ಪಂಢರಪುರದಲ್ಲಿ ಬೀರೇಶ್ವರ ಕ್ರೆಡಿಟ್ ಸೊಸೈಟಿ 235ನೇ ಶಾಖೆ ಶುಭಾರಂಭ

KannadaprabhaNewsNetwork |  
Published : Oct 12, 2026, 03:00 AM IST
11ದಸಬಸದಜ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಚಿಕ್ಕೋಡಿವಿಠ್ಠಲನ ಪುಣ್ಯಭೂಮಿ ಪಂಢರಪುರದಲ್ಲಿ ಗ್ರಾಹಕರ ಆರ್ಥಿಕ ಪ್ರಗತಿಗೆ ಮತ್ತಷ್ಟು ಉತ್ತೇಜನ ನೀಡುವ ಉದ್ದೇಶದಿಂದ ಜೊಲ್ಲೆ ಗ್ರೂಪ್‌ನ ಅಂಗಸಂಸ್ಥೆ ಬೀರೇಶ್ವರ ಕೋ-ಆಪ್ ಕ್ರೆಡಿಟ್ ಸೊಸೈಟಿ ಲಿ., ಯಕ್ಸಂಬಾ (ಮಲ್ಟಿ-ಸ್ಟೇಟ್) ಸಂಸ್ಥೆಯ 235ನೇ ನೂತನ ಶಾಖೆಯನ್ನು ಉದ್ಘಾಟಿಸಲಾಯಿತು.

ಕನ್ನಡಪ್ರಭ ವಾರ್ತೆ ಚಿಕ್ಕೋಡಿ

ವಿಠ್ಠಲನ ಪುಣ್ಯಭೂಮಿ ಪಂಢರಪುರದಲ್ಲಿ ಗ್ರಾಹಕರ ಆರ್ಥಿಕ ಪ್ರಗತಿಗೆ ಮತ್ತಷ್ಟು ಉತ್ತೇಜನ ನೀಡುವ ಉದ್ದೇಶದಿಂದ ಜೊಲ್ಲೆ ಗ್ರೂಪ್‌ನ ಅಂಗಸಂಸ್ಥೆ ಬೀರೇಶ್ವರ ಕೋ-ಆಪ್ ಕ್ರೆಡಿಟ್ ಸೊಸೈಟಿ ಲಿ., ಯಕ್ಸಂಬಾ (ಮಲ್ಟಿ-ಸ್ಟೇಟ್) ಸಂಸ್ಥೆಯ 235ನೇ ನೂತನ ಶಾಖೆಯನ್ನು ಉದ್ಘಾಟಿಸಲಾಯಿತು.ವಿಠ್ಠಲ-ರುಕ್ಮಿಣಿ ಮಂದಿರ ಸಮಿತಿಯ ಅಧ್ಯಕ್ಷರಾದ ಸದ್ಗುರು ಗಹಿನಿನಾಥ ಅವಸೇಕರ್ ಮಹಾರಾಜರ ಅಮೃತಹಸ್ತದಿಂದ, ಜೊಲ್ಲೆ ಗ್ರೂಪ್‌ನ ಸಂಸ್ಥಾಪಕ ಅಣ್ಣಾಸಾಹೇಬ ಜೊಲ್ಲೆ ಹಾಗೂ ಮಾಜಿ ಸಚಿವರು, ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಅವರ ಉಪಸ್ಥಿತಿಯಲ್ಲಿ ನೂತನ ಶಾಖೆ ಉದ್ಘಾಟನೆ ನೆರವೇರಿತು.ಸದ್ಗುರು ಗಹಿನಿನಾಥ ಅವಸೇಕರ್ ಮಹಾರಾಜರು ದೀಪ ಪ್ರಜ್ವಲಿಸುವ ಮೂಲಕ ಪೂಜಾ ವಿಧಿವಿಧಾನಗಳೊಂದಿಗೆ ಶಾಖೆಯ ಕಾರ್ಯಾರಂಭಕ್ಕೆ ಚಾಲನೆ ನೀಡಿದರು.ಗುರುವರ್ಯ ಸಂಜಯ ಮಹಾರಾಜ ದೇಹುಕರ, ಪಂಢರಪುರ ಪುರಸಭೆಯ ಅಧ್ಯಕ್ಷೆ ಪ್ರಣಿತಾ ಬಿ.ಭಾಲ್ಕೆ, ಉಪಾಧ್ಯಕ್ಷ ಮಹಾದೇವ ಧೋತ್ರೆ, ಭೈರವನಾಥ ಸಕ್ಕರೆ ಸಮೂಹದ ಅಧ್ಯಕ್ಷ ಅನಿಲ ದಾದಾ ಸಾವಂತ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.

ಉಮೇಶ ಪರಿಚಾರಕ, ರಾಜಕುಮಾರ ಪಾಟೀಲ, ನಿಖಿಲ ಕೂಡಲೆ, ಉಮೇಶ ವಿರಾಡೆ ಸೇರಿದಂತೆ ಸಂಸ್ಥೆಯ ಮುಖ್ಯ ಕಚೇರಿಯ ನಿರ್ದೇಶಕರು, ಪದಾಧಿಕಾರಿಗಳು ಹಾಗೂ ಸ್ಥಳೀಯ ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶುಭ ಹಾರೈಸಿದರು.ಗ್ರಾಹಕರಿಗೆ ವಿಶ್ವಾಸಾರ್ಹ ಹಣಕಾಸು ಸೇವೆಗಳನ್ನು ಒದಗಿಸುವುದರೊಂದಿಗೆ ಅವರ ಆರ್ಥಿಕ ಸಬಲೀಕರಣ ಮತ್ತು ಉಜ್ವಲ ಭವಿಷ್ಯ ನಿರ್ಮಾಣದ ಆಶಯ ಹೊಂದಿರುವ ಬೀರೇಶ್ವರ ಸಂಸ್ಥೆಯು ಇದೀಗ ವಿಠ್ಠಲನ ಪುಣ್ಯಕ್ಷೇತ್ರ ಪಂಢರಪುರದಲ್ಲಿಯೂ ತನ್ನ ಸೇವಾ ಜಾಲ ವಿಸ್ತರಿಸಿದೆ. ಸಂಸ್ಥೆಯ 235ನೇ ಶಾಖೆಯ ಆರಂಭದಿಂದ ಸ್ಥಳೀಯ ಗ್ರಾಹಕರಿಗೆ ಅನುಕೂಲವಾಗಲಿದ್ದು, ಈ ಬೆಳವಣಿಗೆಗೆ ಸಾರ್ವಜನಿಕರಿಂದ ಸಂತಸ ವ್ಯಕ್ತವಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಲ್ಲೆಂದರಲ್ಲಿ ಧೂಮಪಾನ, ನಿಯಂತ್ರಣವೇ ಸವಾಲು!
ಸಮಾಜದ ಒಳಿತಿಗಾಗಿ ಸಮರ್ಪಿಸಿಕೊಳ್ಳುವುದೇ ಶಕ್ತಿ ಆರಾಧನೆ: ರಂಭಾಪುರಿ ಜಗದ್ಗುರು