊನ್ನಾ‍ಳಿ

ಸಾಮಾನ್ಯವಾಗಿ ಬಿಜೆಪಿಯಲ್ಲಿ ಒಬಿಸಿಯಡಿಯಲ್ಲಿ ಬರುವ ಹಿಂದುಳಿದ ವರ್ಗಗಳ ಬಗ್ಗೆ ಹೆಚ್ಚಿನ ಪ್ರಾಧಾನ್ಯತೆ ಕೊಡುವುದಿಲ್ಲ ಎಂಬ ಆರೋಪವಿದ್ದು, ಇದನ್ನು ಸುಳ್ಳು ಮಾಡುವಂತೆ ಇತ್ತೀಚಿನ ದಿನಗಳಲ್ಲಿ ಬಿಜೆಪಿ ರಾಷ್ಟ್ರ, ರಾಜ್ಯ ಮಟ್ಟದ ವರಿಷ್ಠರು ಹಿಂದುಳಿದ ವರ್ಗಗಳಿಗೆ ಪಕ್ಷದಲ್ಲಿ ಸಾಕಷ್ಟು ಜವಾಬ್ದಾರಿ ಸ್ಥಾನಗಳನ್ನು ನೀಡುವ ಮೂಲಕ ಆ ಆರೋಪವನ್ನು ಸುಳ್ಳಾಗಿಸಿದ್ದಾರೆ ಎಂದು ಬಿಜೆಪಿ ಪಕ್ಷದ ಓಬಿಸಿ ಮೋರ್ಚಾದ ನೂತನ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿರುವ ಹೊನ್ನಾಳಿಯ ಎಸ್.ಎಸ್.ಬೀರಪ್ಪ ಹೇಳಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರ ಶಿಫಾರಸ್ಸಿನ ಮೇರೆಗೆ ಇದೇ ಪ್ರಥಮ ಬಾರಿಗೆ ಒಬಿಸಿ ಜಿಲ್ಲಾ ಮೋರ್ಚಾದ ಅಧ್ಯಕ್ಷರಾಗಿ ನೇಮಕಗೊಂಡ ಹೊನ್ನಾಳಿಯ ಕಾರ್ಯಕರ್ತ ಎಸ್.ಎಸ್.ಬೀರಪ್ಪ ಮಂಗಳವಾರ ಬಿಜೆಪಿ ತಾಲೂಕು ಮುಖಂಡರು, ಕಾರ್ಯಕರ್ತರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.

ತಾನು ಕಳೆದ 3 ವರ್ಷಗಳ ಹಿಂದೆ ಯಾವುದೇ ಅಧಿಕಾರ ಸ್ಥಾನದ ಅಪೇಕ್ಷೆಇಲ್ಲದೆ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಬಿಜೆಪಿ ಪಕ್ಷಕ್ಕೆ ಸೇರಿ ಅಂದಿನಿಂದ ಪಕ್ಷದ ಸಂಘಟನಗಾಗಿ ಪ್ರಮಾಣಿಕವಾಗಿ,ನಿಷ್ಠೆಯಿಂದ ಕೆಲಸ ಮಾಡುತ್ತಾ ಬರುತ್ತಿದ್ದೇನೆ, ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ,ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಹಾಗೂ ಓಬಿಸಿ ರಾಜ್ಯಾಧ್ಯಕ್ಷ ರಘು ಕೌಟಿಲ್ಯ ಅವರು ಹಿಂದುಳಿದ ವರ್ಗದಿಂದ ಬಂದಿರುವ ತನ್ನನ್ನು ಗುರುತಿಸಿ ಒಬಿಸಿ ಜಿಲ್ಲಾಧ್ಯಕ್ಷ ಸ್ಥಾನ ನೀಡಿದ್ದಾರೆ ಇದಕ್ಕಾಗಿ ಅವರಿಗೆ ಗೌರವಪೂರ್ವಕ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.

ಬಿಜೆಪಿ ರಾಜ್ಯ ಓಬಿಸಿ.ಮೋರ್ಚಾದ ಉಪಾಧ್ಯಕ್ಷ ಕೆ.ಪಿ.ಕುಬೇರಪ್ಪ ಮಾತನಾಡಿ,ಪ್ರಸ್ತುತ ರಾಜ್ಯದ ಗೃಹ ಸಚಿವರಾಗಿರುವ ಪ್ರಿಯಾಂಕ್ ಖರ್ಗೆ ಅವರಿಗೆ ಆರ್‌ಎಸ್‌ಎಸ್ ನೋಂದಣೆ ಮಾಡಿಸಬೇಕು, ಲೆಕ್ಕಪತ್ರಗಳನ್ನು ನೀಡಬೇಕು ಎಂಬ ಓನ್ ಪಾಯಿಂಟ್ ಅಜೆಂಡಾ ಬಿಟ್ಟರೆ ರಾಜ್ಯದ ಬೇರೆ ಸಮಸ್ಯೆಗಳು ಅವರಿಗೆ ಕಾಣಿಸುತ್ತಿಲ್ಲ. ಇವರ ಅಹಿಂದ್ ಸಂಘಟನೆ ನೋಂದಣೆ ಮಾಡಿಸಿದ್ದಾರೆಯೇ, ಇದರ ಲೆಕ್ಕಪತ್ರಗಳನ್ನು ಅವರು ಮೊದಲು ನೀಡಲಿ ಎಂದರು

ಪ್ರಧಾನಿ ನರೇಂದ್ರ ಮೋದಿ, ಅಮಿಷಾ ಅವರು ಪಕ್ಷದಲ್ಲಿ ಒಬಿಸಿಯಡಿಯಲ್ಲಿ ಅನೇಕ ಹಿಂದುಳಿದವರಿಗೆ ವಿವಿಧ ರೀತಿಯ ಸ್ಥಾನಮಾನ ನೀಡಿದ್ದಾರೆ. ಹಿಂದುಳಿದ ಸಮುದಾಯದ ರಘು ಕೌಟಿಲ್ಯ ಅ‍ವರು ಪ್ರಸ್ತುತ ಒಬಿಸಿ ರಾಜ್ಯಾಧ್ಯಕ್ಷರಾಗಿದ್ದು, ವಿಧಾನ ಪರಿಷತ್ ಸದಸ್ಯರಾಗಿದ್ದಾರೆ. ಇದೇ ರೀತಿ ನಾಗರಾಜ್ ಅವರಿಗೆ ರಾಜ್ಯಸಭೆ ಸದಸ್ಯತ್ವವನ್ನು ಬಿಜೆಪಿ ವಷ್ಠರು ನೀಡಿದ್ದಾರೆ ಎಂದರು.

ತಾಲೂಕು ಬಿಜೆಪಿ ಅಧ್ಯಕ್ಷ ಅರಕೆರೆ ನಾಗರಾಜ್, ಮಾಜಿ ಅಧ್ಯಕ್ಷ ಜೆ.ಕೆ.ಸುರೇಶ್, ಎಂ.ಎಸ್.ಫಾಲಾಕ್ಷಪ್ಪ, ತಾ. ರೈತ ಮೋರ್ಚಾ ಅಧ್ಯಕ್ಷ ತರಗನಹಳ್ಳಿ ರಮೇಶ್ ಗೌಡ,ಓಬಿಸಿ.,ಮೋರ್ಚಾತಾ. ಅಧ್ಯಕ್ಷ ರಘು,ಯುವ ಮೋರ್ಚಾದ ಪುನೀತ್,ಜಿ.ಪಂ.ಮಾಜಿ ಸದಸ್ಯ ಎಂ.ಆರ್. ಮಹೇಶ್,ಪ.ಪಂ,ಮಾಜಿ ಅಧ್ಯಕ್ಷ ಕೆ.ವಿ.ಶ್ರೀಧರ ಮುಖಂಡರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹವಾಮಾನ ವೈಪರೀತ್ಯ: ರೈತರು ಪರ್ಯಾಯ ಬೆಳೆಗಳತ್ತ ಯೋಚಿಸಲು ಡೀಸಿ ಸಲಹೆ
ಜಾಜೂರು ಶಾಲೆಯಲ್ಲಿ ಇನ್ನರವ್ಹೀಲ್ ಕ್ಲಬ್‌ನಿಂದ ದಂತ ತಪಾಸಣೆ