ಮಕ್ಕಳ ಕಳ್ಳಿಯೆಂದು ಶಂಕಿಸಿ ಭಿಕ್ಷುಕಿಗೆ ಥಳಿತ

KannadaprabhaNewsNetwork |  
Published : Mar 01, 2026, 03:30 AM IST
ಕಕಕಕ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬೆಳಗಾವಿ ಬೆಳಗಾವಿ ನಗರದಲ್ಲಿ ಮಕ್ಕಳ ಕಳ್ಳರಿದ್ದಾರೆ ಎಂಬ ವದಂತಿ ಹಬ್ಬಿದ್ದರಿಂದ ಕೆಲಕಾಲ ಆತಂಕದ ವಾತಾವರಣ ನ್ಯೂ ಗಾಂಧಿ ನಗರ ಪ್ರದೇಶದಲ್ಲಿ ನಿರ್ಮಾಣವಾಗಿತ್ತು. ಶನಿವಾರ ಭಿಕ್ಷೆ ಬೇಡಲು ಬಂದ ಮಹಿಳೆಯೊಬ್ಬಳನ್ನು ಮಕ್ಕಳ ಕಳ್ಳಿಯೆಂದು ಅನುಮಾನಿಸಿ ಕೆಲವರು ಧರ್ಮದೇಟು ನೀಡಿದ ಘಟನೆಯೂ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಬೆಳಗಾವಿ ನಗರದಲ್ಲಿ ಮಕ್ಕಳ ಕಳ್ಳರಿದ್ದಾರೆ ಎಂಬ ವದಂತಿ ಹಬ್ಬಿದ್ದರಿಂದ ಕೆಲಕಾಲ ಆತಂಕದ ವಾತಾವರಣ ನ್ಯೂ ಗಾಂಧಿ ನಗರ ಪ್ರದೇಶದಲ್ಲಿ ನಿರ್ಮಾಣವಾಗಿತ್ತು. ಶನಿವಾರ ಭಿಕ್ಷೆ ಬೇಡಲು ಬಂದ ಮಹಿಳೆಯೊಬ್ಬಳನ್ನು ಮಕ್ಕಳ ಕಳ್ಳಿಯೆಂದು ಅನುಮಾನಿಸಿ ಕೆಲವರು ಧರ್ಮದೇಟು ನೀಡಿದ ಘಟನೆಯೂ ನಡೆದಿದೆ.

ರಂಜಾನ್ ಹಬ್ಬದ ಪ್ರಯುಕ್ತ ಪ್ರತಿವರ್ಷದಂತೆ ಭಿಕ್ಷೆ ಬೇಡಲು ಬಂದಿದ್ದ ಮಹಿಳೆಯನ್ನು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಆಡಿಯೋ ಸಂದೇಶಗಳನ್ನು ನಂಬಿ ಮಕ್ಕಳ ಕಳ್ಳಿಯೆಂದು ಭಾವಿಸಿ ಗೊಂದಲ ಸೃಷ್ಟಿಸಿದರು. ಸ್ಥಳದಲ್ಲಿ ಮಹಿಳೆಯರ ನಡುವೆ ವಾಗ್ವಾದ ಮತ್ತು ರಂಪಾಟ ಕೂಡ ನಡೆದಿದೆ.

ಸುದ್ದಿ ತಿಳಿದು ತಕ್ಷಣವೇ ಮಾಳಮಾರುತಿ ಪೊಲೀಸರು ಸ್ಥಳಕ್ಕೆ ಆಗಮಿಸಿದರು. ಈ ವೇಳೆ ಪೊಲೀಸರು ಮತ್ತು ಸಾರ್ವಜನಿಕರ ನಡುವೆ ಜಟಾಪಟಿ ಸಂಭವಿಸಿತು. ಭಿಕ್ಷುಕಿಯನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದರು. ಅಲ್ಲದೆ ಸ್ಥಳದಲ್ಲಿ ಜಮಾಯಿಸಿದ್ದ ಜನರನ್ನು ಚದುರಿಸಿದರು. ಶುಕ್ರವಾರ ಟಿಳಕವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲೂ ಇದೇ ರೀತಿ ಮೂವರನ್ನು ಮಕ್ಕಳ ಕಳ್ಳರೆಂದು ಶಂಕಿಸಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದ ಘಟನೆ ನಡೆದಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಅನಾಮಧೇಯ ಆಡಿಯೋ ಸಂದೇಶದಿಂದ ಈ ರೀತಿಯ ಅವಾಂತರಗಳು ಸಂಭವಿಸುತ್ತಿವೆ.

ಮಕ್ಕಳ ಕಳ್ಳರ ವದಂತಿಗಳನ್ನು ನಂಬಬಾರದು ಎಂದು ಬೆಳಗಾವಿ ಪೊಲೀಸ್ ಕಮೀಷನರ್ ಭೂಷಣ್ ಬೊರಸೆ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ವಿಡಿಯೋ ಹೇಳಿಕೆ ಬಿಡುಗಡೆ ಮಾಡಿ, ಯಾವುದೇ ಅನುಮಾನಾಸ್ಪದ ಘಟನೆ ಕಂಡುಬಂದಲ್ಲಿ ಸ್ವಯಂ ಕ್ರಮ ಕೈಗೊಳ್ಳದೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವಂತೆ ಅವರು ಸೂಚನೆ ನೀಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಂಚನೆಗೆ ಬ್ಯಾಂಕ್ ಖಾತೆ ಬಳಕೆ: ಅಂತಾರಾಜ್ಯ ಸೈಬರ್ ಕ್ರೈಂ ಜಾಲ ಬಯಲು
ವಿಕಲಚೇತನರಿಗೆ ತ್ವರಿತಗತಿಯಲ್ಲಿ ಸೌಲಭ್ಯ ಮಂಜೂರು: ಟಿ.ಎಂ. ಶಾಹೀದ್