ಬ್ಯಾಡಗಿ: ಅವರಿವರೆನ್ನದೇ ಮುಖ್ಯರಸ್ತೆಯಲ್ಲಿನ ಎಲ್ಲಾ ಕಟ್ಟಡಗಳನ್ನು ತೆರವುಗೊಳಿಸಿದ ಬಳಿಕವೇ ಮುಖ್ಯರಸ್ತೆ ಅಗಲೀಕರಣ ಕಾಮಗಾರಿ ಆರಂಭಿಸುವಂತೆ ಆಗ್ರಹಿಸಿ ಮುಖ್ಯರಸ್ತೆ ಅಗಲೀಕರಣ ಹೋರಾಟ ಸಮಿತಿ, ರಾಜ್ಯ ರೈತ ಸಂಘ, ಕರವೇ, ಜಯಕರ್ನಾಟಕ, ಡಿ.ಎಸ್.ಎಸ್. ಹಾಗೂ ಅಂಗವಿಕಲರ ಸಂಘಟನೆ ಸೇರಿದಂತೆ ಸಾರ್ವಜನಿಕರು ಆಗ್ರಹಿಸಿದ ಘಟನೆ ನೆಡಯಿತು.
ನ್ಯಾಯಾಲಯಕ್ಕೆ ಹಣ ಸಲ್ಲಿಸಿ: ಪರಿಹಾರ ಹಣ ಬೇಡ ಎಂದವರ ಮೊತ್ತವನ್ನು ಕೂಡಲೇ ನ್ಯಾಯಾಲಯಕ್ಕೆ ಸಲ್ಲಿಸಿ ಅಗಲೀಕರಣದಲ್ಲಿ ಏಕರೂಪತೆ ತೋರಿಸಬೇಕು, ಇಲ್ಲದಿದ್ದಲ್ಲಿ ಜಿಲ್ಲಾಡಳಿತದ ಮೇಲೆ ಸಂಶಯ ವ್ಯಕ್ತವಾಗುತ್ತಿದ್ದು ಇನ್ನಿಲ್ಲದ ಕಾರಣಗಳನ್ನು ಹೇಳುತ್ತಾ ಅಗಲೀಕರಣಕ್ಕೆ ವಿಳಂಬವಾಗುವ ಸಾಧ್ಯತೆಗಳಿವೆ ಎಂದರು.
ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಸೇರಿದಂತೆ, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ವಿಜಯಕುಮಾರ ಮಾಳಗಿ, ಶಿವಯೋಗಿ ಶಿರೂರ, ಸುರೇಶ ಛಲವಾದಿ, ವಿನಾಯಕ ಕಂಬಳಿ, ಮಹೇಶ ಉಜನಿ, ಈರಣ್ಣ ಬಣಕಾರ, ಬಸವರಾಜ ಸಂಕಣ್ಣನವರ, ಶಿವು ಕಲ್ಲಾಪೂರ, ಹರೀಶಕುಮಾರ ರಿತ್ತಿ, ನ್ಯಾಯವಾದಿ ಮುಳಗುಂದ ಹಾಗೂ ಇನ್ನಿತರರಿದ್ದರು.