ಕಲೆಯಲ್ಲಿ ತೊಡಗಿಸಿಕೊಂಡರೆ ಅಹಂಕಾರ ಕಡಿಮೆ: ಆರ್.ಡಿ. ಹೆಗಡೆ ಆಲ್ಮನೆ

KannadaprabhaNewsNetwork |  
Published : Oct 14, 2025, 01:02 AM IST
ಪೊಟೋ12ಎಸ್.ಆರ್.ಎಸ್‌5 (ಸಾಹಿತ್ಯ ಸಿಂಚನ ಬಳಗ ಕೊಡಮಾಡುವ ಸಾಹಿತ್ಯ ಸಿಂಚನ ಶ್ರೀ ಪ್ರಶಸ್ತಿಯನ್ನು ಹಿರಿಯ ಸಾಹಿತಿ ಹಾಗೂ ಆಯುರ್ವೇದ ವೈದ್ಯ ಮಂಜುನಾಥ ಹೂಡ್ಲಮನೆ ಅವರಿಗೆ ನೀಡಿ ಗೌರವಿಸಲಾಯಿತು.) | Kannada Prabha

ಸಾರಾಂಶ

ವಿಭಿನ್ನ ಹಾಗೂ ವಿಶಿಷ್ಟಪೂರ್ಣ ದಾಖಲೆಯಾಗುವ ಕಾರ್ಯಕ್ರಮಗಳನ್ನು ಸಾಹಿತ್ಯ ಸಂಘಟನೆಗಳು ಸಂಘಟಿಬೇಕು.

ಸಾಹಿತ್ಯ ಸಿಂಚನ ಬಳಗದ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟನೆ

ಕನ್ನಡಪ್ರಭ ವಾರ್ತೆ ಶಿರಸಿ

ವಿಭಿನ್ನ ಹಾಗೂ ವಿಶಿಷ್ಟಪೂರ್ಣ ದಾಖಲೆಯಾಗುವ ಕಾರ್ಯಕ್ರಮಗಳನ್ನು ಸಾಹಿತ್ಯ ಸಂಘಟನೆಗಳು ಸಂಘಟಿಬೇಕು ಎಂದು ಹಿರಿಯ ಸಾಹಿತಿ ಆರ್.ಡಿ. ಹೆಗಡೆ ಆಲ್ಮನೆ ಹೇಳಿದರು.ನಗರದ ನೆಮ್ಮದಿ ಕುಟೀರದಲ್ಲಿ ಸಾಹಿತ್ಯ ಸಿಂಚನ ಬಳಗದ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಶಿರಸಿ ಎಂದರೆ ನಮ್ಮ ಜಿಲ್ಲೆಯ ಸಾಂಸ್ಕೃತಿಕ ಕೇಂದ್ರವಾಗಿದ್ದು, ಕಲೆ ಕಾಣುವವನೇ ನಿಜವಾದ ಕವಿ. ಉಪಮಾನದಿಂದ ಕೆಲಸ ಮಾಡುವುದು ಕವಿಗಳ ಕೆಲಸ. ವಿಭಿನ್ನ ಕ್ಷೇತ್ರದಲ್ಲಿ ಕೆಲಸ ಮಾಡುವವರೂ ಸಾಹಿತ್ಯ ಕ್ಷೇತ್ರಕ್ಕೆ ಬರಬೇಕು. ಸಾಧಕರನ್ನು ಗುರುತಿಸಿ ಪ್ರಶಸ್ತಿ ಬಂದಾಗ ಅದನ್ನು ಸ್ವೀಕರಿಸಬೇಕು.‌ ಅಂತಹ ವಿನಯತೆ ಸಾಧಕರಿಗೆ ಇರಬೇಕು. ಕಲೆಯಲ್ಲಿ ತೊಡಗಿಸಿಕೊಂಡರೆ ಅಹಂಕಾರ ಕಡಿಮೆಯಾಗುತ್ತದೆ ಎಂದ ಅವರು, ಸಾಹಿತ್ಯ ಸಿಂಚನ ಬಳಗದ ವತಿಯಿಂದ ಸಾಹಿತ್ಯ ಸಿಂಚನ ಶ್ರೀ ಪ್ರಶಸ್ತಿಯನ್ನು ಮಂಜುನಾಥ ಹೂಡ್ಲಮನೆ ಅವರಿಗೆ ನೀಡಿರುವುದು ಸ್ವಾಗತಾರ್ಹವಾಗಿದೆ ಎಂದರು.ಸಾಹಿತ್ಯ ಸಿಂಚನ ಬಳಗ ಕೊಡಮಾಡುವ ಸಾಹಿತ್ಯ ಸಿಂಚನ ಶ್ರೀ ಪ್ರಶಸ್ತಿಯನ್ನು ಹಿರಿಯ ಸಾಹಿತಿ ಹಾಗೂ ಆಯುರ್ವೇದ ವೈದ್ಯ ಮಂಜುನಾಥ ಹೂಡ್ಲಮನೆ ಅವರಿಗೆ ನೀಡಿ ಗೌರವಿಸಲಾಯಿತು.ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ನಾನು ಸಾಹಿತ್ಯ ಕ್ಷೇತ್ರಕ್ಕೆ ಬರಲು ದತ್ತಗುರು ಕಂಠಿ ಹಾಗೂ ಜಿ.ಎ. ಹೆಗಡೆ ಸೋಂದಾ ಮೂಲ ಕಾರಣ.‌ ಹಲವು ಪುಸ್ತಕಗಳನ್ನು ಬರೆದಿದ್ದೇನೆ. ಸಾಹಿತ್ಯ ಸಿಂಚನ ಬಳಗದವರು ನನಗೆ ಸಾಹಿತ್ಯ ಸಿಂಚನ ಶ್ರೀ ಪ್ರಶಸ್ತಿ ನೀಡಿರುವುದು ಸಂತಸ ತಂದಿದೆ. ಆಯುರ್ವೇದ ಬಳಕೆಯಿಂದ ನಮ್ಮಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.‌ ಹಾಗಾಗಿ ಆಯುರ್ವೇದ ನಾವು ಹೆಚ್ಚಾಗಿ ಬಳಸಬೇಕು ಎಂದರು.ತಾಳಮದ್ದಲೆ ಅರ್ಥಧಾರಿ ಚಂದ್ರಕಲಾ ಭಟ್ ಯಲ್ಲಾಪುರ ಮಾತನಾಡಿ, ಸಾಹಿತ್ಯ ಸಿಂಚನ ಬಳಗದ ವತಿಯಿಂದ ಪ್ರತಿವರ್ಷ ಸಾಧಕರನ್ನು ಗುರುತಿಸಿ ಅವರನ್ನು ಗೌರವಿಸಲಾಗುತ್ತಿದೆ. ಸಾಹಿತ್ಯದಲ್ಲಿ ಕೃಷಿಯೂ ಇದೆ. ಎಲ್ಲವೂ ಇದ್ದರೆ ಮಾತ್ರ ಸಾಹಿತ್ಯವಾಗುತ್ತದೆ. ಎಲ್ಲೇಲ್ಲೋ ಹರಡಿದ ಅಕ್ಷರಗಳನ್ನು ಕೂಡಿಸಿ ಸಮಾಜಕ್ಕೆ ಉತ್ತಮ ಸಂದೇಶ ನೀಡುವುದೇ ಸಾಹಿತ್ಯ. ಆಹಾರದಿಂದ ನಮ್ಮ ಸಾತ್ವಿಕ ಗುಣಗಳು ವೃದ್ಧಿಸಬೇಕು. ಆಹಾರ ಶುದ್ದವಾಗಿದ್ದರೇ ದೇಹ ದೇವಾಲಯವಾಗುತ್ತದೆ. ನಮ್ಮ ಸಂಸ್ಕಾರ ಸಂಸ್ಕೃತಿಯನ್ನು ನಾವು ಉಳಿಸಿ ಬೆಳೆಸಬೇಕಿದೆ ಎಂದರು.ಕಸಾಪ ತಾಲೂಕಾ ಘಟಕದ ಅಧ್ಯಕ್ಷ ಜಿ.ಸುಬ್ರಾಯ ಭಟ್ ಬಕ್ಕಳ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಹಿತ್ಯ ಸಿಂಚನ ವೇದಿಕೆ ಒಳ್ಳೆಯ ಕೆಲಸ ಮಾಡುತ್ತಿದೆ‌. ಮಂಜುನಾಥ ಹೂಡ್ಲಮನೆ ಅವರು ಉತ್ತಮ ವ್ಯಕ್ತಿತ್ವದ ವ್ಯಕ್ತಿ. ಆದರೆ ಅವರ ಕಲೆಗಳನ್ನು ಗುರುತಿಸುವ ಕೆಲಸ ಆಗುತ್ತಿಲ್ಲ. ಪ್ರತಿಭೆಗಳಿಗೆ ಅವಕಾಶಗಳ ಕೊರತೆಯಿದೆ.‌ ಪುಸ್ತಕ ಓದುವವರ ಸಂಖ್ಯೆ ಕಡಿಮೆ ಇದ್ದರೂ ಸಹ ಸಾಹಿತ್ಯಾಸಕ್ತರು ಸಾಕಷ್ಟು ಜನರಿದ್ದಾರೆ. ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು.ಆಗ ಕಿರಿಯ ಸಾಹಿತಿಗಳಿಗೂ ಅವಕಾಶ ಸಿಗುತ್ತದೆ ಎಂದರು.ಪತ್ರಕರ್ತ ರಾಘವೇಂದ್ರ ಬೆಟ್ಟಕೊಪ್ಪ ಸಾಹಿತ್ಯ ಸಿಂಚನ ಬಳಗದ ಕುರಿತು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.ಸಾಹಿತ್ಯ ಸಿಂಚನ ಸಂಸ್ಥಾಪಕ ಶಿವಪ್ರಸಾದ ಹಿರೇಕೈ ಪ್ರಾಸ್ತಾವಿಕವಾಗಿ ಮಾತನಾಡಿದರು.ಸಾಹಿತ್ಯ ಸಿಂಚನ ಬಳಗದ ಸದಸ್ಯರು ಕವನ ವಾಚಿಸಿದರು. ಬಳಗದ ಪ್ರಮುಖರು ಹಾಗೂ ಸದಸ್ಯರು ಇದ್ದರು. ದತ್ತಗುರು ಕಂಠಿ ಸ್ವಾಗತಿಸಿದರು. ನಿಶ್ಚಿತ ಹೆಗಡೆ ಪ್ರಾರ್ಥಿಸಿದರು. ಡಾ. ದಿವ್ಯಾ ಹೆಗಡೆ ಪ್ರಶಸ್ತಿ ಪತ್ರ ವಾಚಿಸಿದರು. ಭವ್ಯ ಹಳೇಯೂರ್ ನಿರೂಪಿಸಿದರು. ನಾಗವೇಣಿ ಹೆಗ್ಗರ್ಸಿಮನೆ ವಂದಿಸಿದರು.

PREV

Recommended Stories

ದೀಪಾವಳಿ ಹಬ್ಬ : ಕೆಎಸ್ಸಾರ್ಟಿಸಿಯಿಂದ 2500 ಹೆಚ್ಚುವರಿ ಬಸ್‌
ಆರೆಸ್ಸೆಸ್‌ ಚಟುವಟಿಕೆ ನಿಷೇಧ ಬಗ್ಗೆ ತಮಿಳುನಾಡು ಮಾದರಿ ಪರಿಶೀಲನೆ : ಸಿದ್ದರಾಮಯ್ಯ