೨೦ ಸಾವಿರ ಹಕ್ಕುಪತ್ರ ನೀಡುವ ಸಂಕಲ್ಪ: ಶಾಸಕ ಪಠಾಣ

KannadaprabhaNewsNetwork |  
Published : May 11, 2026, 02:30 AM IST
ಶಿಗ್ಗಾಂವಿ ತಾಲೂಕಿನ ಸುರಪಗಟ್ಟಿ ಕಂದಾಯ ಗ್ರಾಮ ಉಪ ಗ್ರಾಮದಲ್ಲಿನ ನಿವಾಸಿಗಳಿಗೆ ಶಾಸಕ ಯಾಸೀರ ಅಹ್ಮದಖಾನ ಪಠಾಣ ಹಕ್ಕುಪತ್ರ ವಿತರಣೆ ಮಾಡಿದರು. | Kannada Prabha

ಸಾರಾಂಶ

ಶಿಗ್ಗಾಂವಿ ತಾಲೂಕಿನಲ್ಲಿ ಸುಮಾರು ೨೦ ಸಾವಿರ ಕುಟುಂಬದ ಸದಸ್ಯರಿಗೆ ಹಕ್ಕುಪತ್ರ ಕೊಡುವ ಸಂಕಲ್ಪವಿದೆ. ಇಲ್ಲಿಯವರೆಗೂ ೮೫೦೦ ಹಕ್ಕುಪತ್ರ ನೀಡಿದ್ದೇನೆ ಎಂದು ಶಾಸಕ ಯಾಸೀರ ಅಹ್ಮದಖಾನ ಪಠಾಣ ಹೇಳಿದರು.

ಶಿಗ್ಗಾಂವಿ: ತಾಲೂಕಿನಲ್ಲಿ ಸುಮಾರು ೨೦ ಸಾವಿರ ಕುಟುಂಬದ ಸದಸ್ಯರಿಗೆ ಹಕ್ಕುಪತ್ರ ಕೊಡುವ ಸಂಕಲ್ಪವಿದೆ. ಇಲ್ಲಿಯವರೆಗೂ ೮೫೦೦ ಹಕ್ಕುಪತ್ರ ನೀಡಿದ್ದೇನೆ ಎಂದು ಶಾಸಕ ಯಾಸೀರ ಅಹ್ಮದಖಾನ ಪಠಾಣ ಹೇಳಿದರು. ತಾಲೂಕಿನ ಸುರಪಗಟ್ಟಿ ಕಂದಾಯ ಗ್ರಾಮ ಉಪ ಗ್ರಾಮದಲ್ಲಿನ ನಿವಾಸಿಗಳಿಗೆ ೧೧೧ ಹಕ್ಕು ಪತ್ರ ವಿತರಣೆ ಮಾಡಿ ಮಾತನಾಡಿದ ಅವರು, ಗ್ರಾಮಗಳಲ್ಲಿ ಹಕ್ಕುಪತ್ರ ನೀಡುವ ವಿಷಯವಾಗಿ ಹಣ ವಸೂಲಿ ಮಾಡುವ ಅಧಿಕಾರಿ ಹಾಗೂ ಸಿಬ್ಬಂದಿಗಳು ಬಗ್ಗೆ ನನ್ನ ಗಮನಕ್ಕೆ ಬಂದರೆ ನಾನು ನಿದಾಕ್ಷೀಣ್ಯವಾಗಿ ಕ್ರಮ ಕೈಗೊಳ್ಳುತ್ತೇನೆ. ಮುಖ್ಯಮಂತ್ರಿ ವಿಶೇಷ ಅನುದಾನ ಅಡಿಯಲ್ಲಿ ೧೪೦೦ ಕೋಟಿ ಅನುದಾನ ಕ್ಷೇತ್ರಕ್ಕೆ ತಂದಿದ್ದೇನೆ. ಕುಡಿಯುವ ನೀರಿನ ಯೋಜನೆಗಾಗಿ ಒಟ್ಟು ೩೫೦ ಕೋಟಿ ಹಣ ಮಂಜೂರಾಗಿದ್ದು, ಅದರಲ್ಲಿ ಸತತವಾಗಿ ೨೪ ಗಂಟೆ ಶಾಶ್ವತವಾಗಿ ಕುಡಿಯುವ ನೀರಿನ ವ್ಯವಸ್ಥೆಗಾಗಿ ೧೦೯ ಕೋಟಿ ಹಣ ಮೀಸಲಿಡಲಾಗಿದೆ. ೬ ಸಾವಿರ ಕಡು ಬಡವರಿಗೆ ವಸತಿ ವ್ಯವಸ್ಥೆ ಕಲ್ಪಿಸಿಕೊಡಲು ಯೋಜನೆ ರೂಪಿಸಿದ್ದೇನೆ ಎಂದರು. ಈ ಸಂದರ್ಭದಲ್ಲಿ ಗುಡ್ಡಪ್ಪ ಜಲದಿ, ಚಂದ್ರು ಮಾಯಣ್ಣವರ, ಅಣ್ಣಪ್ಪ ಲಮಾಣಿ, ಮಲ್ಲಿಕಾರ್ಜುನಗೌಡ ಪಾಟೀಲ, ಮಲ್ಲಮ್ಮ ಸೋಮನಕಟ್ಟಿ, ಬಾಬರ ಬಾವೋಜಿ ಸೇರಿದಂತೆ ಫಲಾನುಭಾವಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾರ್ಮಿಕರ ಕಲ್ಯಾಣಕ್ಕೆ ಕಾರ್ಮಿಕ ಸ್ನೇಹಿ ಯೋಜನೆಗಳು ಅಗತ್ಯ: ಸತೀಶ್
ಸಮಾಜವನ್ನು ಸನ್ಮಾರ್ಗದೆಡೆಗೆ ಸಾಗಿಸಿದ ಮಲ್ಲಮ್ಮ