ಕನ್ನಡಪ್ರಭ ವಾರ್ತೆ ಚಿಕ್ಕೋಡಿ
ಸಂಸ್ಥೆಯು ₹51.04 ಕೋಟಿ ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.12ರಷ್ಟು ಷೇರು ಲಾಭಾಂಶ ಹಾಗೂ ಸಿಬ್ಬಂದಿಗೆ ಬೋನಸ್ ವಿತರಿಸಲು ನಿರ್ಧರಿಸಿದೆ. 1991ರಲ್ಲಿ ಸ್ಥಾಪನೆಯಾಗಿ, ಬಹುರಾಜ್ಯ ಸಹಕಾರಿ ಕಾಯ್ದೆ-2002ರ ಅಡಿಯಲ್ಲಿ ನೋಂದಾಯಿತಗೊಂಡಿರುವ ಸಂಸ್ಥೆಯು ಪ್ರಸ್ತುತ ಮೂರು ರಾಜ್ಯಗಳಲ್ಲಿ ಒಟ್ಟು 235 ಶಾಖೆಗಳನ್ನು ಹೊಂದಿದೆ. ಕರ್ನಾಟಕದಲ್ಲಿ 180, ಮಹಾರಾಷ್ಟ್ರದಲ್ಲಿ 50 ಹಾಗೂ ಗೋವಾದಲ್ಲಿ 5 ಶಾಖೆಗಳ ಮೂಲಕ ಸುಮಾರು 4.60 ಲಕ್ಷಕ್ಕೂ ಅಧಿಕ ಸದಸ್ಯರಿಗೆ ಸೇವೆ ಸಲ್ಲಿಸುತ್ತಿದೆ.
₹5,754.96 ಕೋಟಿ ಠೇವಣಿ ಸಂಗ್ರಹ: ಕಳೆದ ಸಾಲಿನಲ್ಲಿ ಸಂಸ್ಥೆಯು ₹5,754.96 ಕೋಟಿ ಠೇವಣಿ ಸಂಗ್ರಹಿಸಿದ್ದು, ₹4,121.05 ಕೋಟಿ ಸಾಲ ವಿತರಿಸಿದೆ. ಈ ಅವಧಿಯಲ್ಲಿ ₹51.04 ಕೋಟಿ ನಿವ್ವಳ ಲಾಭ ಗಳಿಸುವ ಮೂಲಕ ಆರ್ಥಿಕ ಪ್ರಗತಿಯ ಹೊಸ ಮೈಲಿಗಲ್ಲು ಸ್ಥಾಪಿಸಿದೆ.4.08 ಲಕ್ಷ ಸದಸ್ಯರಿಗೆ ಶೇ.12ರಷ್ಟು ಲಾಭಾಂಶ: ವಾರ್ಷಿಕ ಸರ್ವಸಾಧಾರಣ ಸಭೆಯ ನಿರ್ಣಯದಂತೆ, 4,08,233 ಸದಸ್ಯರ ಒಟ್ಟು ₹34,92,16,400 ಷೇರು ಬಂಡವಾಳದ ಮೇಲೆ ಶೇ.12ರಷ್ಟು ಲಾಭಾಂಶವನ್ನು ಘೋಷಿಸಲಾಗಿದೆ. ಅದರಂತೆ ಒಟ್ಟು ₹4,19,05,968 ಲಾಭಾಂಶದ ಮೊತ್ತವನ್ನು ಸದಸ್ಯರ ಉಳಿತಾಯ ಖಾತೆಗಳಿಗೆ ಜಮಾ ಮಾಡಲಾಗಿದೆ. ಸದಸ್ಯರು ತಮ್ಮ ಖಾತೆಗಳಿಂದ ಲಾಭಾಂಶದ ಮೊತ್ತವನ್ನು ಪಡೆದುಕೊಳ್ಳಬಹುದು ಎಂದು ಸಂಸ್ಥೆ ತಿಳಿಸಿದೆ.
ಜೊಲ್ಲೆ ದಂಪತಿ ಮಾರ್ಗದರ್ಶನದಲ್ಲಿ ಪ್ರಗತಿ: ಸಂಸ್ಥೆಯ ಸಂಸ್ಥಾಪಕರು, ಚಿಕ್ಕೋಡಿಯ ಮಾಜಿ ಸಂಸದರು ಹಾಗೂ ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಅಣ್ಣಾಸಾಹೇಬ ಶಂಕರ ಜೊಲ್ಲೆ ಅವರ ನೇತೃತ್ವದಲ್ಲಿ ಮತ್ತು ಸಹಸಂಸ್ಥಾಪಕರು, ಮಾಜಿ ಸಚಿವರು ಹಾಗೂ ನಿಪ್ಪಾಣಿ ಶಾಸಕಿ ಸೌ. ಶಶಿಕಲಾ ಅಣ್ಣಾಸಾಹೇಬ ಜೊಲ್ಲೆ ಅವರ ಮಾರ್ಗದರ್ಶನದಲ್ಲಿ ಸಂಸ್ಥೆಯು ಯಶಸ್ಸಿನ ಪಥದಲ್ಲಿ ಮುನ್ನಡೆಯುತ್ತಿದೆ.
ಇದೇ ಸಂದರ್ಭದಲ್ಲಿ ಸಂಸ್ಥೆಯಿಂದ ಸಮಸ್ತ ಸದಸ್ಯರು, ಹಿತೈಷಿಗಳು ಹಾಗೂ ಮಾಧ್ಯಮ ಮಿತ್ರರಿಗೆ ದಸರಾ ಮತ್ತು ದೀಪಾವಳಿ ಹಬ್ಬದ ಶುಭಾಶಯಗಳನ್ನು ಕೋರಲಾಯಿತು.