ಕನ್ನಡಪ್ರಭ ವಾರ್ತೆ ವಿಜಯಪುರ
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಕೂಡಲೇ ದಿನಗೂಲಿ ನೌಕರರ ಬೇಡಿಕೆಯನ್ನು ಈಡೇರಿಸಬೇಕು. ಈ ವಿಷಯದಲ್ಲಿ ವಿಳಂಬ ನೀತಿ ಅನುಸರಿಸಿ ದಿನಗೂಲಿ ನೌಕರರು ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸುವ ಅನಿವಾರ್ಯತೆ ಸೃಷ್ಟಿಯಾಗುವಂತಾಗಬಾರದು. ದಿನಗೂಲಿ ನೌಕರರು ಅನೇಕ ಸಂಕಟಗಳ ಸರಮಾಲೆ ಎದುರಿಸುತ್ತಿದ್ದಾರೆ. ಮಾನವೀಯತೆ ದೃಷ್ಟಿಯಿಂದ ಪಡೆಯಬೇಕಾದ ಸೌಲಭ್ಯಗಳನ್ನು ದಿನಗೂಲಿ ನೌಕರರು, ಕಾನೂನು ಹೋರಾಟದ ಮೂಲಕ ಪಡೆದುಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿರುವುದು ದುರಂತ ಎಂದರು.ವಿಜಯಪುರದಲ್ಲಿ ಕರ್ನಾಟಕ ರಾಜ್ಯ ಎಲ್ಲ ದಿನಗೂಲಿ ಕ್ಷೇಮಾಭಿವೃದ್ಧಿ ವಿಧೇಯಕ-2022 ಅನ್ನು ಸರ್ಕಾರ ರೂಪಿಸಿದೆ. ಆದರೆ ಡಿ.ಎ,ಎಚ್.ಆರ್.ಎ. ಸೇರಿದಂತೆ ಅನೇಕ ಸೌಲಭ್ಯಗಳನ್ನು ಕಡಿತಗೊಳಿಸಿತು. ಈ ಹಿನ್ನೆಲೆಯಲ್ಲಿ ನೌಕರರು ಸುದೀರ್ಘವಾದ ಕಾನೂನಾತ್ಮಕ ಹೋರಾಟ ನಡೆಸಬೇಕಾಯಿತು. ಈ ಕಾನೂನಾ ತ್ಮಕ ಹೋರಾಟದ ಗೆಲುವಿನ ಭಾಗವಾಗಿ ಹೈಕೋರ್ಟ್ 2026 ಫೆ.2 ರಂದು ತೀರ್ಪು ನೀಡಿ 1996 ಕ್ಕಿಂತ ಮುಂಚಿತವಾಗಿ ನೇಮಕಗೊಂಡ ದಿನಗೂಲಿ ನೌಕರರಿಗೆ ಪೂರ್ಣ ಪ್ರಮಾಣದ ಡಿ.ಎ, ಎಚ್.ಆರ್.ಎ. ಎಕ್ಸಗ್ರೇಷಿಯಾ ಮೊದಲಾದ ಸೌಲಭ್ಯಗಳನ್ನು ಒದಗಿಸಲು ಹೈಕೋರ್ಟ್ ಆದೇಶ ಹೊರಡಿಸಿದೆ. ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸುವ ಪ್ರಯತ್ನದಲ್ಲಿದ್ದ ವೇಳೆ ನಾನು ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ದಾಖಲಿಸಿದೆ. ಪರಿಣಾಮವಾಗಿ ಕಲಬುರ್ಗಿ ಹೈಕೋರ್ಟ್ ಪೀಠದಲ್ಲಿಯೇ ಹೋರಾಟ ಮಾಡುವುದಾಗಿ ಹೇಳಿ ಸುಪ್ರೀಂ ಕೋರ್ಟ್ ನಿಂದ ರಿವೋಕ್ಡ್ ಮಾಡಿಕೊಂಡಿದೆ ಎಂದು ವಿವರಿಸಿದರು. ಕಾಯ್ದೆ ಅನುಷ್ಠಾನಕ್ಕೆ ತರದಿದ್ದರೆ ಅದನ್ನು ರೂಪಿಸಿದರೆ ಏನರ್ಥ?, ಇದು 22 ಸಾವಿರ ಜನರ ಜೀವನದ ಪ್ರಶ್ನೆ ಎಂದರು.ಒಕ್ಕೂಟದ ರಾಜ್ಯಾಧ್ಯಕ್ಷ ಚಂದ್ರಶೇಖರ ಬುರಾಣಪೂರ ಮಾತನಾಡಿ, ದೀರ್ಘಕಾಲದಿಂದ ಸೇವೆ ಸಲ್ಲಿಸುತ್ತಿರುವ ದಿನಗೂಲಿ ನೌಕರರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವುದು, ಅರ್ಹ ನಿಯಮಾನುಸಾರ ಸೇವಾ ಭದ್ರತೆ ಹಾಗೂ ವೇತನ ಶ್ರೇಣಿ ಒದಗಿಸುವುದು, ಸೇವಾ ಅವಧಿಯನ್ನು ಪರಿಗಣಿಸಿ ವೇತನ ನಿಗದಿ, ಅರ್ಹತೆಯುಳ್ಳ ನೌಕರರಿಗೆ ಕ್ರಮಬದ್ಧವಾಗಿ ಸೇವಾ ಸಕ್ರಮೀಕರಣ ಮಾಡುವುದು, ನಿವೃತ್ತಿ ಹಾಗೂ ಇತರೆ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಒದಗಿಸುವುದು ಹಾಗೂ ದಿನಗೂಲಿ ನೌಕರರ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂಬ ಬೇಡಿಕೆಯನ್ನು ಒಕ್ಕೂಟದ ಪದಾಧಿಕಾರಿಗಳು ಒತ್ತಾಯಿಸಿದರು. ಸರ್ಕಾರಿ ನೌಕರರಿಗೆ ಕೊಡುವ ಸೌಲಭ್ಯ ಕೊಡಬೇಕು ಎಂದು ನ್ಯಾಯಾಲಯ ಆದೇಶ ಮಾಡಿದ್ದರೂ ಸರ್ಕಾರ ಕೊಡಲಿಲ್ಲ. ಬಳಿಕ ಮತ್ತೆ ಹೈಕೋರ್ದ್‌ನಲ್ಲಿ 2026ರಲ್ಲಿ ಹೈಕೋರ್ಟ್‌ನಿಂದ ಆದೇಶವಾಗಿದೆ. ಆದರೂ ಸೌಲಭ್ಯಗಳನ್ನು ಕೊಡುತ್ತಿಲ್ಲ. ಸರ್ಕಾರ ಆದಷ್ಟು ಬೇಗ ಎಲ್ಲ ಸೌಲಭ್ಯಗಳನ್ನು ನೀಡುವಂತೆ ಎಂದು ವಿನಂತಿಸಿದರು.
ಸಿಐಟಿಯು ಜಿಲ್ಲಾ ಸಂಚಾಲಕ ಲಕ್ಷ್ಮಣ ಹಂದ್ರಾಳ ಮಾತನಾಡಿ, 2013ರಿಂದ ಕೊಡಬೇಕಿರುವ ಶೇ.100 ಬದಲಾಗಿ ಶೇ.75 ರಷ್ಟು ಮಾತ್ರ ಸೌಲಭ್ಯಗಳನ್ನು ಕೊಟ್ಟಿದ್ದಾರೆ. ಸರ್ಕಾರ ತಕ್ಷಣ ಸೌಲಭ್ಯಗಳನ್ನು ಕೊಡದಿದ್ದರೆ. 2026 ಫೆಬ್ರುವರಿಯಲ್ಲಿ ನೀಡಿದ ಹೈಕೋರ್ಟ್ ಆದೇಶದಂತೆ ಸೌಲಭ್ಯ ಕೊಡಬೇಕು, ಇಲ್ಲವಾದಲ್ಲಿ ನ್ಯಾಯಾಲಯ ನಿಂದನೆ ಕೇಸನ್ನು ಹಾಕಬೇಕಾಗುತ್ತದೆ ಎಂದು ಎಚ್ಚರಿಸಿದರು.ಸುದ್ದಿಗೋಷ್ಠಿಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶ ಕೊಂಡಗೂಳಿ, ಎಂ.ಕೆ.ಕುಲಕರ್ಣಿ, ಕೆ.ಎಂ.ಹೊನ್ನಕುದುರಿ ಉಪಸ್ಥಿತರಿದ್ದರು.