- ಕಲ್ಯಾಣ ಕರ್ನಾಟಕ ಉತ್ಸವ ಅಂಗವಾಗಿ ಸ್ವಚ್ಛತಾ ಸೇವಾ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಯಾದಗಿರಿ
ನಗರದ ತಾಲೂಕು ಪಂಚಾಯ್ತಿ ಕಾರ್ಯಾಲಯದಲ್ಲಿ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣವನ್ನು ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಮಹಾದೇವ ಬಬಾಲಗಿ ನೇರವೆರಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು, 1947, ಆ.15 ರಂದು ಭಾರತ ಸ್ವಾತಂತ್ರ್ಯವಾಗಿದ್ದು, ಕಲ್ಯಾಣ ಕರ್ನಾಟಕದಲ್ಲಿ ಹೈದ್ರಾಬಾದ್ ನಿಜಾಮರು ತಮ್ಮ ಆಳ್ವಿಕೆಯನ್ನು ಮುಂದುವರೆಸಿದರು. ಸರ್ದಾರ್ ವಲ್ಲಭಬಾಯ್ ಪಟೇಲ ಭಾರತ ಸರ್ಕಾರದ ಗೃಹ ಮಂತ್ರಿಗಳು ನಿಜಾಮರ ವಿರುದ್ಧ ಹೋರಾಟ ಮಾಡಿ ನಿಜಾಮರಿಂದ ಹೈದ್ರಾಬಾದ್ ಕರ್ನಾಟಕ ಪಡೆದುಕೊಂಡು ಅಖಂಡ ಭಾರತದಲ್ಲಿ ಸೆರ್ಪಡೆ ಮಾಡಿಕೊಂಡರು ಎಂದರು.
ನಾಯಕರ ಹೋರಾಟದ ಶ್ರಮದಿಂದ ಸೆ.17 ರಂದು ಸ್ವಾತಂತ್ರ್ಯಗೊಂಡ ನಂತರ ಹೈದ್ರಾಬಾದ್ ಕರ್ನಾಟಕ ಎಂದು ಕರೆಯಲಾಗುತ್ತಿತ್ತು. ಈಗ ಕಲ್ಯಾಣ ಕರ್ನಾಟಕ ಎಂದು ಕರೆಯಲಾಗುತ್ತದೆ. ಹಿರಿಯರ ಹೋರಾಟದಿಂದಾಗಿ ನಾವು ಧ್ವಜಾರೋಹಣ ಮಾಡಿ ನೆನಪಿಸಿಕೊಳ್ಳುತ್ತೇವೆಂದು ಹೇಳಿದರು.ಧ್ವಜಾರೋಹಣ ಕಾರ್ಯಕ್ರಮ ನಿಮಿತ್ಯ ಸರ್ಕಾರಿ ಆದೇಶದ ಮೇರೆಗೆ ಸ್ವಚ್ಛತಾ ಸೇವೆ ಕಾರ್ಯಕ್ರಮ ನಡೆಯಿತು. ತಾಲೂಕು ಪಂಚಾಯ್ತಿ ಅಧಿಕಾರಿ ಮತ್ತು ಸಿಬ್ಬಂದಿಯವರು ರಸ್ತೆ ಮತ್ತು ಕಾರ್ಯಾಲಯದ ಸುತ್ತಮುತ್ತ ಪೊರಕೆ ಹಿಡಿದು ಸ್ವಚ್ಛಗೊಳಿಸಿದರು.
ಸಹಾಯಕ ನಿರ್ದೇಶಕ ಮಲ್ಲಣ್ಣ ಸಂಕನೂರ, ಯೋಜನಾ ನಿರ್ದೇಶಕರಾದ ಶಶಿಧರ ಹಿರೇಮಠ, ವ್ಯವಸ್ಥಾಪಕರಾದ ಶಿವರಾಯ ಗುಂಡಗುರ್ತಿ, ನರೇಗಾ ವಿಷಯ ನಿರ್ವಾಹಕರಾದ ಅನಸರ್ ಪಟೇಲ ಸೇರಿದಂತೆ ತಾಲೂಕು ಪಂಚಾಯ್ತಿ ಸಿಬ್ಬಂದಿ ಮತ್ತು ಬಿಸಿಯೂಟ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.-----
18ವೈಡಿಆರ್2: ಯಾದಗಿರಿ ನಗರದ ತಾಲೂಕು ಪಂಚಾಯ್ತಿ ಕಾರ್ಯಾಲಯದಲ್ಲಿ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ಹಾಗೂ ಸ್ವಚ್ಛತಾ ಸೇವಾ ಕಾರ್ಯಕ್ರಮ ಜರುಗಿತು.